ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಬೇಟಿ ಬಚಾವೋ -ಬೇಟಿ ಪಡಾವೋ ಕಾರ್ಯಗಾರ ಉದ್ಘಾಟಣೆ: ಪ್ರಕಾಶ್ ಖಂಡೇರಿ

ಕುಂದಾಪುರ: ಭ್ರೂಣ ಹತ್ಯೆ, ಅತ್ಯಾಚಾರ, ಲೈಂಗಿಕ ಕಿರುಕುಳ ಇವೆಲ್ಲವುಗಳಿಂದ ಮಹಿಳೆಗೆ ಮುಕ್ತಿ ಸಿಕ್ಕಾಗ ಮಾತ್ರ ಸುಭಿಕ್ಷ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಐಎಮ್‍ಎ ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಬೇಟಿ ಬಚಾವೋ -ಬೇಟಿ ಪಡಾವೋ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಮಹಿಳೆಯರಿಗೆ ಸ್ವಾತಂತ್ರ್ಯವಿತ್ತು. […]

ಹೆಣ್ಣಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ: ಡಾ| ವಿಜಯಲಕ್ಷ್ಮೀ

ಕುಂದಾಪುರ: ಹೆಣ್ಣು ಸಂಸಾರದ ಕಣ್ಣು. ತಮ್ಮ ಜೀವನದಲ್ಲಿ ಎದುರಾದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಪ್ರತಿಯೊಬ್ಬ ಮಹಿಳೆ ಕೂಡ ಸಾಧಕಿಯೇ. ಹೆಣ್ಣಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ ಎಂದು ಡಾ| ವಿಜಯಲಕ್ಷ್ಮೀ ಹೇಳಿದರು. ಅವರು ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರದ ವತಿಯಿಂದ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗುಣರತ್ನಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ […]

ರಾಮಮಂದಿರ ವಿವಾದ: ಮಾತುಕತೆ ಮೂಲಕ ಬಗೆಹರಿದರೆ ಸಂತಸ-ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗುತ್ತೇವೆ. ಇದನ್ನು ಚುನಾವಣೆಗೆ ಬಳಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಮೂವರನ್ನು ಸಂಧಾನಕಾರರನ್ನು ನೇಮಿಸಿ ಎಂಟು ವಾರದೊಳಗೆ ವರದಿ ನೀಡುವಂತೆ ಗಡುವು ನೀಡಿದೆ. ಇದು ಏನಾಗುತ್ತೋ ಗೊತ್ತಿಲ್ಲ. ಆದರೆ ವಿವಾದ ಮಾತುಕತೆ ಮೂಲಕ ಬಗೆಹರಿದರೆ ಸಂತಸ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಹರಿದರೆ ಉತ್ತಮ. ರಾಮ ಹುಟ್ಟಿದ ಜಾಗವನ್ನು ಮುಸಲ್ಮಾನರು ಬಿಟ್ಟುಕೊಟ್ಟರೆ ಸಂತೋಷ ಎಂದರು.

ಮಹಿಳೆಯರ ನಿರ್ಣಯಕ್ಕೆ ಮನ್ನಣೆ ಸಿಗಬೇಕು: ಶೋಭಾ ಕರಂದ್ಲಾಜೆ

ಉಡುಪಿ: ರಾಜಕೀಯ ಕ್ಷೇತ್ರ, ದೇಗುಲದ ಆಡಳಿತ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮಹಿಳೆಯರ ಮಾತು, ನಿರ್ಣಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಮಹಿಳೆಯರು ಸಮಾಜದಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸರ್ಕಾರ ಸಹಿತ ಮಹಿಳೆಯರು ಇರುವ ಸಂಘಟನೆಗಳು ಮಹಿಳೆಯರ ಭಾವನೆ, ಮಾತು ಹಾಗೂ ನಿರ್ಣಯಕ್ಕೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀಶಕ್ತಿ ಒಕ್ಕೂಟ ಹಾಗೂ ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ […]

ಮಾ.10: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಉಡುಪಿ:  ಉಡುಪಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು ಅರ್ಹ ಮಕ್ಕಳ ಸಂಖ್ಯೆ 77740 ( ಗ್ರಾಮೀಣ ಪ್ರದೇಶ 63630, ನಗರ ಪ್ರದೇಶ 14110) ಇದ್ದು,  ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಒಟ್ಟು ಲಸಿಕಾ ಕೇಂದ್ರಗಳು 657 (ಗ್ರಾಮೀಣ ಪ್ರದೇಶ 569, ನಗರ ಪ್ರದೇಶ 88). ಇದಲ್ಲದೆ 9 ಮೊಬೈಲ್ ಟೀಮ್ ಮತ್ತು 32 ಟ್ರಾನ್ಸಿಟ್ ಬೂತ್‍ಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಲಸಿಕಾ ಸ್ವಯಂ ಸೇವಕರ ಸಂಖ್ಯೆ […]