ವಿಶ್ವಕಪ್ 2019: ನಾಳೆ ಇಂಡೋ-ಪಾಕ್ ವಾರ್, ಟೀಂ‌ ಇಂಡಿಯಾ ಗೆಲುವಿನ ಫೇವರಿಟ್

ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದು, ಈ ತಂಡಗಳು ಜೂ. 16ರಂದು ಮುಖಾಮುಖಿಯಾಗಲಿವೆ.
ಏಷ್ಯಾದ ರಾಷ್ಟ್ರಗಳ ಈ ಪಂದ್ಯಾಟವನ್ನು ವೀಕ್ಷಿಸಲು ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಎರಡು ತಂಡಗಳ ಬಲಾಬಲ ನೋಡುವುದಾದರೆ ನಾಳೆಯ ಪಂದ್ಯದಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಆಗಿದೆ.
2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮುಖಾಮುಖಿಯಾಗಿದೆ. ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಗಮನಿಸಿದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19ರಲ್ಲಿ ಭಾರತ, 11ರಲ್ಲಿ ಪಾಕ್ ಗೆಲುವು ಪಡೆದಿದೆ.
ಸದ್ಯ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ  ಬಲಿಷ್ಠವಾಗಿದೆ. ಆದರೆ ಧವನ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಸಮಸ್ಯೆಯಾಗಿದೆ. ಧವನ್ ಸ್ಥಾನದಲ್ಲಿ ಆರಂಭಿಕನಾಗಿ ರಾಹುಲ್ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಜತೆಗೆ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಭುವಿ, ಬುಮ್ರಾ ಭಾರತದ ಶಕ್ತಿಯಾಗಿದ್ದರೆ, ಚಹಲ್ ಕಮಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಪಾಕಿಸ್ತಾನ ವಿಶ್ವಕಪ್ ಎತ್ತುವ ಟಾಪ್ ಫೇವರಿಟ್ ಇಂಗ್ಲೆಂಡ್ ತಂಡವನ್ನು ಮಣಿಸಿರಿವುದು ಹೊರತುಪಡಿಸಿದರೆ, ಇತ್ತೀಚಿನ ಕ್ರಿಕೆಟ್ ಪ್ರದರ್ಶನ ಸಾಧಾರಣವಾಗಿದೆ.