ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಶ್ರೇಯಾ ಆಚಾರ್ಯ ಪ್ರಥಮ

ಉಡುಪಿ:  ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಮೈಸೂರಿನ  ನಾದಬ್ರಹ್ಮ ಆಡಿಟೋರಿಯಂನಲ್ಲಿ  ಸೆಪ್ಟೆಂಬರ್ 14 ಶನಿವಾರದಂದು ಏರ್ಪಡಿಸಿದ್ದ “ಶ್ರೀ ದುರ್ಗಾ ನೃತ್ಯೋತ್ಸವ-2019” ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಕೋಟೇಶ್ವರ ಹೊದ್ರೋಳಿಯ ಕುಮಾರಿ ಶ್ರೇಯಾ ಆಚಾರ್ಯ ಸಬ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು “ಶ್ರೀ ದುರ್ಗಾ ನಾಟ್ಯ ಮಯೂರಿ-2019” ಎಂಬ ಬಿರುದಿಗೆ ಪಾತ್ರಳಾಗಿದ್ದಾರೆ. ತಮ್ಮ ಚೊಚ್ಚಲ ಪ್ರದರ್ಶನದಲ್ಲಿಯೇ ಪ್ರಥಮ ಬಹುಮಾನ ಪಡೆದ ಕುಮಾರಿ ಶ್ರೇಯಾ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಗುರು ವಿದುಷಿ ಪ್ರವಿತಾ ಅಶೋಕ್ […]

ಮುನಿಯಾಲು ಉದಯಕುಮಾರ ಶೆಟ್ಟಿ ಅವರಿಗೆ ಎಕನಾಮಿಕ್ ಟೈಮ್ಸ್- ಬಿಸಿನೆಸ್ ಐಕಾನ್ ಪ್ರಶಸ್ತಿ

ಉಡುಪಿ: 2019 ಸಾಲಿನ ಕೈಗಾರಿಕಾ ಮತ್ತು ಕಲ್ಯಾಣ ಕಾರ್ಯಗಳಲ್ಲಿ ಮಹತ್ವದ ಕೊಡುಗೆಗಾಗಿ ಉದ್ಯಮಿ ಮುನಿಯಾಲು ಉದಯಕುಮಾರ ಶೆಟ್ಟಿ ಉಡುಪಿ ಜಿಲ್ಲೆಯಿಂದ ಪ್ರತಿಷ್ಠಿತ ‘ಎಕನಾಮಿಕ್ ಟೈಮ್ಸ್ ಮತ್ತು ಬಿಸಿನೆಸ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ. ಸೆಪ್ಟೆಂಬರ್ 19 ರ ಗುರುವಾರ ಬೆಂಗಳೂರಿನ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಬಾಲಿವುಡ್ ನಟಿ ರವೀನಾ ಟಂಡನ್‌ ಸ್ಟಾರ್ ಸ್ಟಡ್ಡ್ ನಲ್ಲಿ ಮುನಿಯಾಲ್ ಅವರಿಗೆ ಪ್ರಶಸ್ತಿ ನೀಡಿದರು. ಉದಯ್ ಶೆಟ್ಟಿ ಉಡುಪಿ ಜಿಲ್ಲೆಯಿಂದ ಪ್ರತಿಷ್ಠಿತ ‘ಎಕನಾಮಿಕ್ ಟೈಮ್ಸ್ ಮತ್ತು ಬಿಸಿನೆಸ್ ಐಕಾನ್ ಪ್ರಶಸ್ತಿ […]

ಸೆ. 24ರಿಂದ 26: ಉಡುಪಿಯಲ್ಲಿ ‘ರಂಗತೇರು’ ನಾಟಕೋತ್ಸವ

ಉಡುಪಿ: ರಂಗಭೂಮಿ ಉಡುಪಿ ಹಾಗೂ ರಂಗಾಯಣ ಶಿವಮೊಗ್ಗದ ಸಂಯುಕ್ತ ಆಶ್ರಯದಲ್ಲಿ ‘ರಂಗತೇರು’ ನಾಟಕೋತ್ಸವ ಸೆ. 24ರಿಂದ 26ರ ವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು. ಸೆ. 24ರಂದು ಸಂಜೆ 6ಗಂಟೆಗೆ ಉದಯಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಕೆ.ಉದಯಕುಮಾರ್‌ ಶೆಟ್ಟಿ, ನಾಟಕೋತ್ಸವಕ್ಕೆ ಚಾಲನೆ ನೀಡುವರು. ಹಿರಿಯ ಸಂಗೀತ ವಿದ್ವಾಂಸ ಟಿ. ರಂಗ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ […]