ಮೂಡಬಿದಿರೆ: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ 3 ದಿನಗಳ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ

ಮೂಡಬಿದ್ರೆ, ಜೂ. 28: ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಚಿಕಿತ್ಸೆ, ಸಲಹೆ ನೀಡುವ ಮೂರು ದಿನಗಳ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಮೂಡಬಿದ್ರೆಯ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಆಳ್ವಾಸ್ ಹೆಲ್ತ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿನಯ್ ಆಳ್ವ ಉದ್ಘಾಟಿಸಿ ಮಾತನಾಡಿ, ದಿವ್ಯಾಂಗರ ಬದುಕಿಗೆ ಈ ಶಿಬಿರವು ಆಶಾಕಿರಣವಾಗಲಿ ಎಂದು ಶುಭ ಹಾರೈಸಿ, ಇಂತಹ ಶಿಬಿರಕ್ಕೆ ಮುಂದೆಯೂ ಸಹಕಾರ ನೀಡುವುದಾಗಿ ಅಭಿಪ್ರಾಯ   ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸೇವಾಭಾರತಿಯ ಅಧ್ಯಕ್ಷರಾದ  ಕೆ. ವಿನಾಯಕ ರಾವ್ ಅವರು‌ ಅಧ್ಯಕ್ಷತೆಯ […]

ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗದಿಂದ 46ನೇ ಗೋಪೂಜೆ

ಉಡುಪಿ, ಜೂ. 28: ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗದ 46ನೇ ತಿಂಗಳ ಗೋಪೂಜೆಯು ಶುಕ್ರವಾರ ಬೈಲೂರಿನ ಬಿ.ಎಂ.ಎಂ.ಶಾಲೆಯ ಸಮೀಪದ ನಿವಾಸಿ ಗೋಪಾಲಕೃಷ್ಣ ರಾವ್ ಅವರ ಮನೆಯಲ್ಲಿ ನಡೆಯಿತು. ಬಳಗದ ಸದಸ್ಯರು ಮತ್ತು ಮನೆಯವರು ಸೇರಿ ಗೋವುಗಳಿಗೆ ನವಧಾನ್ಯವನ್ನು ತಿನ್ನಿಸಿ, ಆರತಿ ಬೆಳಗಿಸಿ ಗೋಪೂಜೆಯನ್ನು ನೆರವೇರಿಸಿದರು. ಬಳಗದ ವತಿಯಿಂದ ಗೋಪಾಲಕರಿಗೆ ಪಶುಆಹಾರ ಹಾಗೂ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗೋಪಾಲಕರಾದ ಸಂಧ್ಯಾ ಗೋಪಾಲಕೃಷ್ಣ ರಾವ್, ಬೇಬಿ ರಾವ್, ರಂಜಿತ್ ರಾವ್, ರಜತ್ ರಾವ್ ಉಪಸ್ಥಿತರಿದ್ದರು, ಗೋಸೇವಾ ಬಳಗದ […]

ಉಳ್ಳಾಲ: ಯುವತಿಗೆ ಚೂರಿ ಇರಿದು ಯುವಕ ಆತ್ಮಹತ್ಯೆಗೆ ಯತ್ನ

ಮಂಗಳೂರು, ಜೂ .28: ಯುವತಿಗೆ ಚೂರಿ ಇರಿದು, ಬಳಿಕ ಯುವಕನೊಬ್ಬ ತನ್ನ ಕುತ್ತಿಗೆಗೂ‌ ಇರಿದುಕೊಂಡು ಆತ್ಮಹತ್ಯೆ ಗೆ‌ ಯತ್ನಿಸಿರುವ ಘಟನೆ ಮಂಗಳೂರಿನ ಉಳ್ಳಾಲದ ಬಗಂಬಿಲದಲ್ಲಿ ಜೂ. 28ರಂದು ಸಂಜೆ ನಡೆದಿದೆ. ಬಗಂಬಿಲದ ದೀಕ್ಷಾ (20) ಎಂಬಾಕೆಗೆ ಚೂರಿ ಇರಿದ ಸುಶಾಂತ್ (22) ಎಂಬಾತ ಬಳಿಕ ತಾನು ಆತ್ಮಹತ್ಯೆ ಗೆ ಯತ್ನಿಸಿದ್ದಾನೆ. ಇಬ್ಬರಿಗೂ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರೇಮ ವೈಫಲ್ಯ ಘಟನೆಗೆ ಕಾರಣವೆಂದು ಶಂಕೆ‌ ವ್ಯಕ್ಯವಾಗಿದ್ದು, ನಿಖರ ಕಾರಣ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ. ಉಳ್ಳಾಲ […]

ಮಣಿಪಾಲ: ಹಜ್ ಯಾತ್ರಾರ್ಥಿಗಳಿಗೆ ತರಬೇತಿ, ಚುಚ್ಚುಮದ್ದು ವಿತರಣೆ

ಮಣಿಪಾಲ, ಜೂ.28: ಹಜ್ ಕಮಿಟಿ ವತಿಯಿಂದ ಉಡುಪಿ ದಾರುಲ್ ಹುದಾ, ಜಮಾಅತೆ ಇಸ್ಲಾಮಿ ಹಿಂದ್, ಮಣಿಪಾಲ ಜುಮಾ ಮಸೀದಿ, ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಜಿಲ್ಲಾ ವಕ್ಫ್ ಸಲಹಾ ಮಂಡಳಿ, ಜಿಲ್ಲಾ ಸಂಯುಕ್ತ ಜಮಾಅತ್‌ಗಳ ಸಹಯೋಗ ದೊಂದಿಗೆ ಜಿಲ್ಲೆಯ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಹಾಗೂ ಚುಚ್ಚು ಮದ್ದು ನೀಡುವ ಕಾರ್ಯಕ್ರಮವನ್ನು ಶುಕ್ರವಾರ ಮಣಿಪಾಲ ಮಸೀದಿಯಲ್ಲಿ ಆಯೋಜಿಸಲಾಯಿತು. ನೇಜಾರು ಮಸೀದಿಯ ಖತೀಬ್ ಉಸ್ಮಾನ್ ಮದನಿ ಕನ್ನಡದಲ್ಲಿ, ಮಣಿಪಾಲ ಮಸೀದಿಯ ಖತೀಬ್ ವೌಲಾನ ಸಾಧಿಕ್ ಖಾಸ್ಮಿ […]

ಆಹಾರದಲ್ಲಿ ವಿಷಬಾಧೆ: ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಹೊಟೇಲು ಮುಚ್ಚಿಸಿದ ಜಿ.ಪಂ.ಸದಸ್ಯ

ಮಂಗಳೂರು, ಜೂ. 28: ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಂಟ್ಸ್ ಹಾಸ್ಟೆಲ್ ಬಳಿಯ ಹೊಟೇಲೊಂದರಲ್ಲಿ ಆಹಾರ ಸೇವಿಸಿ 40ರಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹೊಟೇಲು ಯಾವುದೇ ಎಗ್ಗಿಲ್ಲದೆ ತೆರೆದು ಕಾರ್ಯಾಚರಿಸುವುದನ್ನು ಮನಗಂಡ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತು ಶಫೀಕ್ ಅರಫಾ ಹೊಟೇಲಿನ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಆರೋಗ್ಯ ಅಧಿಕಾರಿಗಳ ನೆರವಿನೊಂದಿಗೆ ಹೊಟೇಲನ್ನು ಮುಚ್ಚಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದವರ ಪೈಕಿ ಹೆಚ್ಚಿನ […]