ನಾಪತ್ತೆಯಾದ ಮಲ್ಪೆ ಮೀನುಗಾರರು ದುಬೈನಲ್ಲಿ ಪತ್ತೆ?
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಸಂಸದೆ ಮಿನಾಕ್ಷಿ ಲೇಖಿ ಭಾಷಣದಲ್ಲಿ ಪ್ರಸ್ತಾಪಿಸಿದರು. ಭಾನುವಾರ ಮಲ್ಪೆಯಲ್ಲಿ ನಡೆದ ಪಾಂಚಜನ್ಯ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಸ್ತಾಪಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇರದ ಕಾರಣ ಭಾಷಣ ಮುಗಿದ ಬಳಿಕ ಸಂಸದೆಯನ್ನು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಭಾರತದಿಂದ ನಾಪತ್ತೆಯಾದ ಮೀನುಗಾರರಲ್ಲಿ ಇಬ್ಬರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚೇನು ಮಾಹಿತಿ ಇಲ್ಲ. ಅವರು ಮಲ್ಪೆ […]
ಕಾಂಗ್ರೆಸ್ ಗೆ ದೇಶದ ರಕ್ಷಣೆಗಿಂತ ಸ್ವಾರ್ಥ ಸಾಧನೆ ಹೆಚ್ಚು: ಸಂಸದೆ ಮೀನಾಕ್ಷಿ ಲೇಖಿ ಆರೋಪ
ಉಡುಪಿ: ಭಾರತೀಯ ಸೇನೆ ಇರುವುದು ದೇಶದ ರಕ್ಷಣೆಗೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೆಲವರು (ಕಾಂಗ್ರೆಸ್ ನವರು) ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ ಸಾಕ್ಷಿ ಕೇಳುತ್ತಾರೆ. ಅವರಿಗೆ ದೇಶದ ರಕ್ಷಣೆಗಿಂತ ಹೆಚ್ಚಾಗಿ ಸ್ವಾರ್ಥ ಸಾಧನೆಯೇ ಹೆಚ್ಚಾಗಿದೆ ಎಂದು ಸಂಸದೆ ಮೀನಾಕ್ಷಿ ಲೇಖಿ ಟೀಕಿಸಿದರು. ನಮೋ ಭಾರತ್ ವತಿಯಿಂದ ಭಾನುವಾರ ಮಲ್ಪೆ ಬೀಚ್‌ನಲ್ಲಿ ಹಮ್ಮಿಕೊಂಡಿದ್ದ ಪಾಂಚಜನ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಗೆ ದೇಶದ ರಕ್ಷಣೆ ಮುಖವಲ್ಲ. ದೇಶವನ್ನು ಮತ್ತೆ ಲೂಟಿ ಹೊಡೆದು, ಕುಟುಂಬದ ರಕ್ಷಣೆ ಮಾಡಿಕೊಳ್ಳಬೇಕಿದೆ. ಹಾಗಾಗಿ ಅವರು ಮಹಾಘಟ್ […]
ಮಹಿಳೆ ಅನುಮಾನಾಸ್ಪದ ಸಾವು: ತೀವ್ರಗೊಂಡ ಪೊಲೀಸ್ ತನಿಖೆ ಘಟನಾ, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭೇಟಿ, ಪರಿಶೀಲನೆ
