ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿ: ಅರ್ಜಿ ಆಹ್ವಾನ

ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ವಿಕಲಚೇತನರಿಗಾಗಿ ಇಲಾಖೆಯ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ 2017-18 ನೇ ಸಾಲಿನಿಂದ ಜಿಲ್ಲೆಯ ನಗರ ಸಭಾ ವ್ಯಾಪ್ತಿಯಲ್ಲಿ 3, ಪುರಸಭೆ ಮತ್ತು ಪಟ್ಟಣ ಪಂಚಾಯತ್‍ಗಳಲ್ಲಿ ತಲಾ 1 ರಂತೆ ಮಾಸಿಕ 3000 ರೂ. ಗೌರವಧನ ಆಧಾರದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರ ನೇಮಕಾತಿಗಾಗಿ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದ್ದು, 2019-20 ರಲ್ಲೂ ಈ ಯೋಜನೆ ಮುಂದುವರೆಸಲಾಗುವುದು.

10 ನೇ ತರಗತಿ ಉತ್ತೀರ್ಣ/ ಅನುತ್ತೀರ್ಣರಾಗಿದ್ದು, ಶೇ. 40 ಕ್ಕಿಂತ ಮೇಲ್ಪಟ್ಟು ವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಾಧಿಕಾರದಿಂದ ನೀಡಲ್ಪಟ್ಟಿರುವ ವಿಕಲಚೇತನರ ಗುರುತು ಚೀಟಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವ ವಿಕಲಚೇತನರು ತಮ್ಮ ವಾಸಸ್ಥಳ ವ್ಯಾಪ್ತಿಯ ಪುರಸಭೆ/ ಪಟ್ಟಣ ಪಂಚಾಯತ್‍ನಿಂದ ಪಡೆದ ವಾಸ್ತವ್ಯ ದೃಢೀಕರಣ ಪತ್ರ ಹಾಗೂ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಇವರಿಗೆ ಮಾರ್ಚ್ 10 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಪುರಸಭೆ/ ಪಟ್ಟಣ ಪಂಚಾಯತ್ ಮುಖ್ಯಸ್ಥರ ಆಯ್ಕೆ ಸಮಿತಿ ಮೂಲಕ ನಗರ ಪುನರ್ವಸತಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಯನ್ನು (ದೂ.ಸಂಖ್ಯೆ: 0820-2574810 /2574811) ಅಥವಾ ಆಯಾ ತಾಲೂಕಿನ ತಾಲೂಕು ಪಂಚಾಯತ್‍ನಲ್ಲಿರುವ ಎಂ.ಆರ್.ಡಬ್ಲ್ಯೂ. (ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರು) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.