ಸಲ್ಮಾನ್ ಖಾನ್ ಅಭಿನಯದ “ಭಾರತ್” ಸಿನಿಮಾ ಪೋಸ್ಟರ್ ರಿಲೀಸ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ “ಭಾರತ್” ಚಿತ್ರದ ಸಲ್ಮಾನ್ ಖಾನ್ ಲುಕ್ ರಿಲೀಸ್ ಆಗಿದೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಉದ್ದನೆಯ ಬಿಳಿ ಕೂದಲು ಮತ್ತು ಬಿಳಿ ದಾಡಿ ಬಿಟ್ಟಿರುವ ಸಲ್ಲುಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಈ ಪೋಸ್ಟರ್ ನಲ್ಲಿ ಬ್ಯಾಡ್ ಬಾಯ್ ಗೆ ವಯಸ್ಸಾದರೂ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಬಿಳಿ ಕೂದಲನ್ನು ಸ್ಪೈಕ್ ಮಾಡಿ, ಉದ್ದ ಮೀಸೆ […]

ಉಡುಪಿ ಜಿಲ್ಲೆ: ಓಟಿನ ದಿನ ಮತಗಟ್ಟೆಯಲ್ಲಿ ಕಾಡಿದ ಕತೆ ಹೇಳಿದ ಚಿತ್ರಗಳು ಇಲ್ಲಿದೆ ನೋಡಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು ಇಡೀ ದಿನ ಮತಗಟ್ಟೆಗಳಲ್ಲಿ ವೈವಿದ್ಯಮಯ ದೃಶ್ಯಗಳು ಕೆಮರಾಗೆ ಸೆರೆಯಾಗಿವೆ.ಮತದಾರರ ಮೊಗದಲ್ಲಿ ಕಂಡು ಬಂದ ಹುಮ್ಮಸ್ಸು, ಪ್ರಜಾಪ್ರಭುತ್ವದ ಹಬ್ಬಕ್ಕೆ ಸಾಕ್ಷಿಯಾದ ಅವರ ಮೈಮನಗಳಲ್ಲಿ ತೇಲಿದ ಖುಷಿ, ನಗು ಇತ್ಯಾದಿಗಳ ಬೆರಗುಗಳನ್ನೊಳಗೊಂಡ ಚಿತ್ರಗಳು ಇಲ್ಲಿ ಕತೆ ಹೇಳುತ್ತಿವೆ. ಆ ಚಿತ್ರಗಳು ಇಲ್ಲಿದೆ ನೋಡಿ.   ——————————————————————– —————————————————————– ———————————————————– ———————————————————-

ಆಂಬುಲೆನ್ಸ್ ನಲ್ಲಿ ಬಂದು ಸ್ಟ್ರೆಚ್ಚರ್‌ನಲ್ಲಿ ಮಲಗಿಕೊಂಡೇ ಮತದಾನ ಮಾಡಿದ ಕುಂದಾಪುರದ ಮತದಾರ

ಕುಂದಾಪುರ: ಮೂರು ವಾರಗಳ ಹಿಂದೆ ಅಪಘಾತಕ್ಕೀಡಾಗಿ ಕಾಲಿಗೆ ಗಂಭೀರ ಗಾಯಗೊಂಡು ಮನೆಯಲ್ಲೇ ಇದ್ದಕುಂದಾಪುರ ತಾಲೂಕಿನ ಉಳ್ತೂರಿನ ಯುವಕನೋರ್ವ ಆಂಬುಲೆನ್ಸನಲ್ಲಿ ಬಂದು ಸ್ಟ್ರೆಚ್ಚರ್‌ನಲ್ಲಿ ಮಲಗಿಕೊಂಡೇ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.ತೆಕ್ಕಟ್ಟೆ ಸಮೀಪದ ಉಳ್ತೂರಿನ ಶಿವಪ್ಪ ಎಂಬವರ ಪುತ್ರ ಜಯಶೀಲ ಪೂಜಾರಿ(೩೦) ಮೂರು ವಾರಗಳ ಹಿಂದೆ ಗೋಳಿಯಂಗಡಿ ಸಮೀಪ ಬೈಕ್ ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದ ಪರಿಣಾಮ ಜಯಶೀಲ್ ಅವರ ಬಲ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದರಿಂದ ಅವರು ಕುಂದಾರಪುರ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. ಕಳೆದ ೧೦ ದಿನಗಳ ಹಿಂದೆ […]

