ಆರ್‌ಸಿಬಿಯಿಂದ ಬೆಂಗ್ಳೂರು ಮಾನ ಹರಾಜು, ತಂಡದ ಹೆಸರು ಬದಲಾಯಿಸುವಂತೆ ಸಾಮಾಜಿಕ ಕಾರ್ಯಕರ್ತನಿಂದ ಕ್ರಿಕೆಟ್ ಮಂಡಳಿಗೆ ಪತ್ರ

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಪರಿಣಾಮ ಬೆಂಗಳೂರಿನ ಮಾನ ಹರಾಜಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬವರು ರಾಜ್ಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದಾರೆ. ಏನಿದೆ ಪತ್ರದಲ್ಲಿ? ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿಬಾರಿಯು ಆರ್‌ಸಿಬಿ ಕಳಪೆ ಪ್ರದರ್ಶನ ನೀಡುತ್ತಿದೆ. ಇಡೀ ತಂಡದಲ್ಲಿ ಯಾವ ಕನ್ನಡಿಗ ಆಟಗಾರ ಕೂಡ ಇಲ್ಲ. ಅಲ್ಲದೇ ರಾಜ್ಯದ ಕುಂಬ್ಳೆ ಅವರನ್ನು ಆ ಹುದ್ದೆಯಿಂದ ತೆಗೆಯಲು ತಂಡದ ನಾಯಕ ವಿರಾಟ್ ಕೊಹ್ಲಿಯೇ ಕಾರಣ ಎಂದು ತಮ್ಮ ಪತ್ರದಲ್ಲಿ […]

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಿನ್ನಮತ ಸ್ಪೋಟ: ಗಫೂರ್ ಭಾಷಣಕ್ಕೆ ಕಾರ್ಯಕರ್ತನಿಂದ ತಡೆ

ಕುಂದಾಪುರ: ಇಲ್ಲಿನ ಆರ್.ಎನ್ ಶೆಟ್ಟಿ ಮಿನಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗಫೂರ್ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರೆ ಅಡ್ಡಿಮಾಡಿದ ಘಟನೆ ನಡೆದಿದೆ. ಕಾರ್ಯಕರ್ತರ ಸಮಾವೇಶದಲ್ಲಿ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆಗಮಿಸಿದ್ದು, ನೆರೆದಿದ್ದ ಕಾರ್ಯಕರ್ತರಿಗೆ ಹಸ್ತಲಾಘವ ನೀಡಿ ಕುಶಲೋಪಹರಿ ವಿಚಾರಿಸುತ್ತಿದ್ದರು. ಈ ವೇಳೆಯಲ್ಲಿ ಭಾಷಣ ನಿಲ್ಲಿಸಿದ ಗಫೂರ್ ಪ್ರಮೋದ್ ಮಧ್ವರಾಜ್ ಅವರನ್ನು ಬರಮಾಡಿಕೊಂಡರು. ಮತ್ತೆ ಗಫೂರ್ ಭಾಷಣ ಆರಂಭಿಸುತ್ತಿದ್ದಂತೆ ಸಭಿಕರ ಸಾಲಿನಲ್ಲಿ ಕೂತ ಕಾಂಗ್ರೆಸ್ ಕಾರ್ಯಕರ್ತ ಚೋರಾಡಿ ಅಶೋಕ್ […]

