ಉಡುಪಿ: ಪುಣ್ಯಕೋಟಿ ಗೋಸೇವಾ ಬಳಗದಿಂದ 46ನೇ ಗೋಪೂಜೆ

ಉಡುಪಿ, ಜೂ. 28: ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗದ 46ನೇ ತಿಂಗಳ ಗೋಪೂಜೆಯು ಶುಕ್ರವಾರ ಬೈಲೂರಿನ ಬಿ.ಎಂ.ಎಂ.ಶಾಲೆಯ ಸಮೀಪದ ನಿವಾಸಿ ಗೋಪಾಲಕೃಷ್ಣ ರಾವ್ ಅವರ ಮನೆಯಲ್ಲಿ ನಡೆಯಿತು.
ಬಳಗದ ಸದಸ್ಯರು ಮತ್ತು ಮನೆಯವರು ಸೇರಿ ಗೋವುಗಳಿಗೆ ನವಧಾನ್ಯವನ್ನು ತಿನ್ನಿಸಿ, ಆರತಿ ಬೆಳಗಿಸಿ ಗೋಪೂಜೆಯನ್ನು ನೆರವೇರಿಸಿದರು. ಬಳಗದ ವತಿಯಿಂದ ಗೋಪಾಲಕರಿಗೆ ಪಶುಆಹಾರ ಹಾಗೂ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೋಪಾಲಕರಾದ ಸಂಧ್ಯಾ ಗೋಪಾಲಕೃಷ್ಣ ರಾವ್, ಬೇಬಿ ರಾವ್, ರಂಜಿತ್ ರಾವ್, ರಜತ್ ರಾವ್ ಉಪಸ್ಥಿತರಿದ್ದರು, ಗೋಸೇವಾ ಬಳಗದ ಪ್ರಮುಖರಾದ ಜ್ಯೋತಿ ಸತೀಶ್ ದೇವಾಡಿಗ, ತಾರಾ ಉಮೇಶ್ ಆಚಾರ್ಯ, ಶೋಭಾ ಎಸ್ ಶೆಟ್ಟಿ, ಸರೋಜಾ ದೇವಾಡಿಗ, ಶಾಂತಾ ಶೇರಿಗಾರ್ ಕೊಳಂಬೆ, ಕುಸುಮಾ ಶೇರಿಗಾರ್, ಅನಿತಾ ನಾರಾಯಣ, ವಿನುತಾ ದೇವಾಡಿಗ, ಚಿತ್ರಾ ಶೆಟ್ಟಿಗಾರ್, ಆಶಾ ಎಸ್.ಶೆಟ್ಟಿ, ರಜನಿ ಆಚಾರ್ಯ, ಜಯಶೀಲ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.