ಉಡುಪಿ: ವಾಹನ ಅಪಘಾತ ಅಪರಿಚಿತ, ಮೃತ ವ್ಯಕ್ತಿಯ ಬಗ್ಗೆ ಮಾಹಿತಿ

ಉಡುಪಿ: ಉಡುಪಿ ಪುತ್ತೂರು ಗ್ರಾಮದ ಹನುಮಂತನಗರ ಪ್ರಾಥಮಿಕ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಸಾರ್ವಜನಿಕ ರಸ್ತೆಯಲ್ಲಿ ಮಾ.8 ರಂದು ಬೆಳಗ್ಗೆ 6.30 ಕ್ಕೆ ಸುಮಾರು ಸುಮಾರು 35 ವರ್ಷ, 5.4 ಅಡಿ ಎತ್ತರದ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಅಪರಿಚಿತ ವ್ಯಕ್ತಿಯೋರ್ವನಿಗೆ ಯಾವುದೋ ವಾಹನ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಅಪಘಾತವೆಸಗಿ ಪರಾರಿಯಾಗಿದ್ದು, ಅಪಘಾತದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ  ಬೆಳಗ್ಗೆ 8.10 ಕ್ಕೆ ಮೃತಪಟ್ಟಿರುತ್ತಾರೆ.

ಪ್ರಕರಣದಲ್ಲಿ ಅಪಘಾತ ವೆಸಗಿದ ವಾಹನದ ಮತ್ತು ಮೃತಪಟ್ಟ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಸಂಚಾರ ಠಾಣೆ  ದೂರವಾಣಿ ಸಂಖ್ಯೆ: 0820-2521332, ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತ ದೂರವಾಣಿ ಸಂಖ್ಯೆ: 0820-2520329 ಅಥವಾ ಜಿಲ್ಲಾ ನಿಯಂತ್ರಣ ಕೊಠಡಿ ಉಡುಪಿ ದೂರವಾಣಿ ಸಂಖ್ಯೆ: 0820-2526444 ಅನ್ನು ಸಂಪರ್ಕಿಸುವಂತೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.