ಉಡುಪಿ ಮೂಲದ ಈ ಲವ್ಲೀ ಬೆಡಗಿಗೆ ಮಿಸೆಸ್ ಯೂನಿವರ್ಸಲ್ ಕಿರೀಟ ಮುಡಿಯುವಾಸೆ:ಮದ್ವೆಯಾದ ಮಹಿಳೆಯರಿಗೂ ಇವರು ರೋಲ್ ಮಾಡೆಲ್

 ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಸಖತ್ ಆಗಿ ಮಿಂಚಿದ ನಮ್ಮ  ಉಡುಪಿಯ ಮಹಿಳೆ ಪದ್ಮಾಗಡಿಯಾರ್,ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದು ಗಮನ ಸೆಳೆದ ಮಿಂಚಿನ ವ್ಯಕ್ತಿತ್ವ.

ಇವರು ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ.ಇಂದ್ರಾಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಂಜಿಎಂ ಕಾಲೇಜಿನಲ್ಲಿ ಪಿಯುಸಿ,ಪೂರೈಸಿ ದಂತ ವೈದ್ಯಕೀಯ ಶಿಕ್ಷಣವನ್ನು ಮಂಗಳೂರಿನ ಯೇನಪೋಯ ವಿಶ್ವವಿದ್ಯಾಲಯದಲ್ಲಿ ಪಡೆದಿರುವ ಡಾ.ಪದ್ಮಾ ದಂತ ವೈದ್ಯೆಯಾಗಿಯೂ ಸಮಾಜಕ್ಕೆ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪತಿ ಡಾ.ಸನಯ್ ಗಡಿಯಾರ್ ಕೂಡ ವೈದ್ಯರು. ಪ್ರಸ್ತುತ ಪುತ್ರಿ ಸಮಾ, ಪುತ್ರ ಶಯನ್ ಜತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ ಉಡುಪಿಯನ್ನು ಇವರು ಮರೆತಿಲ್ಲ

ಏನ್ ಸಾಧನೆ?

ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ನಲ್ಲಿ  ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.  ಮುಂಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು,  ಆ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿಕೊಂಡು ದೇಶಕ್ಕೆ, ನಮ್ಮ ಉಡುಪಿಗೆ ಇವರು ಕೀರ್ತಿ ತರುತ್ತಾರೆ ಎನ್ನುವ ನಿರೀಕ್ಷೆ ಎಲ್ಲರದ್ದು.

ಹೆಮ್ಮೆಯ ವೈದ್ಯೆ:

ಇವರು ಕಳೆದ 11ವರ್ಷದಿಂದ ವೈದ್ಯರಾಗಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

“ ಮಹಿಳೆಯರು ಮನಸ್ಸು ಮಾಡಿದರೆ ಜಗವನ್ನೇ ಗೆಲ್ಲಲು ಸಾಧ್ಯ. ಮಹಿಳೆಗೆ ಹಲವಾರು ಕೆಲಸಗಳನ್ನು ಒಂದೇ ಸಲ ಮಾಡುವ ಸಾಮರ್ಥ್ಯ  ಇದೆ. ಕುಟುಂಬದ ಯೋಗಕ್ಷೇಮ ಹಾಗೂ ಕೆಲಸವನ್ನು ಏಕಕಾಲಕ್ಕೆ ಮಾಡಲು ಮಹಿಳೆಗೆ ಸಾಧ್ಯ”ಎನ್ನುತ್ತಾರೆ ಪದ್ಮಾಗಡಿಯಾರ್.

ನಿಮ್ಮ ಸೌಂದರ್ಯದ ರಹಸ್ಯವೇನು ಅಂತ ಪ್ರಶ್ನೆ ಮಾಡಿದರೆ, ಪ್ರತೀದಿನ ಒಂದರಿಂದ ಒಂದೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ. ಜೊತೆಗೆ ಜಿಮ್, ಆಹಾರ ಪಥ್ಯ ಕೂಡ ಮಾಡುತ್ತಿದ್ದೇನೆ ಎನ್ನುತ್ತಾರೆ ಇವರು.

ಏನೇ ಹೇಳಿ, ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್. ಕನ್ನಡಿಗರು ಹೆಮ್ಮೆ ಪಡುವಂತಹ  ಉಡುಪಿ ಮಂದಿ ಕೂಡ ಖುಷಿ ಪಡುವಂತಹ ಸಾಧನೆ ತೋರಿರುವುದು ಗಮನಾರ್ಹ ಸಂಗತಿ.

ಮೆಕ್ಸಿಕೋದಲ್ಲಿ ನಡೆಯಲಿರುವ `ಮಿಸೆಸ್ ಯೂನಿವರ್ಸ್’ ಸ್ಪರ್ಧೆಗೆ  ತಯಾರಿ ನಡೆಸುತ್ತಿದ್ದಾರೆ.

ಏನ್ ಕನಸು ?

ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳೆಯುವುದರ ಜತೆಗೆ ,ಮಕ್ಕಳು ಹಾಗೂ ಕುಟುಂಬವನ್ನು ನೋಡಿಕೊಳ್ಳಬೇಕು. ಈಗಾಗಲೇ ಹಲವು ಜಾಹಿರಾತು ಸಂಸ್ಥೆಗಳು ಸಂಪರ್ಕಿಸಿವೆ ಸೂಕ್ತ ಅವಕಾಶಗಳನ್ನು ಬಳಸಿಕೊಳ್ಳುತ್ತೇನೆ .ಇದರ ಜತೆಗೆ ಬೈ ,ಬಿಲ್ಡ್,ಸೇಲ್ ಎಂಬ ಪುಸ್ತಕ ಬರೆದಿದ್ದೇನೆ ಸದ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ ಡೆಂಟಿಸ್ಟ್ಗಳು ಉದ್ಯಮಿಗಳಾವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ  ಇಲ್ಲಿದೆ ಎನ್ನುತ್ತಾರೆ.

2019 ಆಗಸ್ಟ್ ಮೊದಲ ವಾರದಲ್ಲಿ ಮೆಕ್ಸಿಕೋದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು ,ಒಂದು ವಾರ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಫೋಟೋಗ್ರಫಿ,ಹೆಲ್ತ್ ಅಂಡ್ ಫಿಟ್ನೆಸ್ ,ಪ್ರಶ್ನೋತ್ತರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಮಿಸ್ಸೆಸ್ ಆಸ್ಟ್ರೇಲಿಯಾ ,ಮಿಸ್ಸೆಸ್ ಸೌತ್ ಇಂಡಿಯಾ ಏಷ್ಯಾ  ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದಾರೆ ಭಾರತದಿಂದ ಸ್ಪರ್ದಿಸುತ್ತಿರುವ ಏಕೈಕ ಸ್ಪರ್ಧಿಯಾಗಿದ್ದೇನೆ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ ಎನ್ನುತ್ತಾರೆ ಪದ್ಮ ಗಡಿಯಾರ್.