ಆಹಾರದಲ್ಲಿ ವಿಷಬಾಧೆ: ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಹೊಟೇಲು ಮುಚ್ಚಿಸಿದ ಜಿ.ಪಂ.ಸದಸ್ಯ

ಮಂಗಳೂರು, ಜೂ. 28: ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಂಟ್ಸ್ ಹಾಸ್ಟೆಲ್ ಬಳಿಯ ಹೊಟೇಲೊಂದರಲ್ಲಿ ಆಹಾರ ಸೇವಿಸಿ 40ರಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹೊಟೇಲು ಯಾವುದೇ ಎಗ್ಗಿಲ್ಲದೆ ತೆರೆದು ಕಾರ್ಯಾಚರಿಸುವುದನ್ನು ಮನಗಂಡ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತು ಶಫೀಕ್ ಅರಫಾ ಹೊಟೇಲಿನ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಆರೋಗ್ಯ ಅಧಿಕಾರಿಗಳ ನೆರವಿನೊಂದಿಗೆ ಹೊಟೇಲನ್ನು ಮುಚ್ಚಿಸಿದ್ದಾರೆ.


ಪ್ರಸ್ತುತ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದವರ ಪೈಕಿ ಹೆಚ್ಚಿನ ಮಂದಿ ಕಾಸರಗೋಡಿನವರಾಗಿದ್ದು, ಜೂ. 24ರಂದು ಈ‌‌ ಹೋಟೆಲ್ ನಲ್ಲಿ‌ ಊಟ ಮಾಡಿದ್ದರು ಎಂದು ತಿಳಿದು ಬಂದಿದೆ.