“ಯಾರೆ ನೀನು ಭುವನಮೋಹಿನಿ” ಹಾಡಿಗೆ ಕುಣಿದ ಉಡುಪಿಯ ಯಕ್ಷ ಸುಂದರಿ ಯಾರು ಗೊತ್ತಾ?

ಯಕ್ಷಗಾನದ ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ “ಯಾರು ನೀನು ಭುವನ ಮೋಹಿನಿ”ಹಾಡಿಗೆ ಕುಣಿದ ಯುವತಿಯೊಬ್ಬಳ ಕುಣಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಯಕ್ಷಾಭಿಮಾನಿಗಳು ಮಾತ್ರವಲ್ಲ ರಾಜ್ಯದ ಬಹುತೇಕ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಂದ ಹಾಗೆ ಈ ಹುಡುಗಿ ಯಾರು ಎನ್ನುವುದು ಬಹುತೇಕ ಮಂದಿಯ ಪ್ರಶ್ನೆ.ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುಣಿತದ ವಿಡಿಯೋ ಶೇರ್ ಮಾಡಿ ಖುಷಿ ಪಟ್ಟಿದ್ದಾರೆ ಬಿಟ್ಟರೆ , ಈ ಹುಡುಗಿ ಯಾರು ಎನ್ನುವ ಪ್ರಶ್ನೆ ಎತ್ತಿರಲಿಲ್ಲ.”ಯಾರೆ ನೀನು […]

ಕುಂದಾಪುರ: ಶ್ರೀ ಅರೆಕಲ್ಲು ಬೊಬ್ಬರ್ಯ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದ

ಕುಂದಾಪುರ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ಇರುವ ಪ್ರಸಿದ್ಧವಾದ ಹೇರಿಕುದ್ರು ಶ್ರೀ ಅರೆಕಲ್ಲು ಬೊಬ್ಬರ್ಯ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳನನ್ನು ಸಾರ್ವಜನಿಕರ ಸಹಕಾರದಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಭಟ್ಕಳ ತಾಲೂಕಿನ ಅಂಬರಹಿತ್ಲು, ಮುಂಡಳ್ಳಿ ನಿವಾಸಿ ಸತೀಶ ಮಹದೇವ ನಾಯ್ಕ (31) ಬಂಧಿತ ಆರೋಪಿ. ನಡೆದಿದ್ದೇನು? ದೈವಸ್ಥಾನದ ಆಡಳಿತ ಮೊಕ್ತೇಸರರಾದ ಹೆಚ್‌. ಶಂಕರ ಶೆಟ್ಟಿ ಮುಂಜಾನೆ ಮನೆಯಲ್ಲಿದ್ದ ಸಂದರ್ಭ ವ್ಯಕ್ತಿಯೊಬ್ಬರು ಕರೆ ಮಾಡಿ ದೈವಸ್ಥಾನದ ಬಳಿ ಯಾರೋ ಒಬ್ಬ ಅರಿಚಿತ ವ್ಯಕ್ತಿ […]

ಚುನಾವಣಾ ಆಯೋಗದ ಮಾರ್ಗಸೂಚಿ ಪಾಲಿಸಿ: ಕೃಷ್ಣ ಕುನಾಲ್

ಉಡುಪಿ, ಮೇ 19: ಮೇ 23 ರಂದು ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ನಡೆಯುವ , ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು , ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ವೀಕ್ಷಕರಾದ ಕೃಷ್ಣ ಕುನಾಲ್ ಸೂಚಿಸಿದ್ದಾರೆ. ಅವರು ಭಾನುವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿರುವ ಎಣಿಕೆ ಸಹಾಯಕರು, ಎಣಿಕೆ ಮೇಲ್ವಿಚಾರಕರು ಮತ್ತು ಮೃಕ್ರೋ ಅಬ್‍ಸರ್ವರ್ ಗಳಿಗೆ ನಡೆದ 2 […]

ಮುಗಿಲಿಗೂ ಸಿಕ್ಕದ ಹಕ್ಕಿ:ಶಿವಪ್ರಸಾದ್ ಹಳುವಳ್ಳಿ ಕ್ಲಿಕ್ಕಿಸಿದ ಚಿತ್ರ

ಶಿವಪ್ರಸಾದ್ ಹಳುವಳ್ಳಿ ಕಳಸದವರು.ಪ್ರಸ್ತುತ  ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಚಿತ್ರಗಳಲ್ಲೇ ಅಪರೂಪದ ಕಲಾತ್ಮ”ಕತೆ”ಹುಟ್ಟಿಸುವ ಇವರ ಚಿತ್ರಗಳಲ್ಲಿ ನೆರಳು-ಬೆಳಕಿನ ಸಂಯೋಜನೆ ವಿಶಿಷ್ಟವಾಗಿರುತ್ತದೆ. ಪರಿಸರ ಚಿತ್ರಗಳು, ಪ್ರವಾಸ ಚಿತ್ರಗಳಲ್ಲಿ  ಸಿಕ್ಕ ಅಮೂರ್ತ ಕ್ಷಣಗಳು ಕಾಡುವಂತಿರುತ್ತದೆ.