ಅಧಿಕ ಮೊತ್ತದ ನಗದು ವಶ: ಅಪೀಲಿಗೆ ಸಮಿತಿ

ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರೂ. 50,000/- ಕ್ಕಿಂತ ಜಾಸ್ತಿ ಮೊತ್ತದ ನಗದನ್ನು ಯಾವುದೇ ದಾಖಲಾತಿ ಇಲ್ಲದೇ ಕೊಂಡೊಯ್ಯುವುದು ಕಂಡು ಬಂದಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ನಿರತ ಸರ್ಕಾರಿ ಸಿಬ್ಬಂದಿಗಳು ನಿಯಮಾನುಸಾರ ನಗದು ವಶಪಡಿಸಿ ಖಜಾನೆಗೆ ಜಮಾ ಮಾಡಿ ರಶೀದಿ ನೀಡುವರು. ಈ ಸಂದರ್ಭದಲ್ಲಿ ಬಾಧಿತ ವ್ಯಕ್ತಿಗಳು ಸೂಕ್ತ ದಾಖಲಾತಿಗಳೊಂದಿಗೆ (ಆಧಾರ್ ಕಾರ್ಡ್ ಪ್ರತಿ, ಎಟಿಎಂ ಸ್ಲಿಪ್, ಬ್ಯಾಂಕ್ ಪಾಸ್ ಬುಕ್‍ನ ಪ್ರತಿ ಸೇರಿದಂತೆ ಇತರ ವ್ಯವಹಾರದ ಮಾಹಿತಿ ) ಮುಖ್ಯ ಕಾರ್ಯ […]

ಹಿರಿಯಡಕ: ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದ ಯುವ ರೆಡ್‍ಕ್ರಾಸ್ ಘಟಕ ಮತ್ತು ರೋವರ್-ರೇಂಜರ್ ಘಟಕಗಳ ವತಿಯಿಂದ ಇತ್ತೀಚೆಗೆ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ನಡೆಯಿತು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳು ಮತ್ತು ಆರೋಗ್ಯ ಪಾಲಿ ಕ್ಲಿನಿಕ್, ನೇಜರ್, ಸಂತೆಕಟ್ಟೆ ವೈದ್ಯ ಡಾ| ಕೀರ್ತಿ ಪಾಲನ್ ಪ್ರಥಮ ಚಿಕಿತ್ಸಾ ತರಬೇತಿಯನ್ನು ನಡೆಸಿಕೊಟ್ಟರು. ಪ್ರಥಮ ಚಿಕಿತ್ಸೆ ಎಂದರೇನು? ತಿಳಿಸಿ, […]