ಹೊಟ್ಟೆ ತುಂಬಾ ತಿನ್ನಿ ಮೊಟ್ಟೆ ಪರೋಟ : ಭಾರೀ ಟೇಸ್ಟ್ ಉಂಟು, ಮಾಡೋ ಸುಲಭ ವಿಧಾನ ಇಲ್ಲುಂಟು

ಬಿಸಿ ಬಿಸಿ ಮೊಟ್ಟೆ ಪರೋಟ ತಿಂದ್ರೆ ಆಹಾ -(ವಿಡಿಯೋ ನೋಡಿ ಮಾಡಿ)

ಎಗ್ ಪರೋಟ ಹೇಗ್ ಮಾಡೋದು?
ಮೊದಲು ಚಪಾತಿಯನ್ನು ಬೇಯಿಸಿ. ಸಜ್ವಾನ್ ಚಟ್ನಿಯನ್ನು ಚಪಾತಿಯ ಮೇಲೆ ಲೇಪಿಸಿ ನಾಲ್ಕು ಬದಿಯನ್ನು ಫೋಲ್ಡ್ ಮಾಡಿರಿ . ಇದನ್ನು ಕಾವಲಿಯ ಮೇಲೆ ಇಟ್ಟು ಒಂದು ಹಸಿ ಮೊಟ್ಟೆಯನ್ನು ಹಾಕಿರಿ. ಅದರ ಮೇಲೆ ಸ್ವಲ್ಪ ಈರುಳ್ಳಿ , ಸ್ವಲ್ಪ ಟೊಮೆಟೊ ,ಹಸಿ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಈರುಳ್ಳಿ ಉಪ್ಪು ಪೆಪ್ಪರ್ ಪೌಡರ್ನ್ನು ಹಾಕಿ ಮುಚ್ಚಿರಿ. ಗ್ಯಾಸ್ಸ್ಟವ್ ಸಿಮ್ನಲ್ಲಿಟ್ಟು ಐದು ನಿಮಿಷ ಬೇಯಿಸಿರಿ.  ಎಗ್ ಪರೋಟ ಸವಿಯಲು ಸಿದ್ಧ

 

-ಡಾ.ಹರ್ಷಾ ಕಾಮತ್