ವಿಶ್ವಕಪ್ 2019: ನಾಳೆ ಇಂಡೋ-ಪಾಕ್ ವಾರ್, ಟೀಂ‌ ಇಂಡಿಯಾ ಗೆಲುವಿನ ಫೇವರಿಟ್

ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದು, ಈ ತಂಡಗಳು ಜೂ. 16ರಂದು ಮುಖಾಮುಖಿಯಾಗಲಿವೆ. ಏಷ್ಯಾದ ರಾಷ್ಟ್ರಗಳ ಈ ಪಂದ್ಯಾಟವನ್ನು ವೀಕ್ಷಿಸಲು ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಎರಡು ತಂಡಗಳ ಬಲಾಬಲ ನೋಡುವುದಾದರೆ ನಾಳೆಯ ಪಂದ್ಯದಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಆಗಿದೆ. 2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮುಖಾಮುಖಿಯಾಗಿದೆ. ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು […]

ಆರ್ಥಿಕ ಗಣತಿ ಕಾರ್ಯಾಚರಣೆ, ಸಹಕರಿಸಿ: ಜಿಲ್ಲಾಧಿಕಾರಿ

ಉಡುಪಿ, ಜೂನ್ 15: ಕೇಂದ್ರ ಸರ್ಕಾರದ ಯೋಜನೆಯಂತೆ ರಾಜ್ಯದಾದ್ಯಂತ 7 ನೇ ಆರ್ಥಿಕ ಗಣತಿಯ ಕಾರ್ಯಾಚರಣೆಯನ್ನು ಜೂನ್ ತಿಂಗಳಿನಿಂದ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಉಡುಪಿ ಜಿಲ್ಲೆಯಾದ್ಯಂತ ಜೂನ್ 15 ರಿಂದ ಗಣತಿಯ ಕಾರ್ಯವು ಆರಂಭವಾಗಿರುತ್ತದೆ. ಗಣತಿಯ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ನಡೆಸುವುದಾಗಿದೆ. ಈ ಗಣತಿಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸ್ವಂತ ಉಪಯೋಗಕ್ಕಾಗಿ […]

ಶ್ರೀ ಕೃಷ್ಣ ಮಠಕ್ಕೆ ಕೇರಳರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೇಟಿ

ಉಡುಪಿ:ಶ್ರೀ ಕೃಷ್ಣ ಮಠಕ್ಕೆ ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹರಿಪ್ರಸಾದ್ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಉಪಸ್ಥಿತರಿದ್ದರು.    ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹರಿಪ್ರಸಾದ್ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಉಪಸ್ಥಿತರಿದ್ದರು.  

ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿ- ರಘುಪತಿ ಭಟ್

ಉಡುಪಿ:ಉಡುಪಿ ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದು, ಈ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.     ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಶನ್‍ನ ಸಮಿತಿ  ಸಭೆಯಲ್ಲಿ ಮಾತನಾಡಿದರು.       ಪ್ರಸ್ತುತ ಉಡುಪಿಗೆ ಬಜೆ ಡ್ಯಾಮ್ ನಲ್ಲಿನ ನೀರನ್ನು ಶುದ್ದೀಕರಿಸಿ ಪೂರೈಸಲಾಗುತ್ತಿದ್ದು,  ಮುಂದೆ ಭರತ್ಕಲ್ ನಲ್ಲಿ ನೀರನ್ನು ಟ್ರೀಟೆಡ್ ಮಾಡಿ , ಉಡುಪಿ ಕ್ಷೇತ್ರಕ್ಕೆ  ಪೂರೈಸುವ ಯೋಜನೆ ಇದ್ದು, ಇದರಿಂದ […]

ಉಡುಪಿ: ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪರಿಸರದ ಕಾಳಜಿಯಿಂದ ಸಕಾಲಿಕ ಮಳೆಗಾಗಿ  ಹಸಿರನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಗಿಡಗಳನ್ನು ನೆಟ್ಟು ರಕ್ಷಿಸಿ ಮರಗಳನ್ನಗಿಸುವ ಜವಾಬ್ದಾರಿಯನ್ನಿಟ್ಟುಕೊಂಡು, ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಅದಮಾರು ಮಠದಲ್ಲಿ  ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಾಲನೆ ನೀಡಿದರು. ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು,ಅದಮಾರು ಕಿರಿಯ  ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಸಸಿಗಳನ್ನು ನೆಟ್ಟರು.ಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು,ಅದಮಾರು ಮಠದ […]