ಉಡುಪಿ: ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಾಣಿ ಅಬ್ಬಕ್ಕ ಪಡೆ ರಚಿಸಲಾಗಿದ್ದು, ಎಸ್ಪಿ ನಿಶಾ ಜೇಮ್ಸ್ ಅವರು ಇಂದು ಉದ್ಘಾಟಿಸಿದರು.
ಈ ಪಡೆಯು ಶಾಲಾ ಕಾಲೇಜು ಪರಿಸರದಲ್ಲಿ ಅಸಭ್ಯ ವರ್ತನೆ ಮಾಡುವವರ ವಿರುದ್ಧ ಕ್ರಮದ ಜತೆಗೆ ಮೋಟಾರು ವಾಹನ ತಪಾಸಣೆ, ಕೋಟ್ಪಾ, ಪಿಟ್ಟಿ ಕೇಸ್, ಗಂಭೀರ ಪ್ರಕರಣಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಮಹಿಳಾ ಸುರಕ್ಷಿತೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಉಡುಪಿ ನಗರ, ಮಣಿಪಾಲ ಸುತ್ತಲಿನ ಪರಿಸರದಲ್ಲಿ ಕಾರ್ಯಾಚರಣೆ ಮಾಡಲಿದೆ.
ಬಳಿಕ ಮಾತನಾಡಿದ ಎಸ್ಪಿ ನಿಶಾ ಜೇಮ್ಸ್ ಅವರು, ಉಡುಪಿ ನಗರ ಹಾಗೂ ಮಣಿಪಾಲ ಸುತ್ತಲಿನ ಪರಿಸರದಲ್ಲಿ ಕಾರ್ಯಾಚರಿಸಲಿದ್ದು, ಅಗತ್ಯ ಬಿದ್ದರೆ ಜಿಲ್ಲೆಗೆ ವಿಸ್ತರಿಸುವ ಆಲೋಚನೆಯಲ್ಲಿದ್ದೇವೆ. ಬಸ್‍ನಿಲ್ದಾಣ, ರೈಲ್ಪೆ ನಿಲ್ದಾಣ, ಶಾಲಾ ಕಾಲೇಜು, ಪಾರ್ಕಿಂಗ್ ಪ್ರದೇಶಗಳಲ್ಲಿ ಗಸ್ತು ತಿರುಗಲಿದೆ. ಮಹಿಳೆಯರಿಗೆ ತೊಂದರೆಯಾದರೆ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಸಣ್ಣಪುಟ್ಟ ಪ್ರಕರಣಗಳಿಗೆ ಪೆಟ್ಟಿ ಕೇಸು ದಾಖಲಿಸಿಕೊಂಡರೆ, ಗಂಭೀರ ಪ್ರಕರಣಗಳಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.
ಈ ಪಡೆಯಲ್ಲಿ (ವಾಹನ) ಮಹಿಳಾ ಠಾಣೆಯ ಎಸ್‍ಐ/ಎಎಸ್‍ಐ, 2, 3 ಮಹಿಳಾ ಸಿಬ್ಬಂದಿ, ಓರ್ವ ಪುರುಷ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಮಹಿಳಾ ಠಾಣೆಯ ಮಹಿಳಾ ಉಪನಿರೀಕ್ಷಕಿ ರೇಖಾ ನಾಯಕ್, ವೆಲೆಂಟ್ ಸೆಮಿನಾ, ಕಲ್ಪನಾ ಬಾಂಗ್ಲೆ, ಸೇಸಮ್ಮ, ಎಡಿಪಿ ಮುಮ್ತಾಜ್, ಎಎಸ್‍ಐ ಮುಕ್ತ, ಮಹಿಳಾ ಪೇದೆ ರುದ್ರಮ್ಮ ಉಪಸ್ಥಿತರಿದ್ದರು.