ಸಲ್ಮಾನ್ ಖಾನ್ ಅಭಿನಯದ “ಭಾರತ್” ಸಿನಿಮಾ ಪೋಸ್ಟರ್ ರಿಲೀಸ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ “ಭಾರತ್” ಚಿತ್ರದ ಸಲ್ಮಾನ್ ಖಾನ್ ಲುಕ್ ರಿಲೀಸ್ ಆಗಿದೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಉದ್ದನೆಯ ಬಿಳಿ ಕೂದಲು ಮತ್ತು ಬಿಳಿ ದಾಡಿ ಬಿಟ್ಟಿರುವ ಸಲ್ಲುಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಈ ಪೋಸ್ಟರ್ ನಲ್ಲಿ ಬ್ಯಾಡ್ ಬಾಯ್ ಗೆ ವಯಸ್ಸಾದರೂ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಬಿಳಿ ಕೂದಲನ್ನು ಸ್ಪೈಕ್ ಮಾಡಿ, ಉದ್ದ ಮೀಸೆ ಬಿಟ್ಟು, ಕನ್ನಡಕ ಧರಿಸಿರುವ ಸಲ್ಲುಮೀಯಾ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. “ಭಾರತ್” ಚಿತ್ರದಿಂದ ಸಲ್ಮಾನ್ ಪೋಸ್ಟರ್ ರಿಲೀಸ್ ಆಗುತ್ತಿದಂತೆ ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸಿಕೊಂಡಿದೆ.
ಚಿತ್ರದಲ್ಲಿ ಜಾಕಿ ಶ್ರಾಫ್ ಸಲ್ಮಾನ್ ಖಾನ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ವಿಶೇಷ ಅಂದ್ರೆ ವಯಸ್ಸಾದ ಸಲ್ಮಾನ್ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ಟಿಟ್ಟರ್ ನಲ್ಲಿ ಮೂರನೇ ಟ್ರೆಂಡಿಂಗ್ ನಲ್ಲಿದೆ. ಈ ಹಿಂದೆ ಭಾರತ್ ಚಿತ್ರದಿಂದ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಅವರ ರೋಮ್ಯಾಂಟಿಕ್ ಲುಕ್ ರಿಲೀಸ್ ಆಗಿತ್ತು.
ಸಿನಿಮಾ ಪೂರ್ತಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬಂದಿದೆ. ದೇಶ ಭಕ್ತಿ ಸಾರುವ ಸಿನಿಮಾ ಇದಾಗಿದೆ. ಅಂದ್ಹಾಗೆ ಭಾರತ್ ದಕ್ಷಿಣ ಕೊರಿಯದ ಓಡೆ ಟು ಮೈ ಫಾದರ್ ಚಿತ್ರದ ರಿಮೇಕ್. ಭಾರತ್ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಟಿ ತಬು, ದಿಶಾ ಪಟಾನಿ, ಜಾಕಿ ಶ್ರಾಫ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಕೆಲವೇ ಸಮಯದಲ್ಲಿ ತೆರೆಗೆ ಬರಲಿದೆ.