ಕಾರ್ಕಳ: ಸಂಶಯಾಸ್ಪದ ರೀತಿಯಲ್ಲಿ ಜಾನುವಾರುಗಳ ಸಾವು…!

ಕಾರ್ಕಳ : ಸಂಶಯಾಸ್ಪದ ರೀತಿಯಲ್ಲಿ ಜಾನುವಾರು ಮೃತಪಟ್ಟ ಘಟನೆ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಸ್ಥಳೀಯ ಚಿಕ್ಕಬೆಟ್ಟು ನಿವಾಸಿ ಲಲಿತ ಎಂಬವರಿಗೆ ಸೇರಿದ ಒಂದು ಹಸು ಹಟ್ಟಿಯಲ್ಲಿ ಸಾವನ್ನಪ್ಪಿದರೆ, ಇನ್ನೊಂದು ಹಸು ಗಂಭೀರ ಅವಸ್ಥೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದೆ. ಕಳೆದ ಅ.೬ರಂದು ಮನೆಯಿಂದ ಹೊರಗೆ ಮೇಯಲು ಬಿಟ್ಟಿದ್ದರು. ಬಳಿಕ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಷ ಪೂರಿತ ನೀರನ್ನು ಸೇವಿಸಿ ಸಾವನ್ನಪ್ಪಿರಬಹುವುದು ಎನ್ನುವ ಸಂದೇಹವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ?:ವಾದಿರಾಜ ಭಟ್ಟರು ಹೇಳ್ತಾರೆ ಈ ದಿನದ ರಾಶಿ ಭವಿಷ್ಯ

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ ರಾಶಿ ಈ ರಾಶಿಗೆ ಸಪ್ತಮ ಸ್ಥಾನದಲ್ಲಿ ಶುಕ್ರ ಮತ್ತು ಅಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ, ಮನೆಯಲ್ಲಿ ಕುಟುಂಬ ಸದಸ್ಯರ ಮದುವೆ ಕಾರ್ಯ ನೆರವೇರಲಿದೆ. ಮನೆ ಕಟ್ಟುವ ಬಗ್ಗೆ ಚಿಂತನೆ ಮಾಡುವವರಿಗೆ ಶುಭದಾಯಕ. ಹಳೆ ಮನೆಯನ್ನು ನವೀಕರಣ ಬಗ್ಗೆ ಚಿಂತನೆ ಮಾಡುವವರಿಗೆ ಒಳ್ಳೆಯದು. ಜಮೀನಲ್ಲಿ ಹೊಸ ಕಾರ್ಯಗಳನ್ನು ಮಾಡುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಪ್ರೀತಿ-ಪ್ರೇಮ-ಪ್ರಣಯ ಸರಸ ಸಲ್ಲಾಪಗಳಲ್ಲಿ ವೇದನೆ ಅನುಭವಿಸುವಿರಿ. […]

ಡ್ರೀಮ್ಸ್‌ ಕ್ರಿಯೇಷನ್ಸ್‌ ಅರ್ಪಿಸುವ ರಾಕ್ಷಸ ‌ತುಳು ‌ಕಿರುಚಿತ್ರ ಬಿಡುಗಡೆ

ಉಡುಪಿ: ಡ್ರೀಮ್ಸ್‌ ಕ್ರಿಯೇಷನ್ಸ್‌ ಅರ್ಪಿಸುವ ‘ರಾಕ್ಷಸ’ ತುಳು ಕಿರುಚಿತ್ರವನ್ನು ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಪಿಎಸ್‌ಐ ವಾಯ್ಲೆಟ್‌ -ಮಿನಾ ಮಂಗಳವಾರ ಉಡುಪಿಯಲ್ಲಿ ಬಿಡುಗಡೆಗೊಳಿಸಿದರು. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ೨೦ಕ್ಕೂ ಅಧಿಕ ಹವ್ಯಾಸಿ ಕಲಾವಿದರು ಸೇರಿಕೊಂಡು ೨೦೧೫ರಲ್ಲಿ ಡ್ರೀಮ್ಸ್‌ ಕ್ರಿಯೇಷನ್ಸ್‌ ತಂಡವನ್ನು ರಚಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ನರಕಯಾತೆಯನ್ನು ನೋಡಿ ಅತ್ಯಾಚಾರಿಗಳ ರಾಕ್ಷಸತನ ಸುಟ್ಟು ಹೋಗಲಿ ಎಂಬ ಉದ್ದೇಶದಿಂದ ಈ ಕಿರುಚಿತ್ರವನ್ನು ತಯಾರಿಸಿದ್ದೇವೆ ಎಂದು ನಿರ್ದೇಶಕ ಸುಕೇಶ್‌ ಕುಮಾರ್‌ ಹೇಳಿದರು. ಅಕ್ಕ ತಂಗಿ ಸಣ್ಣ ಸಂಸಾರದ […]

