ಆರೂರು ಗ್ರಾ.ಪಂ.: ವಿಶೇಷ ಗ್ರಾಮಸಭೆ

ಉಡುಪಿ, ಜೂನ್ 15: 21ನೇ ಆರೂರು ಗ್ರಾಮ ಪಂಚಾಯತ್‍ನ 2019-20 ನೇ ಸಾಲಿನ ಪ್ರಥಮ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆ ವಿಶೇಷ ಗ್ರಾಮ ಸಭೆಯು ಶನಿವಾರ ಆರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ದೀಪಾ ವಹಿಸಿದ್ದರು. ಸಭೆಯಲ್ಲಿ ತಾಲೂಕು ಸಂಯೋಜಕ ಪ್ರವೀಣ್ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಆರೂರು ಗ್ರಾಮ ಪಂಚಾಯತ್ […]

ಸಿಮೆಂಟ್ ಬ್ಯಾಗ್ ತುಂಬಿದ ಲಾರಿ‌ ಪಲ್ಟಿ, ವಾಹನ ಸಂಚಾರಕ್ಕೆ ಅಡ್ಡಿ

ಮಂಗಳೂರು: ಸಿಮೆಂಟ್ ಬ್ಯಾಗ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ  ಸಮೀಪದ ನೆಕ್ಕರೆ ಬಳಿ ಸಂಭವಿಸಿದೆ.ಘಟನೆಯಲ್ಲಿ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ರಸ್ತೆ ಮಧ್ಯೆಯೇ ಲಾರಿ ಪಲ್ಟಿಯಾದ ಕಾರಣ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲದೇ ಲಾರಿ ತೆರವು ಕಾರ್ಯಚರಣೆಯು  ವಿಳಂಬವಾಗುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕಡಬ ಮೂಲಕ ಬದಲಿ ವ್ಯವಸ್ಥೆ ಮಾಡಲಾಯಿತು. ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು.

ಕಡಲ್ಕೊರೆತ ಸಮಸ್ಯೆ; ಸಂತ್ರಸ್ತರಿಗೆ ಕೊಡಗು ಮಾದರಿ ಪರಿಹಾರ: ಸಚಿವ ಖಾದರ್ ಭರವಸೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಎರಡು ಬೆಡ್‌ರೂಮ್ ಮನೆ ಅಥವಾ ಮೂರು ಸೆಂಟ್ಸ್ ಜಮೀನು ನೀಡಿ, ಕೊಡಗು ಮಾದರಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಕೆಲ ಕುಟುಂಬಗಳು ತಮಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗ ನೀಡಿದರೆ ಸಾಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಅದರ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಸದ್ಯ ಅಪಾಯದಲ್ಲಿರುವ ಮನೆಗಳನ್ನು ಬಿಟ್ಟು ತೆರಳಿರುವವರಿಗೆ […]

ಸಾಲಿಗ್ರಾಮ ಪ.ಪಂ: ಆಸ್ತಿ ತೆರಿಗೆ ದಂಡ ರಹಿತ ಪಾವತಿ

ಉಡುಪಿ, ಜೂನ್ 15: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ, ವಾಣಿಜ್ಯ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು, ಅನುಭೋಗದಾರರು 2019-20 ನೇ ಸಾಲಿನ ಆಸ್ತಿ ತೆರಿಗೆ ದಂಡ ರಹಿತವಾಗಿ ಪಾವತಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ. 2019-20 ನೇ ಸಾಲಿನ ತೆರಿಗೆ ಪಾವತಿಸದೇ ಬಾಕಿ ಇರುವವರು ದಂಡನೆ ಸಮೇತ ತೆರಿಗೆ ಪಾವತಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ 18: ಜಿಲ್ಲೆಯಲ್ಲಿ ಕಂದಾಯ ಸಚಿವರ ಪ್ರವಾಸ

ಉಡುಪಿ, ಜೂನ್ 15: ರಾಜ್ಯದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಜೂನ್ 18 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಜಿಲ್ಲೆಯ ಪ್ರವಾಹ /ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಕೈಗೊಂಡ ಪರಿಹಾರ ಕ್ರಮಗಳ ವೀಕ್ಷಣೆ ನಡೆಸುವರು, ಬೆಳಗ್ಗೆ 9.30 ಕ್ಕೆ ಸಾರ್ವಜನಿಕರ ಭೇಟಿ, ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪ್ರವಾಹ/ ಬರ ಪರಿಹಾರ ಕ್ರಮಗಳು ಹಾಗೂ ಕಂದಾಯ ಇಲಾಖಾ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ […]