ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ: ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಂತೇಶ್‌ 

ಉಡುಪಿ: ಕಳೆದ 45 ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬೆಲೆ ಏರಿಕೆಯ ಪರಿಣಾಮ ಸಾಮಾನ್ಯ ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ. ನೋಟು ಅಮಾನೀಕರಣ ಆದ ಬಳಿಕ ನಗರ ಪ್ರದೇಶದಲ್ಲಿ ಉದ್ಯೋಗ ಕಡಿಮೆ ಆಗಿದೆ. ಜನರು ನಗರದಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಂತೇಶ್‌ ಹೇಳಿದರು. ಮೇ ದಿನಾಚರಣೆಯ ಅಂಗವಾಗಿ ಸಿಐಟಿಯು ಉಡುಪಿ ತಾಲ್ಲೂಕು ಘಟಕದ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ […]

ಸಿಐಟಿಯು ಕುಂದಾಪುರ ಘಟಕ: ಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ಬಹಿರಂಗ ಸಭೆ

ಕುಂದಾಪುರ: ಆಳುವವರ್ಗ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಪರಿಸಸ್ಥಿತಿ ಘೋಷಣೆ ಮಾಡಿಲ್ಲವಾದರೂ ತುರ್ತು ಪರಿಸ್ಥಿತಿಯ ವಾತಾವರಣ ದೇಶದಲ್ಲಿದೆ. ದೇಶದ ಐಕ್ಯತೆ, ಸಮಾನತೆಗಾಗಿ ನಾವೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಹೇಳಿದರು. ಅವರು ಬುಧವಾರ ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ಸಿಐಟಿಯು ಕುಂದಾಪುರ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. 133 ವರ್ಷಗಳ ಹಿಂದೆ ಕಾರ್ಮಿಕ ವರ್ಗ ಸಂಘಟಿತವಾಗಿರಲಿಲ್ಲ. ಐಕ್ಯ ಹೋರಾಟಗಳು […]

ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ, ಗ್ರಾಮಸ್ಥರಿಂದ ಪ್ರತಿಭಟನೆ

ಕುಂದಾಪುರ: ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದ ಗಂಗೊಳ್ಳಿ ಪೊಲೀಸರ ಕ್ರಮ ಖಂಡಿಸಿ ಹೊಸಪೇಟೆ ಗ್ರಾಮಸ್ಥರು ಗಂಗೊಳ್ಳಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವುದನ್ನು ಬಿಟ್ಟು ಆರೋಪಿಗಳ ಪರ ಪೊಲೀಸರು ನಿಂತಿರುವುದನ್ನು ಖಂಡಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನೆರೆದಿದ್ದ ನೂರಾರು ಹೊಸಪೇಟೆ ಗ್ರಾಮಸ್ಥರು ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ತ್ರಾಸಿ ಸಮೀಪದ ಹೊಸಪೇಟೆ ನಿವಾಸಿ ಶಿವರಾಜ್ ಖಾರ್ವಿ (26) ಮೂಲತ: ಚಾಲಕನಾಗಿದ್ದು, ಸೋಮವಾರ ರಾತ್ರಿ ಗೋವಾಕ್ಕೆ ಬಾಡಿಗೆಗೆ […]

ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: 16 ಭದ್ರತಾ ಸಿಬ್ಬಂದಿ ಹುತಾತ್ಮ

ಮಹಾರಾಷ್ಟ್ರ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಂತೆಯೇ ನಕ್ಸಲರು ನಡೆಸಿದ ಭೀಕರ ದಾಳಿಗೆ 16 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಕ್ಸಲರು ಐಇಡಿ ಬಾಂಬ್ ದಾಳಿ ನಡೆಸಿ ಗುಂಡಿನ ಮಳೆಗೆರೆದ ಪರಿಣಾಮ 16 ಮಂದಿ ಯೋಧರು ಹುತಾತ್ಮರಾದ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ವಾಹನದ ಚಾಲಕ ಸಹ ಮೃತಪಟ್ಟಿದ್ದಾರೆ. ಕುರ್ಕೆಡಾದಿಂದ ಕ್ಷಿಪ್ರ ಕಾರ್ಯಾಚರಣಾ ತಂಡದ 16 ಭದ್ರತಾ ಸಿಬ್ಬಂದಿಯನ್ನು ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಜಂಬೋರ್ಖೇಡಾ ಮತ್ತು ಲೆಂಧಾರಿ ನಡುವೆ ನಕ್ಸಲರು ವಾಹನವನ್ನು ಸ್ಫೋಟಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ […]

ಟಿಎಂಎ ಪೈ ದೇಶಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು: ಪೇಜಾವರ ಶ್ರೀ

ಉಡುಪಿ: ಸರ್ಕಾರದ ಹೊರತಾಗಿಯೂ ಶಿಕ್ಷಣವನ್ನು ಬೆಳೆಸಬಹುದು ಎಂಬುವುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟ ಸಾಧಕ ಮಾಧವ ಪೈ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಇಂದು ಮಣಿಪಾಲದ ಫಾರ್ಚೂನ್‌ ಇನ್‌ ವ್ಯಾಲಿ ವಿವ್ಯೂ  ಹೋಟೆಲ್‌ನ ಚೈತ್ಯ ಸಭಾಂಗಣದಲ್ಲಿ ನಡೆದ ಮಣಿಪಾಲ ಸಮೂಹ ಸಂಸ್ಥೆಗಳ 121ನೇ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಅಂಟಿಕೊಂಡಿದ್ದ ಅಜ್ಞಾನ, ದಾರಿದ್ರ ಹಾಗೂ ಅನಾರೋಗ್ಯದ ಪಿಡುಗನ್ನು ಹೋಗಲಾಡಿಸಿದ ಕೀರ್ತಿ ಡಾ. ಟಿಎಂಎ ಪೈ ಅವರಿಗೆ ಸಲ್ಲುತ್ತದೆ. ಅವರು ಅಜ್ಞಾನದ ನಿವಾರಣೆಗಾಗಿ […]