50 ವರ್ಷದಿಂದ ನವರಾತ್ರಿ ವೇಷಗಳಿಗೆ ವಿಶೇಷ ಮೆರುಗು ನೀಡುವ 70ರ ಅಜ್ಜಿ.!

ಮಂಗಳೂರು: ನವರಾತ್ರಿ ಸಮಯದಲ್ಲಿ ಅಲ್ಲಲ್ಲಿ ವಿಶೇಷ ವೇಷಧಾರಿಗಳು ಕಾಣೋದು ಮಾಮೂಲಿ. ಆದರೆ,‌ ವಿಶೇಷ ಎಂಬಂತೆ ದಕ್ಷಿಣಕನ್ನಡ ‌ಜಿಲ್ಲೆಯ ವಿಟ್ಲದಲ್ಲಿ ಗದ್ದೆಯಲ್ಲಿ ನಾಟಿಮಾಡಲು ಹೋಗುವ ಅಜ್ಜಿ ವೇಷಧಾರಿಯೋರ್ವರು ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಆದರೆ‌ ಇವರು ನಿಜವಾಗಿ ಅಜ್ಜಿ ಅಲ್ಲ. ಸುಮಾರು 70 ವರ್ಷ ಪ್ರಾಯದ ಗೋವಿಂದ ನಾಯಕ್ ಕೂಜಪ್ಪಾಡಿ ಎಂಬವರೇ ಈ ಅಜ್ಜಿ ವೇಷಧಾರಿ. ಸುಮಾರು 50 ವರ್ಷದಿಂದ  ನವರಾತ್ರಿ ಶಾರದಾ ಪ್ರತಿಷ್ಠಾ ದಿನದಿಂದ ಆರಂಭಿಸಿ ವಿಸರ್ಜನೆ ವರೆಗೆ, ಈ ರೀತಿಯ ವೇಷ ಹಾಕಿ ತಿರುಗಾಡುತ್ತಾರೆ. ಇವರು ಭಕ್ತರು […]

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಕಾರ್ಯಾಲಯ ಉದ್ಘಾಟನೆ

ಉಡುಪಿ: ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ, ಉಡುಪಿ ಶ್ರೀಕೃಷ್ಣ ಮಠದ ಆವರಣದ ಶ್ರೀರಾಮಧಾಮದಲ್ಲಿ 2019 ದಶಂಬರ 13 ,14 ,15 ರಂದು ನಡೆಯಲಿರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಕಾರ್ಯಾಲಯವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥಶ್ರೀಪಾದರು ಉದ್ಘಾಟನೆ ಮಾಡಿದರು. ತುಳು ಶಿವಳ್ಳಿ ಸಂಸ್ಕೃತಿಯನ್ನು ಜಗದಗಲಕೆ ಪರಿಚಯಿಸುವ ಈ ಸಮ್ಮೇಳನದಲ್ಲಿ ದೇಶ ವಿದೇಶಗಳಲ್ಲಿರುವ ಶಿವಳ್ಳಿ ಬ್ರಾಹ್ಮಣರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಶ್ರೀಗಳು ತಿಳಿಸಿದರು. ಸಮ್ಮೇಳನದ ರೂಪುರೇಷೆಯನ್ನು ಕೆ ಬಾಲಕೃಷ್ಣ ಮಡಮಂತ್ತಾಯ  ತಿಳಿಸಿದರು. […]