ಉಡುಪಿ:ತೆರಿಗೆ ಪಾವತಿಸಲು ಸೂಚನೆ

ಉಡುಪಿ : ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು/ ಅನುಭೋಗದಾರರು ತಮ್ಮ ಆಸ್ತಿಯ ಬಾಕಿ ಮತ್ತು 2018-19 ನೇ ಚಾಲ್ತಿ ಸಾಲಿನ ತೆರಿಗೆಯನ್ನು ಮಾರ್ಚ್ 31 ರ ಒಳಗೆ ಪಾವತಿ ಮಾಡಬೇಕು. ತಪ್ಪಿದ್ದಲ್ಲಿ ಕರ್ನಾಟಕ ಪುರಸಭಾ ಕಾಯ್ದೆ 1964 ರ ಪ್ರಕರಣ 142 ರಂತೆ ವಸೂಲಾತಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

     ಆದ್ದರಿಂದ ಎಲ್ಲಾ ತೆರಿಗೆದಾರರು ನಿಗಧಿತ ಅವಧಿಯೊಳಗೆ ತೆರಿಗೆ ಪಾವತಿಸಿ, ಕಾನೂನು ಕ್ರಮಕ್ಕೆ ಅವಕಾಶ ನೀಡದೇ ನಗರ ಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರ ಸಭಾ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.