ಕುಂದಾಪುರ:ಮತದಾರರ ಜಾಗೃತಿ ಅಭಿಯಾನ

ಕುಂದಾಪುರ: ನಾವೆಲ್ಲರೂ ಸಂವಿಧಾನಾತ್ಮಕವಾದ ಹಕ್ಕನ್ನು ಕೇಳುತ್ತೇವೆ. ಸಂವಿಧಾನದಲ್ಲಿ ನಮ್ಮ ಕರ್ತವ್ಯಗಳೂ ಇವೆ. ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹೊಸದಾಗಿ ಮತದಾನ ಹಕ್ಕನ್ನು ಪಡೆದ ಯುವ ಮತಾದರರು ಯಾವುದೇ ಆಮಿಷಕ್ಕೊಳಗಾಗದೆ ಉತ್ಸಾಹದಿಂದ ಮತದಾನ ಮಾಡಬೇಕು ಎಂದು ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಹೇಳಿದರು. ಅವರು ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಮಂಗಳವಾರ ಕುಂದಾಪುರದ ಗಾಂಧಿಮೈದಾನದಲ್ಲಿ ಜರಗಿದ ಮತದಾರರ ಜಾಗೃತಿ ಅಭಿಯಾನಯನ್ನುದ್ದೇಶಿಸಿ ಮಾತನಾಡಿದರು. ಸ್ವತಂತ್ರವಾಗಿ ಆಲೋಚನೆ […]

ಆರ್ ಸಿ ಕ್ರಿಕೆಟ್ ಸಂಸ್ಥೆಯಿಂದ ಅಂಗವಿಕಲ-ಬಡಜನರ ಸಹಾಯಾರ್ಥ ಕ್ರಿಕೆಟ್ ಟೂರ್ನಿ:ಪ್ರಕೃತಿ ವೀರಕೇಸರಿ ತಂಡದ ಮಡಿಲಿಗೆ ಆರ್‌ಸಿ ಟ್ರೋಫಿ

ಉಡುಪಿ: ರಾಜೀವನಗರ ಕ್ರಿಕೆಟರ್ಸ್, ರಾಜೀವನಗರ–ಮಣಿಪಾಲ ಇವರ ಆಶ್ರಯದಲ್ಲಿ ಅಂಗವಿಕಲ ಮತ್ತು ಬಡಜನರ ಸಹಾಯಾರ್ಥವಾಗಿ ರಾಜೀವನಗರದ ಆರ್‌ಸಿ ಮೈದಾನದಲ್ಲಿ ಆಯೋಜಿಸಿದ್ದ ಎಂಟನೇ ವರ್ಷದ ‘ಆರ್‌ಸಿ ಟ್ರೋಫಿ-–2019’ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಕೃತಿ ವೀರಕೇಸರಿ ತಂಡ 44,444 ನಗದು ಪುರಸ್ಕಾರದೊಂದಿಗೆ ಆರ್‌ಸಿ ಟ್ರೋಫಿಯನ್ನು ಗೆದ್ದುಗೊಂಡಿತು. ಉದ್ಯಾವರದ ಶ್ರೀಗುರುಬ್ರಹ್ಮ ತಂಡ 22,222 ನಗದು ಪುರಸ್ಕಾರದೊಂದಿಗೆ ರನ್ನರ್‌ಅಪ್‌ ಪ್ರಶಸ್ತಿಯನ್ನು ಪಡೆದುಕೊಂಡಿತು. ಪ್ರಕೃತಿ ವೀರಕೇಸರಿ ತಂಡದ ಸಚಿನ್‌ ಕೋಟೇಶ್ವರ ಪಂದ್ಯ ಶ್ರೇಷ್ಠ ಹಾಗೂ ಅದೇ ತಂಡದ ಪ್ರದೀಪ್‌ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಶ್ರೀಗುರುಬ್ರಹ್ಮ […]

