ಮತಗಟ್ಟೆಯಲ್ಲಿ ಮದುಮಗಳು !ಮತದ ಮನೆಗೆ ಬಂದು, ಮದುವೆ ಮನೆಗೆ ತೆರಳಿದ ಮದುವಣಗಿತ್ತಿ

ಕುಂದಾಪುರ: ಕುವೆಂಪು ಅವರ ಮಹಾನ್ ಕಾದಂಬರಿ “ಮಲೆಗಳಲ್ಲಿ ಮದುಮಗಳು”ಕೇಳಿದ್ದೇವೆ, ಇದ್ಯಾವುದು ಮತಗಟ್ಟೆಯಲ್ಲಿ  ಮದು ಮಗಳು ಅಂತ ಮೇಲೆ ಕೆಳಗೆ ನೋಡಬೇಡಿ.

ಕುಂದಾಪುರದ ಹೊಂಬಾಡಿ ಮಂಡಾಡಿ ವಾರ್ಡ್ 1 ಮತ್ತು 2 ರ ಮತಗಟ್ಟೆ ಸಂಖ್ಯೆ 98 ರಲ್ಲಿ ಮತದಾನ ಮಾಡಲು ಬಂದ ಮದುಮಗಳೊಬ್ಬರು ಗಮನ ಸೆಳೆದರು. ಹುಣ್ಸೆಮಕ್ಕಿ‌ ನಿವಾಸಿ ಶಾಂತಾ ಅವರಿಗೆ ಒಂದೆಡೆ ಮತ ಚಲಯಿಸುವ ಖುಷಿ, ಆದರ ಜೊತೆಜೊತೆಗೆ ಸ್ವಲ್ಪ ಹೊತ್ತಿನಲ್ಲಿಯೇ ಹಸೆಮಣೆಗೇರುವ ಖುಷಿ. ದೇಶದ ಭವಿಷ್ಯಕ್ಕಾಗಿ ಮತದಾನ, ತನ್ನ ಉಜ್ವಲ ಭವಿಷ್ಯಕ್ಕಾಗಿ ಮದುವೆ ಎನ್ನುವ ಖುಷಿ ಮೂಡಿನಲ್ಲಿದ್ದ ಮದುಮಗಳು ಮತ ಚಲಾಯಿಸಿದ ಬಳಿಕವೇ  ಸಾಹಿಬ್ರಕಟ್ಟೆಯ ಮದುವೆಮನೆಗೆ ತೆರಳಿದರು.