ಬಹುಭಾಷಾ ಸಿನಿಮಾಗೆ ಹೊಸ ಭಾಷ್ಯ ಬರೆದ ಕರಾವಳಿಯ ಶ್ರದ್ಧೆಯ ನಟಿ ಶ್ರದ್ಧಾ ಸಾಲ್ಯಾನ್

ಈಗಿನ ಕಾಲದಲ್ಲಿ ಒಂದು ಕಿರುಚಿತ್ರ ದಲ್ಲಿ ನಟಿಸಿದರೆ ಸಾಕು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ ನಟಿಯರಂತೆ ಭಿಗುತ್ತಾರೆ, ಅಹಂ ಎನ್ನುವುದನ್ನು ಬದಿಗಿಟ್ಟು ನಟಿಸುವವರು ಇಂತಹವರಲ್ಲಿ ಮಾತ್ರ ಕಾಣ ಸಿಗುತ್ತಾರೆ. ಇವರು ತನ್ನ ಕಲಾಚಾತುರ್ಯದಿಂದ, ಕಲಾಸೇವೆಯಲ್ಲಿ ಅದೆಷ್ಟೋ ಉನ್ನತ ಶಿಖರ ಏರಿದರು ಗರ್ವ ಎನ್ನುವ ಹಿರಿತನವಿಲ್ಲದೆ ಕಲಾಸೇವೆಯಲ್ಲಿ ಸಿರಿತನ ಮೆರೆದ ಕರಾವಳಿಯ ಹೆಮ್ಮೆಯ ಬಹು ಭಾಷಾ ನಟಿ ಶ್ರದ್ಧಾ ಸಾಲ್ಯಾನ್.

ಜಾಹೀರಾತಿನಿಂದ ಜಾಹೀರಾದರು:

ಅಂದು  ಓರ್ವ ನಟಿಯಾಗಬೇಕೆಂಬ ಕನಸನ್ನು ಕಂಡ ಚಿಕ್ಕ ಹುಡುಗಿ, 17 ನೇ ವಯಸ್ಸಿನಲ್ಲಿ ಗ್ಲಾಮರ್ ಪ್ರಪಂಚಕ್ಕೆ ಪ್ರವೇಶಿಸುತ್ತಾರೆ. ಇವರು ಹುಟ್ಟಿ ಬೆಳೆದದ್ದು ಮುಂಬೈ ಮಹಾನಗರದಲ್ಲಿ, ಉಡುಪಿ ಮೂಲದ ಅಶೋಕ್ ಸಾಲ್ಯಾನ್ ಮತ್ತು  ಮೀನಾ ಸಾಲ್ಯಾನ್ ದಂಪತಿ ಪುತ್ರಿ. ಶ್ರದ್ಧಾ ಶಾಲೆಯ ದಿನಗಳಲ್ಲಿ ನೃತ್ಯ, ನಾಟಕ ಮತ್ತು ನಟನೆ, ಫ್ಯಾಷನ್ ಡಿಸೈನಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.


ಚಿತ್ರರಂಗಕ್ಕೆ ಬರುವ ಮುಂಚೆ, ಅವರು ತಮ್ಮ 12 ವರ್ಷಗಳ ವೃತ್ತಿಜೀವನದಲ್ಲಿ, ಪ್ರಸಿದ್ಧ ಬ್ರಾಂಡ್ಗಳು ಮತ್ತು ದಿನನಿತ್ಯದ ಸೋಪ್ಗಳ ಕಂಪೆನಿ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು.


ಶ್ರದ್ಧಾ 92.7 ಬಿಗ್ ಎಫ್ಎಂ ವಿಥ್ ಅಭಿಷೇಕ್ ಬಚ್ಚನ್, ಬಿಬಿಸಿ, ಸಿಎನ್ಬಿಸಿ ಹೋಂ 18, ಐಪಿಎಲ್ ಸೆಟ್ ಮ್ಯಾಕ್ಸ್ ಪ್ರೊಮೊ, ಸ್ಟಾರ್ ಪ್ಲಸ್ ಪ್ರೋಮೋ, ಗೋಲ್ಡ್ ವಿನ್ನರ್ ಅಡುಗೆ ಎಣ್ಣೆ, 9 ಎಕ್ಸ್ ಟಿವಿ ಚಾನಲ್ ಮತ್ತು ಜಾಂಡು ಸ್ನೀಜ್ ಚಿಕಿತ್ಸೆ, ದೆಹಲಿಯಲ್ಲಿ ಸರ್ಕಾರಿ ಜಾಹೀರಾತಿನಂತಹ ಬ್ರಾಂಡ್ಗಳೊಂದಿಗೆ, ಅಸಂಖ್ಯಾತ ಜಾಹೀರಾತುಗಳನ್ನು ಕೂಡ ಮಾಡಿದ್ದಾರೆ.