ಸಾಲಿಗ್ರಾಮದಲ್ಲಿ ಸಾಧಕರಿಗೆ, ಹಿರಿಯ ಮಹಿಳೆಯರಿಗೆ ಸನ್ಮಾನ

ಕುಂದಾಪುರ: ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿನ ಜ್ಞಾನ ಮಂದಿರದಲ್ಲಿ ಮಹಿಳಾ ವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ,(ರಿ) ಸಾಲಿಗ್ರಾಮ ಅಂಗಸಂಸ್ಥೆ ವತಿಯಿಂದ ಸ್ಥಳೀಯ ಗ್ರಾಮದ ಹಿರಿಯ ಕ್ರಿಯಾ ಶೀಲ ಮಹಿಳೆಯರನ್ನು ಗೌರವಿಸಲಾಯಿತು. ಸಾಧಕ ಮಹಿಳೆಯಾರಾದ ಡಾ.ರೋಹಿಣಿ ಹಂದೆ, ಸಾಲಿಗ್ರಾಮ ಹಾಗೂ ಕೆ.ಶಾಂತಾ ಐತಾಳ್ ರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಅನಂತಪದ್ಮನಾಭ ಐತಾಳ, ಸಿ.ಚಿತ್ರಾ ಕಾರಂತ, ಶ್ರೀಪತಿ ಅಧಿಕಾರಿ ಮತ್ತು ಸನ್ಮಾನಿತರೊಂದಿಗೆಮಹಿಳಾ ವೇದಿಕೆ ಕಾರ್ಯಕರ್ತರು ಈ ಸಂಭ್ರಮದಲ್ಲಿ ಉಪಸ್ಥಿತರಿದ್ದರು

ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ರಂಗಭೂಮಿ: ಪಾರ್ವತಿ ಜಿ. ಐತಾಳ್

ಕುಂದಾಪುರ: ರಂಗಭೂಮಿ ತಂಡದ ನಿರ್ಮಾಣ ಅತ್ಯಂತ ಕ್ಷಿಷ್ಟಕರವಾದದ್ದು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕೆ ಇಂತಹ ರಂಗಭೂಮಿಗೆ ಸಾಧ್ಯ. ಹೊಸ ಅಲೆಯ ಹೊಸ ಕಲ್ಪನೆಯ ನಾಟಕಗಳನ್ನು ಹಳ್ಳಿ ಹಳ್ಳಿಗೆ ತಲುಪಿದರೆ ಮಾತ್ರ ಇಂತಹ ಪ್ರಯೋಗಗಳು ಸಾರ್ಥಕ ಎಂದು ಸಾಹಿತಿ ಪಾರ್ವತಿ ಜಿ. ಐತಾಳ್ ಅಭಿಪ್ರಾಯಪಟ್ಟರು. ಅವರು ಯಕ್ಷದೀಪ ಕಲಾಟ್ರಸ್ಟ್ (ರಿ.) ತೆಕ್ಕಟ್ಟೆ ಇದರ ಮೂರನೇ ವರ್ಷದ ವಾರ್ಷಿಕೋತ್ಸವ ‘ರಂಗೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಮಾತನಾಡಿ, ಚಿಂತನೆ ಹಾಗೂ ಭಾವನೆಗಳನ್ನು […]

ಆಗುಂಬೆ ಘಾಟಿ ವಾಹನ ಸಂಚಾರ ನಿಷೇಧ: ಆದೇಶ ಹಿಂತೆಗೆತ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯ ಮೂಲಕ ವಾಹನ ಸಂಚಾರವನ್ನು ಮಾರ್ಚ್ 19 ರಿಂದ 30 ದಿನಗಳ ವರೆಗೆ ನಿಷೇಧಿಸಿ ಮಾರ್ಚ್  7 ರಂದು ಆದೇಶ ಹೊರಡಿಸಲಾಗಿದ್ದು, ಆದರೆ ಕಾರ್ಕಳ, ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರಕ್ಷಣಾ ತಡೆಗೋಡೆಗಳ ಮರು ನಿರ್ಮಾಣ ಹಾಗೂ ದುರಸ್ಥಿ ಕಾರ್ಯ ಆರಂಭಿಸಲು ಅರಣ್ಯ ಇಲಾಖೆಯ ಮೇಲಾಧಿಕಾರಿಗಳಿಂದ ಸೂಕ್ತ ನಿರ್ದೇಶನದ ಅನುಮತಿ ಪಡೆಯುವುದಾಗಿ ತಿಳಿಸಿರುವುದರಿಂದ ಅನುಮತಿ ದೊರಕುವವರೆಗೂ ಸದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಹೊರಡಿಸಿದ್ದ […]