ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿ: ಅರ್ಜಿ ಆಹ್ವಾನ
ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ವಿಕಲಚೇತನರಿಗಾಗಿ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ 2017-18 ನೇ ಸಾಲಿನಿಂದ ಜಿಲ್ಲೆಯ ನಗರ ಸಭಾ ವ್ಯಾಪ್ತಿಯಲ್ಲಿ 3, ಪುರಸಭೆ ಮತ್ತು ಪಟ್ಟಣ ಪಂಚಾಯತ್‍ಗಳಲ್ಲಿ ತಲಾ 1 ರಂತೆ ಮಾಸಿಕ 3000 ರೂ. ಗೌರವಧನ ಆಧಾರದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗಾಗಿ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದ್ದು, 2019-20 ರಲ್ಲೂ ಈ ಯೋಜನೆ ಮುಂದುವರೆಸಲಾಗುವುದು. 10 ನೇ ತರಗತಿ ಉತ್ತೀರ್ಣ/ ಅನುತ್ತೀರ್ಣರಾಗಿದ್ದು, ಶೇ. 40 ಕ್ಕಿಂತ ಮೇಲ್ಪಟ್ಟು […]
ಉಡುಪಿ:ತೆರಿಗೆ ಪಾವತಿಸಲು ಸೂಚನೆ

ಉಡುಪಿ : ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು/ ಅನುಭೋಗದಾರರು ತಮ್ಮ ಆಸ್ತಿಯ ಬಾಕಿ ಮತ್ತು 2018-19 ನೇ ಚಾಲ್ತಿ ಸಾಲಿನ ತೆರಿಗೆಯನ್ನು ಮಾರ್ಚ್ 31 ರ ಒಳಗೆ ಪಾವತಿ ಮಾಡಬೇಕು. ತಪ್ಪಿದ್ದಲ್ಲಿ ಕರ್ನಾಟಕ ಪುರಸಭಾ ಕಾಯ್ದೆ 1964 ರ ಪ್ರಕರಣ 142 ರಂತೆ ವಸೂಲಾತಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಆದ್ದರಿಂದ ಎಲ್ಲಾ ತೆರಿಗೆದಾರರು ನಿಗಧಿತ ಅವಧಿಯೊಳಗೆ ತೆರಿಗೆ ಪಾವತಿಸಿ, ಕಾನೂನು ಕ್ರಮಕ್ಕೆ ಅವಕಾಶ […]
ಪಿ.ಯು.ಸಿ ಪರೀಕ್ಷೆ ಮುಗಿದ ನಂತರವೇ ಆಗುಂಬೆ ರಸ್ತೆ ಕಾಮಗಾರಿ ಆರಂಭ:ಸದ್ಯಕ್ಕಿಲ್ಲ ಘಾಟಿ ಬಂದ್ ಬಿಸಿ

ರಾಜ್ಯ:ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ಶುಕ್ರವಾರದಿಂದ ಆರಂಭವಾಗಲಿದ್ದು, ಉಡುಪಿ ಜಿಲ್ಲೆ ಮತ್ತು ಮಲೆನಾಡಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆನ್ನುವ ಕಾಳಜಿಯಲ್ಲಿ ಶುಕ್ರವಾರದಿಂದ ಆರಂಭಗೊಳ್ಳಬೇಕಿದ್ದ ಆಗುಂಬೆ ರಸ್ತೆಯ ತುರ್ತು ಕಾಮಗಾರಿಯನ್ನು ಜಿಲ್ಲಾಡಳಿತ ಮುಂದೂಡಿದೆ.ದ್ವಿತೀಯ ಪಿಯುಸಿ, ಪರೀಕ್ಷೆಯ ಬಳಿಕವೇ ಕಾಮಗಾರಿಯನ್ನು ಶುರುಮಾಡುತ್ತೇವೆ ಎಂಬುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಬಿ.ಕೆ.ದಯಾನಂದ್ ತಿಳಿಸಿದ್ದಾರೆ. ಸದ್ಯಕ್ಕೆ ಘಾಟಿ ರಸ್ತೆ ದುರಸ್ಥಿ ಆರಂಭಗೊಂಡರೆ ಈ ಭಾಗದಲ್ಲಿರುವ, ಈ ರಸ್ತೆಯಲ್ಲಿಯೇ ದಿನೇ ದಿನೇ ಓಡಾಡುವ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ, ರಸ್ತೆ ಕಾಮಗಾರಿಯನ್ನು ಮಾ.19 ಬಳಿಕ […]