ಕಾರ್ಕಳದಲ್ಲಿ ಗೃಹಪ್ರವೇಶಕ್ಕೆ ಸಸಿ ವಿತರಣೆ

ಕಾರ್ಕಳ : ನಗರದ ಆನೆಕೆರೆಯ ಆರ್. ಮೋಹನಕೃಷ್ಣ ಪ್ರಭು ಅವರ ಪಾಂಡುರಂಗ ನಿವಾಸ ಗೃಹಪ್ರವೇಶಕ್ಕೆ ಆಗಮಿಸಿದವರಿಗೆ ವಿವಿಧ ಜಾತಿ ಹೂ ಗಿಡಗಳು, ಹಣ್ಣಿನ ಗಿಡಗಳು, ಮಲ್ಲಿಗೆ, ಕಣಗಿಲೆ, ದಾಸವಾಳ, ನಂದಿಬಟ್ಟಲು, ಸಾಗುವಾನಿ, ನೇರಳೆ, ಪೇರಳೆ, ದಾಳಿಂಬೆ, ಬಿರುಂಡಿ, ಹಲಸು, ಹೆಬ್ಬಲಸು, ಸೀತಾಫಲ, ಕಹಿಬೇವು, ಕರಿಬೇವು, ಇತ್ಯಾದಿ ಗಿಡಗಳನ್ನು ವಿತರಿಸಲಾಯಿತು.ಆ ಮೂಲಕ ಕಾರ್ಯಕ್ರಮ ಪರಿಸರ ಪ್ರೇಮಕ್ಕೆ ಸಾಕ್ಷಿಯಾಯಿತು.

ನಿಯಮ ಉಲ್ಲಂಘನೆ ವಾಹನ ಚಾಲಕರ ಲೈಸೆನ್ಸ್ ರದ್ದತಿಗೆ ಪ್ರಸ್ಥಾವನೆ,  ಸರಕು ಸಾಗಾಟ ವಾಹನದಲ್ಲಿ ಮಾನವ ಸಾಗಾಟ

ಉಡುಪಿ: ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಶಾಲಾ ಮಕ್ಕಳನ್ನು ಸಾಗಿಸುತಿದ್ದ 51 ಶಾಲಾ ವಾಹನ, ಮಾನವರನ್ನು ಸಾಗಿಸುತಿದ್ದ 100 ಸರಕು ಸಾಗಾಟ ವಾಹನಗಳ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗಿದ್ದು, ಮೂರು ತಿಂಗಳಮಟ್ಟಿಗೆ ಚಾಲಕರ ಪರವಾನಿಗೆ ಲೈಸೆನ್ಸ್ ರದ್ಧತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್‌ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಸಾರ್ವಜನಿಕರು‌ ಮನವಿ ಮಾಡಿದರು. ರಿಕ್ಷಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ […]

ಬಂಟ್ವಾಳ :ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ : ಎನ್ನೆಸ್ಸೆಸ್, ವಿದ್ಯಾರ್ಥಿ ಸಂಘ ಉದ್ಘಾಟನೆ

ಬಂಟ್ವಾಳ :ತಾಲೂಕು ಉಳಿ ಕಕ್ಯಪದವು ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಈ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆ ಜು.12 ರಂದು ನಡೆಯಿತು.ಕಿಟ್ಟೆಲ್ ಮೆಮೊರಿಯಲ್ ಪದವಿ ಪೂರ್ವ ಕಾಲೇಜು, ಗೋರಿಗುಡ್ಡೆ ಇಲ್ಲಿನ ಪ್ರಾಂಶುಪಾಲರಾದ ವಿಠಲ್ ಎ, ಅವರು ಕಾರ್ಯಕ್ರಮ ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ  ಸರಕಾರಿ ಪದವಿ ಪೂರ್ವ ಕಾಲೇಜು, ಪೂಂಜಾಲಕಟ್ಟೆ ಇಲ್ಲಿನ ಉಪನ್ಯಾಸಕರಾದ ಶೀನಾ ನಾಡೋಳಿ, ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ಬೆಳವಣಿಗೆಯ ಸಾಧ್ಯತೆಯನ್ನು ತಿಳಿಸಿದರು.ಸಂಸ್ಥೆಯ ಪ್ರಾಂಶುಪಾಲರಾದ […]

ಅಲ್ಪಸಂಖ್ಯಾತ, ಪ್ರಗತಿಪರ ಒಕ್ಕೂಟಗಳಿಂದ ಉಡುಪಿಯಲ್ಲಿ ಪ್ರತಿಭಟನೆ 

ಉಡುಪಿ: ದೇಶದಲ್ಲಿ ದೇಶ ವಿರೋಧಿ, ಸಂವಿಧಾನ ವಿರೋಧಿ, ಗುಂಪು ಹಿಂಸೆ ಹಾಗೂ ಹತ್ಯೆಗಳನ್ನು ಖಂಡಿಸಿ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಉಡುಪಿ ಇದರ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಚೌಕಿಯ ಎದುರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ಸಭೆ ನಡೆಯಿತು. ಚಿತಂಕ ಕೆ. ಫಣಿರಾಜ್‌ ಮಾತನಾಡಿ, ದೇಶದಲ್ಲಿ ಗುಂಪು ಹಲ್ಲೆ ಹಾಗೂ ಹತ್ಯೆಗಳನ್ನು ಮಾಡುವ ಮೂಲಕ ಸಂವಿಧಾನವನ್ನು ನಿಷ್ಕ್ರೀಯಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಅದಕ್ಕೆ ಕೋಮುವಾದಿ ರಾಜಕೀಯವೇ ಪ್ರಮುಖ ಕಾರಣ. 2015ರಿಂದ ಈಚೆಗೆ ದೇಶದಲ್ಲಿ 95 […]

ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ

ಮಂಗಳೂರು: ಮಂಗಳೂರಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ ನಡೆಸಿ‌ ಬಂಧಿಸಿದ್ದಾರೆ. ಸಂತೋಷ್, ಜೀವನ್ ಕುಮಾರ್, ನಿಶಾಂತ್, ಬಂಧಿತರು. ಬಂಧಿತರಿಂದ ಒಟ್ಟು 1. 40 ಸಾವಿರ ರೂ. ಹಣ, 6 ಮೊಬೈಲ್, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.