ಮಕ್ಕಳ ಭವಿಷ್ಯ ಕಾಪಾಡಲು ಪೋಲಿಯೋ ಹಾಕಿಸಿ: ಡಾ. ಜಯಮಾಲಾ

ಉಡುಪಿ: ಮಕ್ಕಳ ಭವಿಷ್ಯ ಆರೋಗ್ಯಕರವಾಗಿರುವ ದೃಷ್ಠಿಯಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ. ಅವರು ಭಾನುವಾರ, ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿ ಮಾತನಾಡಿದರು. ಪೋಲಿಯೋ ಲಸಿಕೆ ಮಕ್ಕಳ ಬದುಕಿಗೆ ಅಮೃತಬಿಂದು ಇದ್ದ ಹಾಗೆ, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ ಅವರ ಭವಿಷ್ಯವನ್ನು […]

ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ

ಕುಂದಾಪುರ: ವ್ಯಕ್ತಿಯೋರ್ವ ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಹಾಗೂ ಕಳವಳಕಾರಿ ಘಟನೆಯೊಂದು ಕುಂದಾಪುರದಲ್ಲಿ ಭಾನುವಾರ ನಡೆದಿದೆ. ಕತ್ತಿಯಿಂದ ಕಡಿದುಕೊಂಡ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಿವಾಸಿ ಮುದಿಯಪ್ಪ(35) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್‍ನಲ್ಲಿ ಕೂತು ಕತ್ತಿಯಿಂದ ತನ್ನ ವೃಷಣ ಭಾಗವನ್ನು ಕುಯ್ದುಕೊಳ್ಳುತ್ತಿರುವಾಗ ಸಾರ್ವಜನಿಕರು ನೋಡಿ ಕತ್ತಿಯನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಕೂಡಲೇ ಆತ ಕತ್ತಿಯನ್ನು ಬೀಸುತ್ತಲೇ ತನ್ನ ಕುತ್ತಿಗೆ ಭಾಗವನ್ನು ಕಡಿಕೊಳ್ಳುತ್ತಾ ರಾಮಮಂದಿರ ರಸ್ತೆ ಮಾರ್ಗವಾಗಿ […]

ಬೆಳ್ಮಣ್ ಉಚಿತ ವೈದ್ಯಕೀಯ ಶಿಬಿರ.. ಆರೋಗ್ಯವಂತ ಜನತೆ ದೇಶದ ಸಂಪತ್ತು- ಸುನಿಲ್ ಕುಮಾರ್

ಕಾರ್ಕಳ: ಇನ್ನಾ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ, ಲಯನ್ಸ್ ಕ್ಲಬ್ ಬೆಳ್ಮಣ್ ಆಶ್ರಯ ದಲ್ಲಿ ಉಚಿತ ವೈದ್ಯಕೀಯ ಶಿಬಿರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆಯಿತು. ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯೆಕ್ಷತೆ  ವಹಿಸಿದ್ದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, ಆರೋಗ್ಯ ವಂತ ಜನತೆ ದೇಶದ ನಿಜವಾದ ಸಂಪತ್ತು. ಅದನ್ನು ರಕ್ಷಿಸುವಲ್ಲಿ ಸರಕಾರದ ಜೊತೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ಜನರ ಆರೋಗ್ಯವನ್ನು ರಕ್ಷಿಸುವ […]

ಬಹುಭಾಷಾ ಸಿನಿಮಾಗೆ ಹೊಸ ಭಾಷ್ಯ ಬರೆದ ಕರಾವಳಿಯ ಶ್ರದ್ಧೆಯ ನಟಿ ಶ್ರದ್ಧಾ ಸಾಲ್ಯಾನ್

ಈಗಿನ ಕಾಲದಲ್ಲಿ ಒಂದು ಕಿರುಚಿತ್ರ ದಲ್ಲಿ ನಟಿಸಿದರೆ ಸಾಕು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ ನಟಿಯರಂತೆ ಭಿಗುತ್ತಾರೆ, ಅಹಂ ಎನ್ನುವುದನ್ನು ಬದಿಗಿಟ್ಟು ನಟಿಸುವವರು ಇಂತಹವರಲ್ಲಿ ಮಾತ್ರ ಕಾಣ ಸಿಗುತ್ತಾರೆ. ಇವರು ತನ್ನ ಕಲಾಚಾತುರ್ಯದಿಂದ, ಕಲಾಸೇವೆಯಲ್ಲಿ ಅದೆಷ್ಟೋ ಉನ್ನತ ಶಿಖರ ಏರಿದರು ಗರ್ವ ಎನ್ನುವ ಹಿರಿತನವಿಲ್ಲದೆ ಕಲಾಸೇವೆಯಲ್ಲಿ ಸಿರಿತನ ಮೆರೆದ ಕರಾವಳಿಯ ಹೆಮ್ಮೆಯ ಬಹು ಭಾಷಾ ನಟಿ ಶ್ರದ್ಧಾ ಸಾಲ್ಯಾನ್. ಜಾಹೀರಾತಿನಿಂದ ಜಾಹೀರಾದರು: ಅಂದು  ಓರ್ವ ನಟಿಯಾಗಬೇಕೆಂಬ ಕನಸನ್ನು ಕಂಡ ಚಿಕ್ಕ ಹುಡುಗಿ, 17 ನೇ ವಯಸ್ಸಿನಲ್ಲಿ ಗ್ಲಾಮರ್ […]

149 ಪ್ರಯಾಣಿಕರಿದ್ದ ವಿಮಾನ ಪತನ

ನೈರೋಬಿ: 149 ಪ್ರಯಾಣಿಕರು ಹಾಗೂ 8 ಮಂದಿ ಸಿಬಂದಿಯನ್ನೊಳಗೊಂಡ ‘ಇಥಯೋಪಿಯನ್’ ಇಂದು (ಮಾ.10) ಬೆಳಿಗ್ಗೆ 8.44ಕ್ಕೆ  ಪತನಗೊಂಡಿದೆ. ರವಿವಾರ ಅಡ್ಡಿಸ್ ಅಬಾಬದಿಂದ ಕೆಲವೇ ಕಿಮೀ ದೀರದಲ್ಲಿರುವ ಬಿಶೋಪ್ತು ಪಟ್ಟಣದಲ್ಲಿ ಪತನಗೊಂಡಿದೆ. ಪತನಗೊಂಡಿರುವ ವಿಮಾನ ಇಟಿ 302 ಎಂದು ವಿದೇಶಿ ಮಾದ್ಯಮಗಳು ವರದಿ ಮಾಡಿವೆ.