ಚುನಾವಣೆ: ರಾಜಕೀಯ ಸಭೆಗಳ ಸಂಪೂರ್ಣ ವೀಡಿಯೋ ಚಿತ್ರೀಕರಣ- ಡಿಸಿ ಸೂಚನೆ

ಉಡುಪಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ನಡೆಯುವ ಎಲ್ಲಾ ಸಭೆ ಸಮಾರಂಭಗಳನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಿ, ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿ ಹೆಫ್ಸಿಭಾ ರಾಣಿ ಕೊರ್ಲಪತಿ ಸೂಚಿಸಿದ್ದಾರೆ.  ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ವಿವಿಧ ನೋಡಲ್ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು. ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸಭೆ ಸಮಾರಂಭಗಳಿಗೂ ಕಡ್ಡಾಯವಾಗಿ  ಅನುಮತಿ ಪಡೆಯಲೇಬೇಕು.  ಚುನಾವಣಾ ಸಭೆ ಆರಂಭವಾಗುವುದಕ್ಕಿಂತಲೂ ಒಂದು ಗಂಟೆ ಮುಂಚೆಯೇ ಸಂಬಂಧಪಟ್ಟ ಅಧಿಕಾರಿಗಳು […]

ಸಂಧಾನ ಎರಡೂ ಸಮುದಾಯಕ್ಕೆ ಸಮ್ಮತವಾಗಿರಲಿ, ರಾಮಮಂದಿರ ನಿರ್ಮಾಣ ವಿಳಂಬವಾಗದಿರಲಿ: ಪೇಜಾವರ ಶ್ರೀ

ಉಡುಪಿ: ಹಿಂದೂ ಹಾಗೂ ಮುಸಲ್ಮಾನರಿಗೆ ಅಸಮಾಧಾನ ಆಗದಂತೆ ರಾಮಮಂದಿರ ವಿವಾದ ಸಂಧಾನವಾಗಬೇಕು. ಸಂಧಾನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕು. ರಾಮಮಂದಿರ ನಿರ್ಮಾಣ ವಿಳಂಬವಾಗಬಾರದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ. ಸಂಧಾನ ಎರಡೂ ಸಮುದಾಯಕ್ಕೆ ಸಮ್ಮತವಾಗಿರಬೇಕು. ಆದರೆ ಇಬ್ಬರಿಗೂ ಸಮ್ಮತವಾಗುವ ಸಂಧಾನ ಆಗುವ ಬಗ್ಗೆ ಸಂಶಯವಿದೆ. ಸಂಧಾನ ಆಗದಿದ್ದರೆ ನ್ಯಾಯದ ರೀತಿಯಲ್ಲಿ ಮಂದಿರ ನಿರ್ಮಾಣ ಆಗಲಿ ಎಂದರು. ರಾಮಮಂದಿರ ವಿವಾದ ಬಗೆಹರಿಸುವ ವಿಚಾರದಲ್ಲಿ ರವಿಶಂಕರ್ ಗುರೂಜಿ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲವಿದೆ. ಅವರನ್ನು ಅಧಿಕೃತವಾಗಿ ಸುಪ್ರೀಂ […]

ಅಮಾನವೀಯ: ಸರಪಳಿಯಿಂದ ವ್ಯಕ್ತಿಯ ಕೈಕಾಲು ಕಟ್ಟಿ ಬೀಗ ಜಡಿದರು!

ಕುಂದಾಪುರ: ಕೇರಳ ಮೂಲದ ವ್ಯಕ್ತಿಯೋರ್ವನ ಕಾಲಿಗೆ ಸರಪಳಿಯಿಂದ ಸುತ್ತಿ ಬೀಗ ಜಡಿದು ಗಿಡವೊಂದಕ್ಕೆ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಬೈಂದೂರಿನ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಕಿರಿಮಂಜೇಶ್ವರ ಆಸ್ಪತ್ರೆಯ ಅನತಿ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವ್ಯಕ್ತಿಯೋರ್ವನನ್ನು ಸರಪಳಿಯಿಂದ ಕಾಲಿಗೆ ಬಿಗಿದು ಗಿಡವೊಂದಕ್ಕೆ ಕಟ್ಟಿರುವುದನ್ನು ನೋಡಿದ ವಾಹನ ಸವಾರರು ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಸರಪಳಿಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಬೀಗ ಹಾಕಿದ್ದರಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. […]

ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣ: ಶಂಕಿತ ಆರೋಪಿ ಬೆಂಗಳೂರಿನಲ್ಲಿ ವಶ

ಕುಂದಾಪುರ: ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ‌ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆಯಾದರೂ ಆರೋಪಿಯನ್ನು ವಶಪಡಿಸಿಕೊಂಡ ಬಗ್ಗೆ ಪೊಲೀಸರು ಇನ್ನೂ ದೃಢಪಡಿಸಿಲ್ಲ. ಗುಲಾಬಿ ಕೊಲೆ ಪ್ರಕರಣದ ಶಂಕಿತ ಆರೋಪಿ ಕೊಲ್ಲೂರು ಸಮೀಪದ ಮುದೂರ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದು ಕುಂದಾಪುರಕ್ಕೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ. ಹೆಮ್ಮಾಡಿ‌ ಹರೆಗೋಡು ವಿಜಯ ಗೇರುಬೀಜ ಸಮೀಪದ ನಿವಾಸಿ ಗುಲಾಬಿ (55) ಫೆಬ್ರವರಿ 28ರ ತಡರಾತ್ರಿ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. […]

ಉಡುಪಿ: ಗಮನ ಸೆಳೆದ ರೋಮಾಂಚಕ ಕೆಟಿಎಂ ಬೈಕ್ ಸಾಹಸ

ಉಡುಪಿ: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ ಕೆಟಿಎಂ ನಗರದಲ್ಲಿ ಶನಿವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ವೃತ್ತಿಪರ ಸಾಹಸಿ ಬೈಕ್ ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಮತ್ತು ಟ್ರಿಕ್‌ಗಳನ್ನು ಪ್ರದರ್ಶಿಸಿದರು. ನಗರದ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನರು ಸಾಕ್ಷಿಯಾದರು. ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತ ಕೆಟಿಎಂ ಡ್ಯೂಕ್ ಬೈಕ್‌ಗಳಲ್ಲಿ ಚಾಲಕರು ಸಾಹಸಗಳನ್ನು ಸಾದರಪಡಿಸಿದರು. ಕೆಟಿಎಂ ಬೈಕ್ ಸಾಹಸ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿತ್ತು. “ಕೆಟಿಎಂ ಬ್ರಾಂಡ್ ಅಧಿಕ […]