ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಉದ್ಯೋಗ ಮಾಹಿತಿ ಘಟಕ, ಐಕ್ಯೂಎಸಿ ಹಾಗೂ ಎನ್‍ಎಸ್‍ಡಿಸಿ ಸಂಸ್ಥೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಕಿಲ್ ಸಾಥಿ ಅಡಿಯಲ್ಲಿ ಮಾರ್ಚ್ 26 ರಂದು ಉದ್ಯೋಗ ಮತ್ತು ಸ್ವ ಉದ್ಯೋಗ ತರಬೇತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ವಿಭಾಗದ ಎನ್‍ಎಸ್‍ಡಿಸಿ ಟ್ರೈನಿಂಗ್ ಪ್ರೊವೈಡರ್ ಸುಬ್ರಹ್ಮಣ್ಯ, ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಉಚಿತವಾಗಿ 15 ದಿನಗಳಿಂದ 3 ತಿಂಗಳವರೆಗೆ ಕೆಲವು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಕಲಿಯುವುದಕ್ಕೆ ಅವಕಾಶ ಮಾಡಿಕೊಟ್ಟು ಅನಂತರ ಅವುಗಳ ಮಖೇನ ಉದ್ಯೋಗ ಪಡೆಯಲು ನೆರವು ನೀಡುತ್ತವೆ ಎಂದರು.
ಪ್ರಾಂಶುಪಾಲ ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿ, ಮಾತನಾಡಿ ನೀವು ಉದ್ಯೋಗ ಬೇಡುವವರಾಗಬೇಡಿ ಉದ್ಯೋಗ ಸೃಷ್ಟಿಸುವವರಾಗಿ ಎಂದು ಕರೆಕೊಟ್ಟರು.
ಉದ್ಯೋಗ ಮಾಹಿತಿ ಘಟಕದ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಎಚ್.ಕೆ. ವೆಂಕಟೇಶ್, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉದ್ಯೋಗ ಮಾಹಿತಿ ಘಟಕದ ಪದವಿ ವಿಭಾಗದ ಸಂಚಾಲಕ ಪ್ರೊ. ಉಮೇಶ ಪೈ ವಂದಿಸಿದರು. ಸುಮಾರು 150 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.