ಯುವಕ  ಮಂಡಲ  (ರಿ ) ಮೂಡುಬೆಟ್ಟು; ವಾರ್ಷಿಕೋತ್ಸವ

ಉಡುಪಿ;ಮೂಡುಬೆಟ್ಟು ಶಾಲಾ ಮೈದಾನದಲ್ಲಿ ಜರಗಿದ  ಯುವಕ  ಮಂಡಲ  (ರಿ ) ಮೂಡುಬೆಟ್ಟು ಕೊಡವೂರು ಇದರ   ೪೬ನೇ ವಾರ್ಷಿಕೋತ್ಸವ ಸಮಾರಂಭದ   ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ , ನಗರ ಸಭೆಯ ಸದಸ್ಯರಾದ ಶ್ರೀ . ಶ್ರೀಶ ಭಟ್ ಹಾಗು ಶ್ರೀ ಬಾಲಕೃಷ್ಣ ಶೆಟ್ಟಿ ನಿಟ್ಟೂರು , ಉದ್ಯಮಿಗಳಾದ ಶ್ರೀ . ವಿಶ್ವನಾಥ್ ಬಿ. ಪಂದುಬೆಟ್ಟು , ಶ್ರೀ ಮಹೇಶ್ ಶೆಣೈ, ಶ್ರೀ ಮೋಹನ್ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಧ್ವನಗರ […]

ಉಡುಪಿ: ವಾಹನ ಅಪಘಾತ ಅಪರಿಚಿತ, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ

ಉಡುಪಿ: ಉಡುಪಿ ಪುತ್ತೂರು ಗ್ರಾಮದ ಹನುಮಂತನಗರ ಪ್ರಾಥಮಿಕ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಸಾರ್ವಜನಿಕ ರಸ್ತೆಯಲ್ಲಿ ಮಾ.8 ರಂದು ಬೆಳಗ್ಗೆ 6.30 ಕ್ಕೆ ಸುಮಾರು ಸುಮಾರು 35 ವರ್ಷ, 5.4 ಅಡಿ ಎತ್ತರದ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಅಪರಿಚಿತ ವ್ಯಕ್ತಿಯೋರ್ವನಿಗೆ ಯಾವುದೋ ವಾಹನ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಅಪಘಾತವೆಸಗಿ ಪರಾರಿಯಾಗಿದ್ದು, ಅಪಘಾತದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ […]

ಮಹಿಳಾ ದಿನಾಚರಣೆ: ಮಲ್ಪೆ ಬೀಚ್‍ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಉಡುಪಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮಹಿಳೆಯರಿಗೆ ವಿವಿಧ ಕ್ರೀಡಾಕೂಟ ಶುಕ್ರವಾರ ಮಲ್ಪೆ ಬೀಚ್‍ನಲ್ಲಿ ನಡೆಯಿತು. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ, ಮಹಿಳಾ ಮಂಡಳಿ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಮಾತನಾಡಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತಾಗಲು ಈ […]

ನಟಿ ಸುಮಲತಾ ವಿರುದ್ಧ ಕೀಳುಮಟ್ಟದ ಭಾಷೆ ಪ್ರಯೋಗ ವಿಚಾರ, ರೇವಣ್ಣ ಕೂಡಲೇ ಕ್ಷಮೆ ಕೋರಬೇಕು: ಶೋಭಾ 

ಉಡುಪಿ: ನಟಿ ಸುಮಲತಾ ಅಂಬರೀಶ್ ಅವರ ಬಗ್ಗೆ ಸಚಿವ ರೇವಣ್ಣ ಹಗುರ ಮಾತನಾಡಿರುವುದು ಅಕ್ಷಮ್ಯ. ಕೀಳುಮಟ್ಟ ಭಾಷೆ ಬಳಸಿ ಮಹಿಳಾ ದಿನಾಚರಣೆಯಂದೇ ಓರ್ವ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಇಂದು‌ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಂಡ ಸತ್ತವರು ರಾಜಕೀಯಕ್ಕೆ ಬರಬಾರದೆಂದು ಕಾನೂನಿಲ್ಲ. ಗಂಡನನ್ನು ಕಳೆದುಕೊಂಡು ನೋವಿನಲ್ಲಿರುವವರಿಗೆ ಮತ್ತೆ ನೋವು ಕೊಡಬಾರದು. ರೇವಣ್ಣ ಓರ್ವ ಜವಾಬ್ದಾರಿಯುತ ರಾಜಕಾರಣಿಯಾಗಿ ಹೀಗೆ ಮಾತನಾಡಿರುವುದು ಸರಿಯಲ್ಲ. ಅವರು ಕೂಡಲೇ ಸುಮಲತಾ ಅವರ ಕ್ಷಮೆ ಕೋರಬೇಕು ಎಂದರು. ಸದ್ಯ ಸುಮಲತಾ ಕಾಂಗ್ರೆಸ್ […]

ಸಾರ್ವಜನಿಕ ಸ್ಥಳದಲ್ಲಿ ಹರಿದು ಎಸೆದ ರಾಷ್ಟ್ರ ಧ್ವಜಗಳು!: ಆಕ್ರೋಶ

ಕುಂದಾಪುರ: ರಾಷ್ಟ್ರಧ್ವಜವನ್ನು ಹರಿದು ಸಾರ್ವಜನಿಕ ಸ್ಥಳದಲ್ಲಿ ಎಸೆದ ಘಟನೆ ಶುಕ್ರವಾರ ಬೆಳಿಗ್ಗೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಕುಂದಾಪುರದ ಮುಖ್ಯ ರಸ್ತೆಯಲ್ಲಿರುವ ಕುಂದೇಶ್ವರ ದೇವಸ್ಥಾನದ ಎದುರುಗಡೆಯ ಸೌತ್ ಫೀಲ್ಡ್ ಪೈಂಟ್ಸ್ ಲಿಮಿಟೆಡ್ ಸಂಸ್ಥೆಗೆ ಕಾದಿರಿಸಲಾದ ಸ್ಥಳದಲ್ಲಿ ರಾಷ್ಟ್ರ ಧ್ವಜವನ್ನು ಹರಿದು ಎಸೆಯಲಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಚತುಷ್ಪತ ಹೆದ್ದಾರಿ ಕಾಮಗಾರಿಯ ಕಾರ್ಮಿಕರಾದ ಬಶೀರ್ ಹಾಗೂ ಮನೀಷ್ ಪಾಂಡೆ ಎಂಬುವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ತೆರೆದ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ರಾಶಿಯಾಗಿ […]