ದುಬಾರಿ ಟ್ರಾಫಿಕ್ ದಂಡ ಇಳಿಕೆ: ಯಾವುದಕ್ಕೆ ಎಷ್ಟು ದಂಡ?

ಬೆಂಗಳೂರು, ಸೆ. 21: ನೂತನ ಕೇಂದ್ರ ಮೋಟಾರು ವಾಹನ‌ ಕಾಯ್ದೆ ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಕೊನೆಗೂ ಇಳಿಸಲಾಗಿದೆ.

ಸಂಚಾರ ಉಲ್ಲಂಘನೆಗೆ ವಿಧಿಸಲಾಗುವ ದುಬಾರಿ ದಂಡದ ಪ್ರಮಾಣವನ್ನು ಇಳಿಕೆ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿದ್ದರೂ ಅಧಿಕೃತ ಆದೇಶ ಬಂದಿರಲಿಲ್ಲ. ಈ ಬಗ್ಗೆ ಸೆ. 21 ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ಪರಿಷ್ಕರಿಸಿದ್ದು, ನೂತನದ ದಂಡದ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ದಂಡ ಭಯಕ್ಕೆ ಒಳಗಾಗಿದ್ದ ವಾಹನ ಸವಾರರಿಗೆ ಕೊಂಚ ನೆಮ್ಮದಿ​ ಸಿಕ್ಕಂತಾಗಿದೆ.

ಪರಿಷ್ಕೃತ ದಂಡದ ವಿವರ ಈ ಕೆಳಗಿನಂತಿದೆ.

ಹಳೆ ದಂಡ ಮತ್ತು ಹೊಸ ದಂಡದ ವಿವರ
1.ಹೆಲ್ಮೆಟ್ ಹಾಕದಿದ್ದರೆ 1000ದಿಂದ 500 ರೂ.ಗೆ ಇಳಿಕೆ.
2.ಸೀಟ್ ಬೆಲ್ಟ್ 1000ದಿಂದ 500ರೂ.ಗೆ ಇಳಿಕೆ.
3.ಲೈಸೆನ್ಸ್ ಇಲ್ಲದಿದ್ದರೆ 5000ದಿಂದ 1000ರೂ.ಗೆ ಇಳಿಕೆ.
4.ಮೊಬೈಲ್ ಬಳಕೆ 10000ದಿಂದ 500ರೂ.ಗೆ ಇಳಿಕೆ.
5.ಡ್ರೀಂಕ್ & ಡ್ರೈವ್  10000 ಇದನ್ನು ಇಳಿಕೆ ಮಾಡಿಲ್ಲ.
6.ಅಂಬ್ಯುಲೆನ್ಸ್ ದಾರಿ ಬಿಡದಿದ್ದರೆ  10000ದಿಂದ 1000ರೂ.ಗೆ ಇಳಿಕೆ.
7.ಅತಿವೇಗ 5000 ರೂ. ದಂಡ ಇಳಿಕೆ ಇಲ್ಲ.