ಇಷ್ಟು ದಿನ ಶೋಭಾ ಬಗ್ಗೆ ಇರದಿದ್ದ ವ್ಯಾಮೋಹ ಈಗ ಭಟ್ಟರಿಗೆ ಹೇಗೆ ಹುಟ್ಟಿತು?:ಪ್ರಮೋದ್ ಮಧ್ವರಾಜ್

ಕುಂದಾಪುರ: ರಘುಪತಿ ಭಟ್ಟರು ಇಲ್ಲಿಯವರೆಗೆ ಶೋಭಾ ಕರಂದ್ಲಾಜೆಯವರ ಒಂದೇ ಒಂದು ಫೋಟೋವನ್ನು ಫ್ಲೆಕ್ಸ್‌ಗೆ ಹಾಕಿಲ್ಲ. ಅವರ ಬಳಿ ಮಾತನಾಡುತ್ತಿರಲಿಲ್ಲ. ಶೋಭಾ ಮುಖವನ್ನು ನೋಡುತ್ತಿರಲಿಲ್ಲ. ಶೋಭಾ ಕರಂದ್ಲಾಜೆ ಇದ್ದ ಸಭೆಗೆ ಹೋಗುತ್ತಿರಲಿಲ್ಲ. ಇದೀಗ ಶೋಭಾ ಬಗ್ಗೆ ರಘುಪತಿ ಭಟ್ಟರಿಗೆ ಒಮ್ಮೇಲೆ ವ್ಯಾಮೋಹ ಹೇಗೆ ಹುಟ್ಟಿತು ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದ್ದಾರೆ. ಅವರು ಮಂಗಳವಾರ ಕುಂದಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಬಳಿಕ ತಮ್ಮ ವಿರುದ್ದ ರಘುಪತಿ ಭಟ್ ಅವರ ಸರಣಿ ಟೀಕೆಗಳಿಗೆ ಸುದ್ದಿಗಾರರ ಪ್ರಶ್ನೆಗೆ […]

ಮಹಿಳೆಯರ ಸುರಕ್ಷತೆಗಾಗಿ ರಾಣಿ ಅಬ್ಬಕ್ಕ ಪಡೆ ರಚನೆ

ಉಡುಪಿ: ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಾಣಿ ಅಬ್ಬಕ್ಕ ಪಡೆ ರಚಿಸಲಾಗಿದ್ದು, ಎಸ್ಪಿ ನಿಶಾ ಜೇಮ್ಸ್ ಅವರು ಇಂದು ಉದ್ಘಾಟಿಸಿದರು. ಈ ಪಡೆಯು ಶಾಲಾ ಕಾಲೇಜು ಪರಿಸರದಲ್ಲಿ ಅಸಭ್ಯ ವರ್ತನೆ ಮಾಡುವವರ ವಿರುದ್ಧ ಕ್ರಮದ ಜತೆಗೆ ಮೋಟಾರು ವಾಹನ ತಪಾಸಣೆ, ಕೋಟ್ಪಾ, ಪಿಟ್ಟಿ ಕೇಸ್, ಗಂಭೀರ ಪ್ರಕರಣಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಮಹಿಳಾ ಸುರಕ್ಷಿತೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಉಡುಪಿ ನಗರ, ಮಣಿಪಾಲ ಸುತ್ತಲಿನ ಪರಿಸರದಲ್ಲಿ ಕಾರ್ಯಾಚರಣೆ ಮಾಡಲಿದೆ. ಬಳಿಕ ಮಾತನಾಡಿದ ಎಸ್ಪಿ ನಿಶಾ ಜೇಮ್ಸ್ ಅವರು, ಉಡುಪಿ ನಗರ […]

ಶೋಭಾ ವೈಫಲ್ಯತೆ ಸದ್ಬಳಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ: ಅಮೃತ್ ಶೆಣೈ

ಉಡುಪಿ: ಕಾಂಗ್ರೆಸ್‌ ಹೈಕಮಾಂಡ್‌ ಸಂಸದೆ ಶೋಭಾ ಕರಂದ್ಲಾಜೆಯ ನಿಷ್ಕ್ರಿಯತೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯತೆಯನ್ನು ಸದ್ಬಳಕೆ ಮಾಡಿಕೊಂಡು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಬದಲು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಬಗ್ಗೆ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್‌ ಶೆಣೈ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಹೈಕಮಾಂಡ್‌  ನಿರ್ಧಾರ ಸಂಸದೆ […]