ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಆಚರಣೆ

ಕುಂದಾಪುರ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯುಧ ಪೂಜೆಯನ್ನ ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು. ಸಮವಸ್ತ್ರಧಾರಿ ಇಲಾಖೆಯ ಸಿಬ್ಬಂದಿಗಳು ಪೂಜೆಯ ಅಂಗವಾಗಿ ಅಪ್ಪಟ ಭಾರತೀಯ ಶೈಲಿಯ ಉಡುಗೆಯನ್ನ ತೊಟ್ಟು ಗಮನ ಸೆಳೆದರು. ಠಾಣೆ ಸಿಬ್ಬಂದಿಗಳಲ್ಲಿ ಭಾವೈಕ್ಯತೆ ಮೂಡಿಸುವ ಹಾಗೂ ಪರಸ್ಪರ ವಿಶ್ವಾಸ ಹೆಚ್ಚಿಸುವ ಕಲ್ಪನೆಯಲ್ಲಿ ಸಿಬ್ಬಂದಿಗಳು ಒಂದೇ ರೀತಿಯ ಸಮವಸ್ತ್ರ ಧರಿಸುವ ನಿರ್ಧಾರ ಮಾಡಿದ್ದರು. ಠಾಣಾಧಿಕಾರಿ ಹರೀಶ್ ಆರ್ ನಾಯಕ ಸೇರಿದಂತೆ ಎಲ್ಲಾ 60 ಸಿಬ್ಬಂದಿಗಳು ಶುಭ್ರ ವಸ್ತ್ರಾಧಾರಿಗಳಾಗಿದ್ದರು. ಎಎಸ್ ಪಿ ಹರಿರಾಂ ಶಂಕರ, ಸರ್ಕಲ್ ಇನ್ಸ್‌ಪೆಕ್ಟರ್ […]

ಕುಕ್ಕೆಕಟ್ಟೆ: ನೆಲಕ್ಕಪ್ಪಳಿಸಿದ ಸಿಡಿಲು, ಬೆಚ್ಚಿಬಿದ್ದ ಜನ 

ಉಡುಪಿ: ಕುಕ್ಕೆಕಟ್ಟೆ ಸಮೀಪ ಮಂಚಿ ಮೂಲಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ಇಂದು ಸಂಜೆ ಸಿಡಿಲು ಬಡಿದ ಪರಿಣಾಮ ಭೂ ಕಂಪನ ಉಂಟಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಸಂಜೆ 5.50 ರ ಸುಮಾರಿಗೆ ಗುಡುಗು ಸಹಿತ ಮಳೆ ಸುರಿದಿದ್ದು, ಈ ವೇಳೆ ಸಿಡಿಲೊಂದು ಮಾರ್ಗಕ್ಕೆ ಅಪ್ಪಳಿಸಿದೆ. ಇದರಿಂದ ಡಾಂಬರು ರಸ್ತೆ, ನಾಗನ ಕಟ್ಟೆ ಹಾಗೂ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ. ಸಿಡಿಲಿನ ಆರ್ಭಟಕ್ಕೆ ನಾಗನ ಕಟ್ಟೆಯ ಕಲ್ಲು ಜರಿದಿದ್ದು, ಡಾಂಬರು ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಮಾರ್ಗದ ಬದಿಯ ವಿದ್ಯುತ್ ಕಂಬ ಒಂದು […]

ಉಡುಪಿ ಆರ್. ಕೆ. ಗೀತಾಂಜಲಿ ಸಿಲ್ಕ್: ವಿಶೇಷ ರಿಯಾಯಿತಿ ಮಾರಾಟ; ದೀಪಾವಳಿಯ ಪ್ರಯುಕ್ತ ಗ್ರಾಹಕರಿಗೆ ಡಬಲ್ ಬೆನಿಫಿಟ್ಸ್

