ದುಬಾರಿ ಟ್ರಾಫಿಕ್ ದಂಡ ಇಳಿಕೆ: ಯಾವುದಕ್ಕೆ ಎಷ್ಟು ದಂಡ?

ಬೆಂಗಳೂರು, ಸೆ. 21: ನೂತನ ಕೇಂದ್ರ ಮೋಟಾರು ವಾಹನ‌ ಕಾಯ್ದೆ ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಕೊನೆಗೂ ಇಳಿಸಲಾಗಿದೆ. ಸಂಚಾರ ಉಲ್ಲಂಘನೆಗೆ ವಿಧಿಸಲಾಗುವ ದುಬಾರಿ ದಂಡದ ಪ್ರಮಾಣವನ್ನು ಇಳಿಕೆ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿದ್ದರೂ ಅಧಿಕೃತ ಆದೇಶ ಬಂದಿರಲಿಲ್ಲ. ಈ ಬಗ್ಗೆ ಸೆ. 21 ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ಪರಿಷ್ಕರಿಸಿದ್ದು, ನೂತನದ ದಂಡದ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ದಂಡ ಭಯಕ್ಕೆ ಒಳಗಾಗಿದ್ದ […]

ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ಮತ್ತು ಹಲ್ಲೆ ಪ್ರಕರಣ:ಬೃಹತ್ ಪ್ರತಿಭಟನೆ

ಮಂಗಳೂರು:  ಕಡಬ ತಾಲೂಕು ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೊಕೇಶ್ ಎಂಬವರ ಮೇಲೆ ಅರಣ್ಯಾಧಿಕಾರಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ನೀತಿ ತಂಡದ ನೇತೃತ್ವದಲ್ಲಿ ಸುಬ್ರಹ್ಮಣ್ಯ ಸಮೀಪ ಕೆಂಜಳದ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಕೆಲವು ದಿನಗಳ ಹಿಂದೆ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ನಡೆದಿತ್ತು, ಈ ಮರಗಳನ್ನು ಲೋಕೇಶ್ ಎಂಬವರು ಕಳವು ನಡೆಸಿದ್ದಾರೆಂದು ಆರೋಪಿಸಿ ಲೋಕೇಶ್ ಅವರನ್ನು ಅರಣ್ಯಧಿಕಾರಿಗಳು ಬಂಧಿಸಿ, […]

ಉಡುಪಿ: ನೋ ಪಾರ್ಕಿಂಗ್ ವ್ಯವಸ್ಥೆ ಕ್ರಮಬದ್ಧಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಉಡುಪಿ-ಮಣಿಪಾಲದಲ್ಲಿ ಪಾರ್ಕಿಂಗ್  ಮತ್ತು ಸಂಚಾರ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್  ವ್ಯವಸ್ಥೆಯನ್ನು ಕ್ರಮಬದ್ದಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಹಲವೆಡೆ ರಸ್ತೆ ಬದಿಯಲ್ಲಿಯೇ ವಾಹನಗಳ ಪಾರ್ಕಿಂಗ್ನಿಂದಾಗಿ ಪಾದಾಚಾರಿಗಳಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ವಾಹನಗಳ ಪಾರ್ಕಿಂಗ್ ಸೂಕ್ತ ಸ್ಥಳಾವಕಾಶ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿಯ […]

ಬೀಚ್ ಸ್ವಚ್ಛತೆಯ ಮೂಲಕ ಪ್ರವಾಸೋದ್ಯಮ ಅಭಿವೃದ್ದಿ- ಉಡುಪಿ ಡಿಸಿ

ಉಡುಪಿ: ಬೀಚ್‍ಗಳನ್ನು ಸ್ವಚ್ಛವಾಗಿಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮವನ್ನು ಉತ್ತಮ ರೀತಿಯಲ್ಲಿ ಅಭಿವೃದ್ದಿಪಡಿಸಲು ಸಾದ್ಯ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಅವರು ಶನಿವಾರ, ಕರಾವಳಿ ಕಾವಲು ಪೊಲೀಸ್ ವತಿಯಿಂದ, ಮಲ್ಪೆ ಬೀಚ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಬೀಚ್ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೀಚ್‍ಗಳು ಸ್ವಚ್ಛವಾಗಿದ್ದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ದಿಗೊಳ್ಳಲಿದ್ದು, ಸ್ಥಳೀಯರಿಗೆ ಹೆಚ್ಚಿನ ಆರ್ಥಿಕ ಅಭಿವೃದ್ದಿಯೂ ಸಾಧ್ಯ, ಅಲ್ಲದೇ ಸಚ್ಛವಾಗಿರುವ ಕಡೆಯಲ್ಲಿ ಯಾರೂ ಸಹ ತ್ಯಾಜ್ಯ ಎಸೆಯಲು ಇಚ್ಚಿಸುವುದಿಲ್ಲ, ಸಮುದ್ರ […]

ಕುಂದಾಪುರ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತರ ವಿವಿಧ ಸಮಸ್ಯೆಗಳ ಪ್ರಸ್ತಾಪ

ಕುಂದಾಪುರ: ತಮಗಾದ ಅನ್ಯಾಯಗಳನ್ನು ಹೇಳಿಕೊಂಡು ಪರಿಹಾರ ಪಡೆಯಲು ಪೊಲೀಸ್ ಠಾಣೆಗೆ ಬರುವ ದಲಿತರಿಗೆ ಉತ್ತಮ ಮಾಹಿತಿ ನೀಡಿ ಅವರ ಸಮಸ್ಯೆ ಪರಿಹಾರ ಮಾಡಬೇಕು ಹೊರತು ಅವರನ್ನು ಬೆದರಿಸುವ ಕಾರ್ಯವಾಗಬಾರದು. ಕುಂದಾಪುರ ಪೊಲೀಸ್ ಉಪವಿಭಾಗದ ಕೆಲವು ಪೊಲೀಸ್ ಠಾಣೆಯಲ್ಲಿ ಇಂತಹ ಕೆಲಸಗಳಾಗಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ದಲಿತ ಮುಖಂಡ ಉದಯ್ ಕುಮಾರ್ ತಲ್ಲೂರು ಹೇಳಿದರು. ಕುಂದಾಪುರದಲ್ಲಿನ ಅಂಬೇಡ್ಕರ್ ಭವನದಲ್ಲಿ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಅವರು […]