ಮಕ್ಕಳ ರಕ್ಷಣಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ
ಉಡುಪಿ, ಜುಲೈ 6: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಕಚೇರಿಯಲ್ಲಿ ಖಾಲಿ ಇರುವ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ) ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ ಮತ್ತು ಅನುಭವ: ಎಮ್.ಎಸ್.ಡಬ್ಲ್ಯೂ/ ಸೋಶಿಯೋಲಾಜಿ/ ಮನಃಶಾಸ್ತ್ರ/ ಸಮುದಾಯ ಅಭಿವೃದ್ದಿ, ಮಹಿಳಾ ಅಧ್ಯಯನ, ಗೃಹ ವಿಜ್ಞಾನ ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುರಿತು ಕನಿಷ್ಟ 3 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವಲ್ಲಿ ಹಾಗೂ ಬರೆಯುವಲ್ಲಿ […]
ಜಿಲ್ಲೆಯಲ್ಲಿ ಟ್ರಾನ್ಸ್ ಜೆಂಡರ್ಸ್ ನೊಂದಣಿ ಅಭಿಯಾನ: ಜಿಲ್ಲಾಧಿಕಾರಿ
ಉಡುಪಿ, ಜುಲೈ 6: ಉಡುಪಿ ಜಿಲ್ಲೆಯಲ್ಲಿರುವ ಟ್ರಾನ್ಸ್ ಜೆಂಡರ್ಸ್‍ಗಳಿಗೆ ಸರಕಾರದ ವಿವಿಧ ಸೌಲಭ್ಯ ನೀಡುವ ನಿಟ್ಟಿನಲ್ಲಿ ಅವರ ನಿಖರ ಸಂಖ್ಯೆ ಇಲ್ಲದ ಕಾರಣ, ಜಿಲ್ಲೆಯಲ್ಲಿನ ಟ್ರಾನ್ಸ್ ಜೆಂಡರ್ಸ್‍ಗಳನ್ನು ನೊಂದಣಿ ಮಾಡಿ, ಅವರಿಗೆ ಗುರುತಿನ ಚೀಟಿ ವಿತರಿಸಲು ವಿಶೇಷ ನೊಂದಣಿ ಅಭಿಯಾನ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲಾ ಮಟ್ಟದ ಟ್ರಾನ್ಸ್ ಜೆಂಡರ್ಸ್ ಸಮನ್ವಯ ಸಮಿತಿ/ಕೋಶ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 282 ಮಂದಿ […]
ರಾಷ್ಟ್ರೀಕೃತ ಬ್ಯಾಂಕ್ ವಿಲೀನ ಸಹಕಾರಿ ಕ್ಷೇತ್ರದ ಮೇಲೆ ಪರಿಣಾಮ ಬೀರಲ್ಲ: ಜಿ.ಆರ್. ಪ್ರಸಾದ್
ಉಡುಪಿ: ಸಹಕಾರ ಕ್ಷೇತ್ರದ ವಾತಾವರಣ ಸದ್ಯ ವಿಷಮ ಸ್ಥಿತಿಯಲ್ಲಿದ್ದು, ಅದನ್ನು ಉತ್ತಮವಾಗಿ ನಡೆಸಲು ಪ್ರೇರೇಪಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯೂ ಸಹಕಾರಿ ಕ್ಷೇತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಂಗಳೂರಿನ ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಆರ್. ಪ್ರಸಾದ್ ಹೇಳಿದರು. ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ಮತ್ತು ಬೆಳಗಾವಿಯ ಫಾರ್ಚೂನ್ ಇನೋಸರ್ವ್ ಪ್ರೈ.ಲಿ. ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದ ಡಯಾನ ಹೋಟೆಲ್‌ನ ಸಭಾಂಗಣದಲ್ಲಿ ಶನಿವಾರ ನಡೆದ ಸಹಕಾರಿ ಕ್ಷೇತ್ರ ಸಂವರ್ಧನೆಯಿಂದ ಸಮೃದ್ಧಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ […]
ಮೈತ್ರಿ ಸರಕಾರ ಉರುಳಿಸಿದ್ದೇ ಸಿದ್ದರಾಮಯ್ಯ: ಶೋಭಾ
ಉಡುಪಿ: ಮೈತ್ರಿ ಸರಕಾರದ ಆಂತರಿಕ ಗೊಂದಲ ಬಹಿರಂಗವಾಗಿದ್ದು, ಸಿದ್ದರಾಮಯ್ಯ, ಪರಮೇಶ್ವರ್ ಒಳ ಜಗಳ ಈ ಬೆಳವಣಿಗೆಗೆ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟಿದ್ದಾರೆ. ಸರಕಾರ ಬೀಳೋಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು. ಆಂತರಿಕ ಜಗಳ ಹೆಚ್ಚು ಮಾಡಿದ್ದೇ ಸಿದ್ದರಾಮಯ್ಯ ಮೋದಿ ಯಡಿಯೂರಪ್ಪ ಅವರ ಕಡೆ ಕೈ ತೋರಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. […]
ಹೊಟ್ಟೆ ತುಂಬಾ ತಿನ್ನಿ ಮೊಟ್ಟೆ ಪರೋಟ : ಭಾರೀ ಟೇಸ್ಟ್ ಉಂಟು, ಮಾಡೋ ಸುಲಭ ವಿಧಾನ ಇಲ್ಲುಂಟು
ಎಗ್ ಪರೋಟ ಹೇಗ್ ಮಾಡೋದು?ಮೊದಲು ಚಪಾತಿಯನ್ನು ಬೇಯಿಸಿ. ಸಜ್ವಾನ್ ಚಟ್ನಿಯನ್ನು ಚಪಾತಿಯ ಮೇಲೆ ಲೇಪಿಸಿ ನಾಲ್ಕು ಬದಿಯನ್ನು ಫೋಲ್ಡ್ ಮಾಡಿರಿ . ಇದನ್ನು ಕಾವಲಿಯ ಮೇಲೆ ಇಟ್ಟು ಒಂದು ಹಸಿ ಮೊಟ್ಟೆಯನ್ನು ಹಾಕಿರಿ. ಅದರ ಮೇಲೆ ಸ್ವಲ್ಪ ಈರುಳ್ಳಿ , ಸ್ವಲ್ಪ ಟೊಮೆಟೊ ,ಹಸಿ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಈರುಳ್ಳಿ ಉಪ್ಪು ಪೆಪ್ಪರ್ ಪೌಡರ್ನ್ನು ಹಾಕಿ ಮುಚ್ಚಿರಿ. ಗ್ಯಾಸ್ಸ್ಟವ್ ಸಿಮ್ನಲ್ಲಿಟ್ಟು ಐದು ನಿಮಿಷ ಬೇಯಿಸಿರಿ. ಎಗ್ ಪರೋಟ ಸವಿಯಲು ಸಿದ್ಧ -ಡಾ.ಹರ್ಷಾ ಕಾಮತ್