ಮೈತ್ರಿ ಸರಕಾರ ಉರುಳಿಸಿದ್ದೇ ಸಿದ್ದರಾಮಯ್ಯ: ಶೋಭಾ

ಉಡುಪಿ: ಮೈತ್ರಿ ಸರಕಾರದ ಆಂತರಿಕ ಗೊಂದಲ ಬಹಿರಂಗವಾಗಿದ್ದು, ಸಿದ್ದರಾಮಯ್ಯ, ಪರಮೇಶ್ವರ್ ಒಳ ಜಗಳ ಈ ಬೆಳವಣಿಗೆಗೆ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟಿದ್ದಾರೆ. ಸರಕಾರ ಬೀಳೋಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು. ಆಂತರಿಕ ಜಗಳ ಹೆಚ್ಚು ಮಾಡಿದ್ದೇ ಸಿದ್ದರಾಮಯ್ಯ ಮೋದಿ ಯಡಿಯೂರಪ್ಪ ಅವರ ಕಡೆ ಕೈ ತೋರಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.‌
ಬೇರೆ ಪಕ್ಷದ ಸದಸ್ಯರಲ್ಲದವರು ಬಿಜೆಪಿಗೆ ಬರಬಹುದು. ರಾಜೀನಾಮೆ ಸ್ವೀಕಾರವಾದ ಮೇಲೆ ಯಾರೂ ಬಿಜೆಪಿಗೆ ಸೇರಬಹುದು. ಸದ್ಯ ರಾಜಿನಾಮೆ ಕೊಟ್ಟವರು ಬಿಜೆಪಿ ಸಂಪರ್ಕದಲ್ಲಿ ಇಲ್ಲ ಎಂದರು.
ಬರಗಾಲ ಇದ್ದಾಗಲೇ ಸಿಎಂ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಉಡುಪಿಯಲ್ಲಿ ಸಿಎಂ ಮಸಾಜ್ ಮಾಡಿಸಿದರು. ಗ್ರಾಮ ವಾಸ್ತವ್ಯದ ನಾಟಕವಾಡಿ ಅಮೇರಿಕಾಕ್ಕೆ ತೆರಳಿದ್ದಾರೆ.
ಸಿಎಂ ವಾಪಾಸ್ಸಾಗುವಾಗ ಕಾಂಗ್ರೆಸ್ ಯಾವ ನಾಟಕ ಆಡುತ್ತೋ ನೋಡಬೇಕು. ರಾಜ್ಯದ ಬೆಳವಣಿಗೆಯನ್ನು ರಾಜ್ಯಪಾಲರು ಗಮನಿಸಬೇಕು. 15 ಜನ ರಾಜೀನಾಮೆ ಕೊಟ್ಟರೆ ಸರಕಾರಕ್ಕೆ ಬಹುಮತ ಇಲ್ಲ ಎಂದರು.
ಬಿಜೆಪಿ ಸಿದ್ಧಾಂತ:
ಮೋದಿಯನ್ನು ಒಪ್ಪಿ ಯಾರೂ ಪಕ್ಷಕ್ಕೆ ಬರಬಹುದು ಜಿ‌.ಟಿ ದೇವೇಗೌಡ ಹಿಂದೆ ನಮ್ಮ ಜೊತೆ ಇದ್ದರು. ಅಲ್ಲಿ ಬೇಸರ ಆದ್ರೆ ಯಾವತ್ತೂ ಜಿಟಿಡಿ ಬಿಜೆಪಿಗೆ ಬರಬಹುದು. ಗೊಂದಲ ನಿವಾರಣೆಗೆ ಡಿಕೆಶಿ ಎಂಟ್ರಿ ಬಹಳ ತಡವಾಯ್ತು. ಸ್ಪೀಕರ್ ಕಚೇರಿಗೆ ಈಗ ಹೋಗಿ ಸಮಾಧಾನ ಮಾಡಿದರೆ ಪ್ರಯೋಜನ ಇಲ್ಲ ಎಂದು ತಿಳಿಸಿದರು.