ನೀರುಪೋಲು ಸಾಮಾಜಿಕ ಅಪರಾಧ : ಜಲತಜ್ಞ ಡಾ. ಶ್ರೀ ಪಡ್ರೆ

ಮೂಡಬಿದ್ರೆ: ನೀರಿನ ದುರ್ಬಳಕೆ ಸಾಮಾಜಿಕ ಅಪರಾಧವಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಜೈಲಿಗಟ್ಟುವಂತಹ ಕಠಿಣ ಕಾನೂನು ಬಂದರೂ ಅಚ್ಚರಿ ಇಲ್ಲವೆಂದು ಜಲತಜ್ಞ, ಅಡಿಕೆ ಪತ್ರಿಕೆ ಸಂಪಾದಕ ಡಾ. ಶ್ರೀ ಪಡ್ರೆ ಎಚ್ಚರಿಸಿದ್ದಾರೆ. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್, ಮಾನವಿಕ ಸಂಘ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ಮಳೆ ಕೊಯ್ಲು: ಏನು, ಏಕೆ ಮತ್ತು ಹೇಗೆ” ಎಂಬ ವಿಷಯದ ಕುರಿತು ಮಾತಾನಾಡಿದರು. ನೀರು ಸಮಾಜದ […]

ಉಡುಪಿ: ಚಾಲನಾ ತರಬೇತಿ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದ ಶ್ರೀನರಸಿಂಹತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಮಹಾಸಂಘಗಳ ಒಕ್ಕೂಟದ ವತಿಯಿಂದ ಚಾಲನಾ ತರಬೇತಿಯನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.ಒಕ್ಕೂಟದ ಕಾರ್ಯದರ್ಶಿ ಜಗದೀಶ್ ,ಸರಕಾರದಿಂದ ಸಿಗುವ ಸೌಲಭ್ಯಗಳು ವಿಳಂಬವಾಗುತ್ತಿರುವದರಿಂದ ತಾವೇ ವಿಕಲಚೇತನರಿಗೆ ಉಚಿತವಾಗಿ ತ್ರಿಚಕ್ರವಾಹನದ ತರಬೇತಿಯನ್ನು ನೀಡಿ,ಅವರನ್ನು ಬಾಹ್ಯ ಪ್ರಪಂಚಕ್ಕೆ ಕರೆತರುವಲ್ಲಿ ಸಹಕರಿಸಿ,ಮಾತ್ರವಲ್ಲದೆ ವಾಹನದ ಕಂಪೆನಿಯಿಂದ ತಪಾಸಣೆ ನಡೆಸುವಲ್ಲಿ ಒಕ್ಕೂಟ ಮತ್ತು ಇಲಾಖೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಕಳದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: ಯಾವುದೇ ಭಾಷೆಯ ಬಗ್ಗೆ , ಭಾಷೆಯನ್ನು ಮಾತನಾಡುವ ಜನರು ನಿರಭಿಮಾನ ಬೆಳೆಸಿಕೊಂಡಲ್ಲಿ ಆ ಭಾಷೆಯ ಅಳಿವು ಪ್ರಾರಂಭವಾಗಲಿದೆ  ಆದ್ದರಿಂದ ಜನರು ತಮ್ಮ ತಾವಾಡುವ ಭಾಷೆಯ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕು ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಅವರು ಶನಿವಾರ, ಕಾರ್ಕಳದ ಎಸ್.ವಿ.ಟಿ. ವಿದ್ಯಾಸಂಸ್ಥೆ ಆವರಣದಲ್ಲಿ  ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾಷೆ ಮತ್ತು ಸಂಸ್ಕøತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಭಾಷೆಯ […]

ಫೆ.23 ಕಾರ್ಕಳದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಶಿವರಾತ್ರಿ ಹಬ್ಬದ ಆದ್ಯಾತ್ಮಿಕ ಕಾರ್ಯಕ್ರಮ

ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಆದ್ಯಾತ್ಮಿಕ ಕಾರ್ಯಕ್ರಮವು ಆನೆಕೆರೆಯ ಸದ್ಯೋಜಾತ ಉದ್ಯಾನವನದಲ್ಲಿ 23ರಂದು ಸಂಜೆ 4 ರಿಂದ ಜರಗಲಿದೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಂತರ ವಿದ್ವಾನ್ ರಾಧಕೃಷ್ಣ ನಾವಡರವರ ಶ್ರೀ ನಾಟ್ಯಲಯ ಕಾರ್ಕಳ ಇವರಿಂದ ನೃತ್ಯ ಸಂಜೆ ಭರತನಾಟ್ಯ ಕಾರ್ಯಕ್ರಮ ಜರಗಲಿದೆ. ಸಾರ್ವಜನಿಕರು ಭಾಗವಹಿಸಬೇಕಾಗಿ ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.