ಧಾರವಾಹಿಗಳಲ್ಲೂ ಸೈ: ಸಿನಿಮಾಗೂ ಜೈ

ಶ್ರದ್ಧಾ ಅವರು ಬಾಲಿವುಡ್ ಚಿತ್ರ ಕಿಸ್ ಹದ್ ತಕ್ ಹಾಗು ಇದುವರೆಗೆ ಮೂರು ಹಿಂದಿ ದೈನಂದಿನ ಧಾರಾವಾಹಿ ‘ ಸಾವಧಾನ್ ಇಂಡಿಯಾ’, ‘ಜಿನೀ ಔರ್ ಜುಜು’ ಮತ್ತು ‘ಜ್ಹಿಲ್ ಮಿಲ್ ಸಿತಾರೊ ಕಾ ಆಂಗನ್ ಹೋಗಾ’ಗಳಲ್ಲಿಯೂ  ಕಾಣಿಸಿಕೊಂಡಿದ್ದಾರೆ.
ನಂತರ ರಾಮ್ ಶೆಟ್ಟಿ ಅವರು ನಿರ್ದೇಶಿಸಿದ ‘ಸೂಪರ್ ಮರ್ಮೇಯ್’ ಚಿತ್ರದ ಮೂಲಕ ತುಳು ಚಿತ್ರ ರಂಗಕ್ಕೆ ಕಾಲಿಟ್ಟರು. ತುಳು ರಂಗಭೂಮಿಯಲ್ಲಿ ಮೈ ನೇಮ್ಇಸ್ಅಣ್ಣಪ್ಪ, ಪ್ರಸ್ತುತ ಚಿತ್ರ ರಡ್ದು ಎಕ್ರೆ, ಏರೆಗ್ ಆವುಯೇ ಕಿರಿಕಿರಿ, ಆಟಿಡೊಂಜಿ ದಿನ ತುಳು ಚಿತ್ರಗಳಲ್ಲಿ ಹಾಗೂ ರತ್ನಮಂಜರಿ ಕನ್ನಡ ಸಿನಿಮಾದಲ್ಲಿ ತನ್ನ ಪ್ರತಿಭೆಯ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ಶ್ರದ್ದೆಯೇ ಶ್ರದ್ದಾಗೆ ಆಸ್ತಿ:

ನಟನಾ ಕ್ಷೇತ್ರವು ತುಂಬಾ ಸ್ಪರ್ಧಾತ್ಮಕವಾಗಿದೆ, ಸವಾಲುಗಳನ್ನು ಎದುರಿಸಿಸಲು  ಎಂದಿಗೂ ಸಿದ್ಧರಿರಬೇಕಷ್ಟೆ, ಮಾಡುವ  ಕೆಲಸದಲ್ಲಿ ಉತ್ಸಾಹ, ಶ್ರದ್ದೆ, ಹರ್ಡ್ವಾರ್ಕ್ ಅತಿಮುಖ್ಯ ಎನ್ನುತ್ತಾರೆ  ಶ್ರದ್ಧಾ. ತಪ್ಪುಗಳನ್ನು ತಿದ್ದಿಸಿ, ಬೆಳೆಸಿದ ತಂದೆ-ತಾಯಿಯೇ ಇವರಿಗೆ ಸ್ಪೂರ್ತಿಯಂತೆ. ಪ್ರತಿಯೊಬ್ಬ ಕಲಾವಿದರಿಗೂ ಅನೇಕ ಅವಮಾನಗಳ ಮೆಟ್ಟಿಲುಗಳು ಎದುರಾಗುತ್ತವೆ, ಅದನೆಲ್ಲವನ್ನು ಮೆಟ್ಟಿ ನಿಂತರೆ ಮಾತ್ರ ಮೇಲೇರಿ ಯಶಸ್ಸು ಸಾಧಿಸಲು ಆಗುತ್ತದೆ ಎನ್ನುವುದು ಇವರ ಮಾತು. ತುಳು ಭಾಷೆ ಉಳಿಯಬೇಕು, ತುಳುನಾಡ ಸಂಸ್ಕೃತಿಯನ್ನು ಬೆಳೆಸಬೇಕು, ತುಳು ಚಿತ್ರರಂಗಕ್ಕೆ ಹೊಸತೇನಾದರೂ ಕೊಡಬೇಕು ಎನ್ನುವ ಸ್ಪೂರ್ತಿಯಿಂದ ಇದೀಗ ಉತ್ತಮ ಕಲಾವಿದೆಯಾಗಿ ಮಿಂಚುತ್ತಿದ್ದಾರೆ.ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ. ಅನೇಕ ಪ್ರಶಸ್ತಿಗಳು ಇವರ ಜೋಳಿಗೆ ಸೇರಿವೆ. ಇವರ ಸಾಧನೆಗೆ ನಿಮ್ಮದ್ದೊಂದು ಪುಟ್ಟ ಸಲಾಂ ಬೇಕೇ ಬೇಕು.