ಕೂದಲು ಉದುರುತ್ತಿದೆಯೇ? ಹಾಗಾದ್ರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

ನಂಗೆ ಕೂದಲು ಉದುರುತ್ತದೆ? ಏನ್ ಮಾಡ್ಲಿ ಅನ್ನೋದು ಬಹುತೇಕ ಜನರ ಕಾಮನ್ ಪ್ರಶ್ನೆಯಾಗಿಬಿಟ್ಟಿದೆ. ಕೂದಲು ಉದುರದಂತೆ ನಾವು ಏನೇನ್ ಕ್ರಮ ಕೈಗೊಳ್ಳಬಹುದು? ಮನೆಯಲ್ಲಿಯೇ  ಕೂದಲಿನ ಆರೈಕೆಗಾಗಿ ಮಾಡುವ ಸುಲಭ ವಿಧಾನಗಳಾವುದು ಎನ್ನುವ ಕುರಿತು ಕಾರ್ಕಳದ ಡಾ. ಹರ್ಷಾ ಕಾಮತ್ ಭರ್ಜರಿ ಟಿಪ್ಸ್ ನೀಡಿದ್ದಾರೆ. ಅವರು ಹೇಳಿದ್ದನ್ನು ಫಾಲೋ ಮಾಡಿದರೆ ಕೂದಲು ಉದುರುವ ಸಮಸ್ಯೆಯನ್ನು ಖಂಡಿತಾ ನಿವಾರಿಸಬಹುದು. ಕೂದಲು ಉದುರಲು ಏನ್ ಕಾರಣ?  ಸಾಮಾನ್ಯವಾಗಿ ಇನ್ಫೆಕ್ಷನ್,  ಪ್ಲಾಸ್ಟಿಕ್ ಬಾಚಣಿಗೆ ಉಪಯೋಗಿಸುವುದು,  ಹೇರ್ ಕಲರಿಂಗ್, ಕೆಮಿಕಲ್ ಯುಕ್ತ ಶ್ಯಾಂಪು, ಬೋರ್ವೆಲ್ […]

ಮತಗಟ್ಟೆಯಲ್ಲಿ ಮದುಮಗಳು !ಮತದ ಮನೆಗೆ ಬಂದು, ಮದುವೆ ಮನೆಗೆ ತೆರಳಿದ ಮದುವಣಗಿತ್ತಿ

ಕುಂದಾಪುರ: ಕುವೆಂಪು ಅವರ ಮಹಾನ್ ಕಾದಂಬರಿ “ಮಲೆಗಳಲ್ಲಿ ಮದುಮಗಳು”ಕೇಳಿದ್ದೇವೆ, ಇದ್ಯಾವುದು ಮತಗಟ್ಟೆಯಲ್ಲಿ  ಮದು ಮಗಳು ಅಂತ ಮೇಲೆ ಕೆಳಗೆ ನೋಡಬೇಡಿ. ಕುಂದಾಪುರದ ಹೊಂಬಾಡಿ ಮಂಡಾಡಿ ವಾರ್ಡ್ 1 ಮತ್ತು 2 ರ ಮತಗಟ್ಟೆ ಸಂಖ್ಯೆ 98 ರಲ್ಲಿ ಮತದಾನ ಮಾಡಲು ಬಂದ ಮದುಮಗಳೊಬ್ಬರು ಗಮನ ಸೆಳೆದರು. ಹುಣ್ಸೆಮಕ್ಕಿ‌ ನಿವಾಸಿ ಶಾಂತಾ ಅವರಿಗೆ ಒಂದೆಡೆ ಮತ ಚಲಯಿಸುವ ಖುಷಿ, ಆದರ ಜೊತೆಜೊತೆಗೆ ಸ್ವಲ್ಪ ಹೊತ್ತಿನಲ್ಲಿಯೇ ಹಸೆಮಣೆಗೇರುವ ಖುಷಿ. ದೇಶದ ಭವಿಷ್ಯಕ್ಕಾಗಿ ಮತದಾನ, ತನ್ನ ಉಜ್ವಲ ಭವಿಷ್ಯಕ್ಕಾಗಿ ಮದುವೆ ಎನ್ನುವ ಖುಷಿ […]