ಕುಂದಾಪುರ: ಇಲ್ಲಿನ ಹೆಮ್ಮಾಡಿಯ ಹರೆಗೋಡು ಸಮೀಪದ ವಿಜಯ ಗೇರುಬೀಜ ಕಾರ್ಖಾನೆ ಸಮೀಪದ ಮನೆಯಲ್ಲಿ ವಾಸವಿದ್ದ ಮೀನು ಮಾರಾಟದ ಮಹಿಳೆ ಗುಲಾಬಿ(55) ಎಂಬವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಘಟನಾ ಸ್ಥಳಕ್ಕೆ ಭಾನುವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮಹಿಳೆ ಮನೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಮಾಹಿತಿ ಪಡೆದಿದ್ದು, ಮುಂದಿನ ತನಿಖೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ […]
ಉಡುಪಿ:ಮಹಿಳೆಯರ ಒಳಉಡುಪು ಕಳವು:ಕಳ್ಳನಿಗೆ ಬುದ್ದಿ ಹೇಳಿ ಕಳಿಸಿದ ಸಮಾಜ ಸೇವಕರು
ಉಡುಪಿ: ನಗರದ ಜನ ವಸತಿ ಪ್ರದೇಶ ಹಾಗೂ ಹೊರ ವಲಯದ ಸ್ಥಳಗಳಲ್ಲಿ ಮಹಿಳೆಯರ ಒಳ ಉಡುಪುಗಳು, ಒಣಗಿಸಿದ ಸ್ಥಳಗಳಿಂದ ನಡು ರಾತ್ರಿ, ತಡ ರಾತ್ರಿ ಕಾಣೆಯಾಗುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕ ವಲಯದಲ್ಲಿ ಬಹಳವಾಗಿ ಕೇಳಿಬಂದಿವೆ. ಮುಜುಗರದ ಕಾರಣದಿಂದ ಸಾರ್ವಜನಿಕರು ಯಾರೂ ಪೋಲಿಸ್ ಠಾಣೆಗೆ ದೂರುಗಳನ್ನು ನೀಡುತ್ತಿಲ್ಲವೆಂದು ಭಾವಿಸಲಾಗಿದೆ. ಶನಿವಾರದ ದಿನ ಉಡುಪಿ ನಗರದಲ್ಲಿ ಮಹಿಳೆಯರ ಒಳ ಉಡುಪು ಧರಿಸಿ, ನಗರದಲ್ಲಿ ತಿರುಗಾಡುತ್ತಿರುವ ಅಪರಿಚಿತ ಯುವಕನೊರ್ವನು ಕಂಡು ಬಂದಿದ್ದಾನೆ. ಮಾಹಿತಿ ತಿಳಿದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ […]
ಈ ಐಟಂ ತಿಂದವರು, “ವ್ಹಾವ್ ಸೂಪರ್ “ಅನ್ನದೇ ಇರುವುದಿಲ್ಲ: ಮನೆಲೇ ಮಾಡಿ ತಿನ್ನಿ ನುಗ್ಗೆಕಾಯಿ ಸ್ಪೆಷಲ್
ಆರೋಗ್ಯದ ದೃಷ್ಟಿಯಿಂದ ನುಗ್ಗೆಯು ಬಹಳ ಒಳ್ಳೆಯದು.ಇದರಲ್ಲಿ ಅಯಾನ್ ಮತ್ತು ಕ್ಯಾಲ್ಷಿಯಂ ಅಧಿಕ ವಿರುವುದರಿಂದ ಮೂಳೆಗೆ ಹಾಗೂ ಅನಿಮಿಯ ಇರುವವರಿಗೆ ಇದು ಸೂಪರ್. ಇದು ನಮ್ಮ ಬ್ಲಡ್ ಶುಗರ್ ಹಾಗೂ ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿರಿಸುತ್ತದೆ. ನಮ್ಮ ಇಮ್ಯುನಿಟಿ ಜಾಸ್ತಿ ಮಾಡಲು ಇದು ಸಹಾಯಕ . ಈಗ ನುಗ್ಗೆಯ ಕಾಲವಾದುದರಿಂದ ನುಗ್ಗೆಕಾಯಿ, ಹೂವು ಹಾಗೂ ಸೊಪ್ಪುಗಳನ್ನುಬಳಸಿ ರುಚಿಯಾದ ಅಡುಗೆ ಮಾಡಬಹುದು .ನುಗ್ಗೆಯಿಂದ ಮಾಡುವ ನಾಲ್ಕು ರೆಸಿಪಿಗಳನ್ನು ಕಾರ್ಕಳದ ಡಾ. ಹರ್ಷಾ ಕಾಮತ್ ಹೇಳಿಕೊಟ್ಟಿದ್ದಾರೆ. ಇನ್ನಷ್ಟು ರೆಸಿಪಿಗಳನ್ನು ಮುಂದಿನ ಸರಣಿಯಲ್ಲಿ ನಿರೀಕ್ಷಿಸಿ. ನುಗ್ಗೆ […]