ರಾಮಮಂದಿರ ವಿವಾದ: ಮಾತುಕತೆ ಮೂಲಕ ಬಗೆಹರಿದರೆ ಸಂತಸ-ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಅಯೋಧ್ಯೆ ರಾಮಮಂದಿರ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗುತ್ತೇವೆ. ಇದನ್ನು ಚುನಾವಣೆಗೆ ಬಳಸಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಮೂವರನ್ನು ಸಂಧಾನಕಾರರನ್ನು ನೇಮಿಸಿ ಎಂಟು ವಾರದೊಳಗೆ ವರದಿ ನೀಡುವಂತೆ ಗಡುವು ನೀಡಿದೆ. ಇದು ಏನಾಗುತ್ತೋ ಗೊತ್ತಿಲ್ಲ. ಆದರೆ ವಿವಾದ ಮಾತುಕತೆ ಮೂಲಕ ಬಗೆಹರಿದರೆ ಸಂತಸ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಹರಿದರೆ ಉತ್ತಮ. ರಾಮ ಹುಟ್ಟಿದ ಜಾಗವನ್ನು ಮುಸಲ್ಮಾನರು ಬಿಟ್ಟುಕೊಟ್ಟರೆ ಸಂತೋಷ ಎಂದರು.