ಬಂಟ್ವಾಳ :ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ : ಎನ್ನೆಸ್ಸೆಸ್, ವಿದ್ಯಾರ್ಥಿ ಸಂಘ ಉದ್ಘಾಟನೆ

ಬಂಟ್ವಾಳ :ತಾಲೂಕು ಉಳಿ ಕಕ್ಯಪದವು ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಈ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆ ಜು.12 ರಂದು ನಡೆಯಿತು.
ಕಿಟ್ಟೆಲ್ ಮೆಮೊರಿಯಲ್ ಪದವಿ ಪೂರ್ವ ಕಾಲೇಜು, ಗೋರಿಗುಡ್ಡೆ ಇಲ್ಲಿನ ಪ್ರಾಂಶುಪಾಲರಾದ ವಿಠಲ್ ಎ, ಅವರು ಕಾರ್ಯಕ್ರಮ ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ  ಸರಕಾರಿ ಪದವಿ ಪೂರ್ವ ಕಾಲೇಜು, ಪೂಂಜಾಲಕಟ್ಟೆ ಇಲ್ಲಿನ ಉಪನ್ಯಾಸಕರಾದ ಶೀನಾ ನಾಡೋಳಿ, ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ಬೆಳವಣಿಗೆಯ ಸಾಧ್ಯತೆಯನ್ನು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಪ್ರವೀಣ್ ಎ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯವನ್ನು ಎನ್.ಎಸ್.ಎಸ್. ಮಾಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ವಿಶ್ವನಾಥ ಸಾಲಿಯಾನ್ ಬಿತ್ತ, ಉದ್ಯಮಿಗಳು ಹಾಗೂ ಮಾಲಕರು ಬಿತ್ತ ಕಾಂಪ್ಲೆಕ್ಸ್, ಅತಿಥಿಯಾಗಿ  ನಿಶಾ ಬಿ, ಮುಖ್ಯಶಿಕ್ಷಕರು, ವಿಜಯಾ ಕೆ, ಸಹಮುಖ್ಯಶಿಕ್ಷಕರು ಎಲ್.ಸಿ.ಆರ್. ಇಂಡಿಯನ್ ಸ್ಕೂಲ್, ರಾ.ಸೇ.ಯೋ.ಘಟಕದ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವರಾಜ್ ಗಟ್ಟಿ, ಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ಸಹ ಯೋಜನಾಧಿಕಾರಿ  ವಿಂದ್ಯಾಶ್ರೀ, ಘಟಕದ ನಾಯಕ ಧನ್‌ರಾಜ್, ಘಟಕದ ನಾಯಕಿ ಅನ್ವಿತಾ ಬಿ, ವಿದ್ಯಾರ್ಥಿ ಸಂಘದ ನಾಯಕರುಗಳಾದ ಸ್ಪಂದನ್, ಜಹಫರ್ ಸಾಧಿಕ್, ಜನಾರ್ಧನ ಕುಲಾಲ್, ಶಹಿನಾಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಕ್ಬರ್ ಆಲಿ, ಸಹಶಿಕ್ಷಕರು, ಉಳಿಬೈಲು ಇವರ ವತಿಯಿಂದ ಶೈಕ್ಷಣಿಕ ವರ್ಷದ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ಸಾಧಕರಿಗೆ ಬಹುಮಾನ ವಿತರಿಸಲಾಯಿತು.
 ರಾಷ್ಟ್ರೀಯ ಸೇವಾ ಘಟಕದ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವರಾಜ್ ಗಟ್ಟಿ  ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರವೀಣ್ ಎ ವಿದ್ಯಾರ್ಥಿ ಸಂಘದ ಪ್ರತಿಜ್ಞಾ ವಿಧಿ ಬೋಧಿಸಿ, ಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ಸಹ ಯೋಜನಾಧಿಕಾರಿ ವಿಂದ್ಯಾಶ್ರೀ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿಯರಾದ ದಿವ್ಯಶ್ರೀ ಹಾಗೂ  ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.