ಉಡುಪಿ: ಉಡುಪಿಯ ಗೀತಾಂಜಲಿ ರಸ್ತೆಯಲ್ಲಿರುವ ಹೆಸರಾಂತ ವಸ್ತ್ರ ಮಳಿಗೆ ಆರ್ಕೆಸ್ ಅವರ ಗೀತಾಂಜಲಿ ಸಿಲ್ಕ್ ದೀಪಾವಳಿ ಉತ್ಸವ ಮತ್ತು 4ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಅಕ್ಟೋಬರ್ 5ರಿಂದ ವಿಶೇಷ ಮಾರಾಟ ಆಯೋಜಿಸಿದೆ. ದೀಪಾವಳಿಯ ಉತ್ಸವ ಗ್ರಾಹಕರಿಗೆ, ಡಬಲ್ ಬೆನಿಫಿಟ್ಸ್, ನಮ್ಮಲ್ಲಿ ಖರೀದಿಸಿದ ಎಲ್ಲಾ ಉಡುಗೆಗಳಿಗೆ ರಿಯಾಯಿತಿ ಮತ್ತು ಉಡುಗೊರೆಗಳನ್ನು ನೀಡಲಾಗುವುದು. ಗ್ರಾಹಕರಿಗೆ ರಿಯಾಯಿತಿಯೊಂದಿಗೆ ಉಡುಗೊರೆ ಮತ್ತು ಚಿನ್ನದ ನಾಣ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮಳಿಗೆಯ ನೆಲಮಹಡಿಯಲ್ಲಿ ರೇಮಂಡ್ಸ್, ಸಿಯಾರಾಮ್ಸ್ ಕಂಪನಿಗಳ ಸೂಟಿಂಗ್ಸ್, ಶರ್ಟಿಂಗ್ಸ್ ಹಾಗೂ ಎಲ್ಲ […]

ಮಾಳದ ಈ ಯುವ ಕಲಾವಿದನ ಕುಂಚದಲ್ಲಿ ಅರಳೋ ಚಿತ್ರ ನೋಡಿದ್ರೆ ಹುಬ್ಬೇರಿಸ್ತೀರಿ !:

ಈ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳನ್ನು ನೋಡ್ತಾ ಇದ್ರೆ ನೀವು ಮೈಮರೆತು ಬಿಡುತ್ತೀರಿ, ಈ ಕಲಾವಿದನ ಜಾಣ್ಮೆ ಯಿಂದ ಅರಳುವ ಚಿತ್ರ ಬಲು ಚಂದವೋ ಚಂದ. ಇಂತಹ ಬೆರಗಿನ ಚಿತ್ರ ಬಿಡಿಸುವ ದೇಶಿ ಕಲೆಯ ಅಪ್ಪಟ ಕಲಾಕಾರನೇ ಸಂತೋಷ್ ಮಾಳ. ಸಂತೋಷ್ ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ವೃತ್ತಿಯ ಜೊತೆಗೆ ಇವರಿಗೆ ಚಿತ್ರವೂ ಒಂದು ಚಂದದ ಹವ್ಯಾಸ. ತುಳುನಾಡಿನ ಯಕ್ಷಗಾನ, ಜನಪದ, ಗ್ರಾಮೀಣ ಸೊಗಡಿನ  ಚಿತ್ರಗಳು ಇವರ ಕುಂಚದಲ್ಲಿ ಅರಳಿದೆ. ಆ ಎಲ್ಲಾ ಚಿತ್ರಗಳು […]

ಉಡುಪಿ: ಜಿಲ್ಲೆಯಲ್ಲಿ ಶೀಘ್ರವೇ ಬಿಜೆಪಿಯ ಸಾಂಸ್ಥಿಕ ಚುನಾವಣೆ: ಮಟ್ಟಾರ್

ಉಡುಪಿ: ಉಡುಪಿ ಜಿಲ್ಲೆಯ ಆರು ಮಂಡಲ ಹಾಗೂ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೀಘ್ರವೇ ಬಿಜೆಪಿಯ ಸಾಂಸ್ಥಿಕ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಬೂತ್‌ಮಟ್ಟದ ಸಮಿತಿ ರಚನೆ ಕಾರ್ಯ ಶೇ. 85ರಷ್ಟು ಪೂರ್ಣಗೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. 95ರಷ್ಟು ಬೂತ್‌ ಸಮಿತಿ ರಚನೆ ಕಾರ್ಯ ಮುಗಿದಿದ್ದು, ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ಅ. 10ರೊಳಗೆ ಸಮಿತಿ ರಚನೆ ಕಾರ್ಯ ಪೂರ್ಣಗೊಳಿಸಲಾಗುವುದು. ಬಳಿಕ […]