ಉಡುಪಿ:ಮಹಿಳೆಯರ ಒಳಉಡುಪು ಕಳವು:ಕಳ್ಳನಿಗೆ ಬುದ್ದಿ ಹೇಳಿ ಕಳಿಸಿದ ಸಮಾಜ ಸೇವಕರು

ಉಡುಪಿ: ನಗರದ ಜನ ವಸತಿ ಪ್ರದೇಶ ಹಾಗೂ ಹೊರ ವಲಯದ ಸ್ಥಳಗಳಲ್ಲಿ ಮಹಿಳೆಯರ ಒಳ ಉಡುಪುಗಳು, ಒಣಗಿಸಿದ ಸ್ಥಳಗಳಿಂದ ನಡು ರಾತ್ರಿ, ತಡ ರಾತ್ರಿ ಕಾಣೆಯಾಗುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕ ವಲಯದಲ್ಲಿ ಬಹಳವಾಗಿ ಕೇಳಿಬಂದಿವೆ. ಮುಜುಗರದ ಕಾರಣದಿಂದ ಸಾರ್ವಜನಿಕರು ಯಾರೂ ಪೋಲಿಸ್ ಠಾಣೆಗೆ ದೂರುಗಳನ್ನು ನೀಡುತ್ತಿಲ್ಲವೆಂದು ಭಾವಿಸಲಾಗಿದೆ.

ಶನಿವಾರದ ದಿನ ಉಡುಪಿ ನಗರದಲ್ಲಿ ಮಹಿಳೆಯರ ಒಳ ಉಡುಪು ಧರಿಸಿ, ನಗರದಲ್ಲಿ ತಿರುಗಾಡುತ್ತಿರುವ ಅಪರಿಚಿತ ಯುವಕನೊರ್ವನು ಕಂಡು ಬಂದಿದ್ದಾನೆ. ಮಾಹಿತಿ ತಿಳಿದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ನಗರದ ಸರಕಾರಿ ಬಸ್ಸು ನಿಲ್ದಾಣದಲ್ಲಿ ಯುವಕನು ಇರುವುದನ್ನು ಗುರುತಿಸಿದ್ದಾರೆ. ತಪಾಸಣೆ ನಡೆಸಿದಾಗ, ಯುವಕನು ಮಹಿಳೆಯರ ಒಳ ಉಡುಪು ಧರಿಸಿರುವುದು ಕಂಡು ಬಂದಿದೆ. ಆತನ ಚೀಲದಲ್ಲಿಯೂ ಮಹಿಳೆಯರ ಒಳ ಉಡುಪುಗಳು ಇರುವುದು ಕಂಡು ಬಂದಿದೆ. ಸಮಾಜಸೇವಕರಲ್ಲಿ ಯುವಕನು ತಾನು ಹೆಣ್ಣಾಗ ಬೇಕೆನ್ನುವ ಆಶಾಭಾವವನ್ನು ವ್ಯಕ್ತಪಡಿಸಿದ್ದಾನೆ. ಯುವಕನಿಗಿರುವುದು ಮಾನಸಿಕ ವ್ಯಾಧಿಯಾದರಿಂದ ಬುದ್ಧಿವಾದ ಹೇಳಿ ಸಮಾಜಸೇವಕರು ಯುವಕನನ್ನು ಬಿಟ್ಟಿದ್ದಾರೆಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ನೆರೆದ ಮಹಿಳೆಯರು, ತಮ್ಮ ಮನೆ ವಠಾರದಲ್ಲಿಯೂ ಮಹಿಳೆಯರ ಒಳ ಉಡುಪುಗಳು ಬಹಳಷ್ಟು ಸಲ ಕಳ್ಳತನಗೊಂಡಿವೆ, ಎಂದು ಹೇಳಿಕೊಂಡಿದ್ದಾರೆ, ಆದರೂ ಯಾರೂ ಪೊಲೀಸರಿಗೆ ದೂರುಗಳು ನೀಡಲಿಲ್ಲ ಎಂದು ತಿಳಿದು ಬಂದಿದೆ.