ಯುವಕ  ಮಂಡಲ  (ರಿ ) ಮೂಡುಬೆಟ್ಟು; ವಾರ್ಷಿಕೋತ್ಸವ

ಉಡುಪಿ;ಮೂಡುಬೆಟ್ಟು ಶಾಲಾ ಮೈದಾನದಲ್ಲಿ ಜರಗಿದ  ಯುವಕ  ಮಂಡಲ  (ರಿ ) ಮೂಡುಬೆಟ್ಟು ಕೊಡವೂರು ಇದರ   ೪೬ನೇ ವಾರ್ಷಿಕೋತ್ಸವ ಸಮಾರಂಭದ   ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ , ನಗರ ಸಭೆಯ ಸದಸ್ಯರಾದ ಶ್ರೀ . ಶ್ರೀಶ ಭಟ್ ಹಾಗು ಶ್ರೀ ಬಾಲಕೃಷ್ಣ ಶೆಟ್ಟಿ ನಿಟ್ಟೂರು , ಉದ್ಯಮಿಗಳಾದ ಶ್ರೀ . ವಿಶ್ವನಾಥ್ ಬಿ. ಪಂದುಬೆಟ್ಟು , ಶ್ರೀ ಮಹೇಶ್ ಶೆಣೈ, ಶ್ರೀ ಮೋಹನ್ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಧ್ವನಗರ ಇದರ ಅಧ್ಯಕ್ಷರಾದ ಶ್ರೀ ಚಂದ್ರಕಾಂತ್ ಕಂಗಣಬೆಟ್ಟು ,   ಅಣ್ಣಪ್ಪ ಪಂಜುರ್ಲಿ ದೇವಸ್ಥಾನ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ದಿನೇಶ್ ಶೆಟ್ಟಿಗಾರ್ , ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಸುಧೀಶ್ ಕುಮಾರ್ , ಗೌರವಾಧ್ಯಕ್ಷ ಶ್ರೀ . ಉಮೇಶ್ ಪೂಜಾರಿ , ಶ್ರೀ ದಿನೇಶ್ ಅಮೀನ್ ಕದಿಕೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಲೋಚನಾ ಬಾಯಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧಕಾರ ಅಶ್ವಥ್ ಕೋಟ್ಯಾನ್ ಹಾಗು ಶೋಧನ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಜಗದೀಶ್ ಅಮೀನ್ ಪ್ರಸ್ತಾವನೆಗೈದರು. ಸುಭಾಸಚಂದ್ರ ವರದಿ ವಾಚಿಸಿದರು . ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರ್ವಹಿಸಿದರು. ಫಾರೂಕ್ ಅಹಮದ್ ವಂದಿಸಿದರು.
ವಿದ್ಯಾರ್ಥಿಗಳು ಭತ್ತವನ್ನು ತುಂಬುವ ಚೀಲಗಳಾಗಬಾರದು; ಅದನ್ನು ಬೆಳೆಯುವ ಗದ್ದೆಗಳಾಗಬೇಕು. -ಎಂಬ ರಾಷ್ಟ್ರಕವಿ  ಕುವೆಂಪು ರವರ ಮಾತಿನಂತೆ ಈಗಿನ ಶಿಕ್ಷಣ ಪರಿಸ್ಥಿತಿಯು ಸುಧಾರಿಸಬೇಕಾದರೆ ನೈತಿಕ ಮೌಲ್ಯಗಳಿಗೆ ಗೌರವವನ್ನಿತ್ತು, ಪರಸ್ಪರರಿಗೆ ಸಹಕಾರ ನೀಡುವಂತಹ ಸಾರಯುತ ಸಮಾಜದ ನಿರ್ಮಾಣವಾಗಬೇಕು. “ಬೆಳೆಯುವ ಸಿರಿ ಮೊಳಕೆಯಲ್ಲಿಯೇ”; ಆದ್ದರಿಂದ ನೀತಿವಂತರಾದ ಯುವಜನತೆಯ ನಿರ್ಮಾಣವಾದರೆ, ಅದು ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಸುಭದ್ರ ಅಡಿಪಾಯವಾಗುತ್ತದೆ. ಇದೆಲ್ಲಾ ರಾತ್ರೋರಾತ್ರಿಯಾಗುವ ಕೆಲಸವಲ್ಲ. ಬಹುಕಾಲದಿಂದ ಭೋಗದೆಡೆಗೆ ಜಾರಿರುವ ಸಮಾಜವನ್ನು ನೀತಿಯ ಚೌಕಟ್ಟಿಗೆ ಒಳಪಡಿಸಲು ಅಪಾರ ಪರಿಶ್ರಮದ ಅಗತ್ಯವಿದೆ ಎಂದು ಹನುಮಾನ್ ಮೋಟರ್ಸ್ ಸಂಸ್ಥೆಯ ಶ್ರೀ ಪಿ. ವಿಲಾಸ್ ನಾಯಕ್ ಹೇಳಿದರು.