ಶಿಕ್ಷಕರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ: ಶೇಷಶಯನ ಕಾರಿಂಜ 

ಉಡುಪಿ: ಶಿಕ್ಷಕರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಉಡುಪಿ ಎಸ್‌ಸಿ—ಎಸ್‌ಟಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಹಮ್ಮಿಕೊಂಡ ಎಸ್‌ಸಿ—ಎಸ್‌ಟಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಜಿಲ್ಲಾಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ವಂಚಿತ ಮಕ್ಕಳಿಗೆ ಯಾವ ರೀತಿ ನ್ಯಾಯ ಒದಗಿಸಬಹುದು ಹಾಗೂ ಶಿಕ್ಷಣ […]

ವಿಲ್ಲೇಜ್ ಲೈಫ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಉಡುಪಿ: ತ್ರಿವರ್ಣ ಆರ್ಟ್‌ ಸೆಂಟರ್‌ ಆಶ್ರಯದಲ್ಲಿ ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಮಣಿಪಾಲ ಗೀತಾಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ವಿಲ್ಲೇಜ್‌ ಲೈಫ್‌’ ಚಿತ್ರಕಲಾ ಪ್ರದರ್ಶನಕ್ಕೆ ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್‌  ಶನಿವಾರ ಚಾಲನೆ ನೀಡಿದರು. ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್‌. ಶಾಂತಾರಾಮ್‌ ಮಾತನಾಡಿ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ, ಆಟಗಳನ್ನು ಗುರುತಿಸಿಕೊಳ್ಳಲು ಚಿತ್ರಕಲಾ ಪ್ರದರ್ಶನ ಸಹಕಾರಿಯಾಗಿದೆ. ಗ್ರಾಮಗಳು ನಗರಗಳಾಗಿ ಪರಿವರ್ತನೆಯಾಗುತ್ತಿರುವ ಈ […]

ಡಾ. ಕಾಂತಿ ಶೆಟ್ಟಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಕಾರ್ಕಳ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಮಾಡುವ ಕಿತ್ತೂರು ರಾಣಿ‌ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳ ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಅವರು ಪುರಸ್ಕೃತರಾಗಿದ್ದಾರೆ. ಇಲಾಖೆಯ ವತಿಯಿಂದ ಮಾ. 8ರಂದು ರವೀಂದ್ರ ಕಲಾ ಕ್ಷೇತ್ರ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಡಾ. ಜಯಮಾಲ ರಾಮಚಂದ್ರ  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ‌ ಗೌರವಿಸಿದರು.

ಉಡುಪಿ ಮೂಲದ ಈ ಲವ್ಲೀ ಬೆಡಗಿಗೆ ಮಿಸೆಸ್ ಯೂನಿವರ್ಸಲ್ ಕಿರೀಟ ಮುಡಿಯುವಾಸೆ:ಮದ್ವೆಯಾದ ಮಹಿಳೆಯರಿಗೂ ಇವರು ರೋಲ್ ಮಾಡೆಲ್

 ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಸಖತ್ ಆಗಿ ಮಿಂಚಿದ ನಮ್ಮ  ಉಡುಪಿಯ ಮಹಿಳೆ ಪದ್ಮಾಗಡಿಯಾರ್,ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದು ಗಮನ ಸೆಳೆದ ಮಿಂಚಿನ ವ್ಯಕ್ತಿತ್ವ. ಇವರು ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ.ಇಂದ್ರಾಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಜಿಎಂ ಕಾಲೇಜಿನಲ್ಲಿ ಪಿಯುಸಿ,ಪೂರೈಸಿ ದಂತ ವೈದ್ಯಕೀಯ ಶಿಕ್ಷಣವನ್ನು ಮಂಗಳೂರಿನ ಯೇನಪೋಯ ವಿಶ್ವವಿದ್ಯಾಲಯದಲ್ಲಿ ಪಡೆದಿರುವ ಡಾ.ಪದ್ಮಾ ದಂತ ವೈದ್ಯೆಯಾಗಿಯೂ ಸಮಾಜಕ್ಕೆ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪತಿ ಡಾ.ಸನಯ್ ಗಡಿಯಾರ್ ಕೂಡ ವೈದ್ಯರು. ಪ್ರಸ್ತುತ […]