ಕಾರ್ಮಿಕರಿಂದ ಸಂಸದರ ಕಚೇರಿ ಚಲೋ ಪತ್ರಿಭಟನೆ  ಸಾಮಾಜಿಕ ಸುರಕ್ಷಾ ಸಂಹಿತೆ ಕಾಯ್ದೆ ಹಿಂಪಡೆಯಲು ಆಗ್ರಹ  

ಉಡುಪಿ: ಕೇಂದ್ರ ಸರ್ಕಾರವು 44 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ಹೊಸದಾಗಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನೊಳಗೊಂಡ ಸಾಮಾಜಿಕ ಸುರಕ್ಷಾ ಸಂಹಿತೆ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ಇದರಿಂದ 1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್‌ ಕಾನೂನುಗಳೆರಡು ರದ್ದಾಗಲಿದ್ದು, ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ಸುರೇಶ್‌ ಕಲ್ಲಾಗರ ದೂರಿದರು. ಕಟ್ಟಡ ಕಾರ್ಮಿಕ ಕಾನೂನು-1996 ಅನ್ನು ಉಳಿಸಿ, ಕಟ್ಟಡ ಕಾರ್ಮಿಕರ […]

ಪ್ರಧಾನಿ ಮೋದಿ ಆಡಳಿತ ದೇಶಕ್ಕೆ ಹೊಸ ದಿಸೆ ಕೊಟ್ಟಿದೆ, ಯಶಸ್ವಿ ನಾಯಕತ್ವದಿಂದ ಮಾತ್ರ ದೇಶದ ಅಭಿವೃದ್ಧಿ  ಸಾಧ್ಯ

ಉಡುಪಿ:ಹಿಂದೆ ನಮ್ಮ ದೇಶದ ನಾಯಕತ್ವ ಮಾತ್ರ ಅಲ್ಲ, ಜನರ ರಕ್ತದಲ್ಲಿಯೇ ಭ್ರಷ್ಟಚಾರ ಇತ್ತು. ಅದು ಈಗ ಸಂಪೂರ್ಣ ನಿವಾರಣೆ ಆಗಿದೆ ಎಂದು ಹೈಕೋರ್ಟ್‌ನ ವಕೀಲ ಸಂದೇಶ್‌ ಕುಮಾರ್‌ ಶೆಟ್ಟಿ ಹೇಳಿದರು. ಉಡುಪಿ ಪ್ರೇರಣಾ ಸಂಘಟನೆಯ ವತಿಯಿಂದ ಕಿನ್ನಿಮುಲ್ಕಿ ವೀರಭದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬದಲಾಗುತ್ತಿರುವ ಭಾರತ’ ಎಂಬ ವಿಷಯದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರವನ್ನು ಪ್ರಗತಿ ಪಥದತ್ತಾ ಕೊಂಡೊಯ್ಯುವುದರ ಜತೆಗೆ ಅದಕ್ಕೆ ಸಂಪೂರ್ಣ ಶಕ್ತಿ ತುಂಬಿದಾಗ ಮಾತ್ರ ರಾಜಕೀಯ ನಾಯಕತ್ವ ಯಶಸ್ವಿಯಾಗುತ್ತದೆ. ಸ್ವಾತಂತ್ರ್ಯ ಪಡೆದ ಬಳಿಕ […]

ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ಸ್ಥಗಿತ, ಜಿಲ್ಲಾಧಿಕಾರಿಗೆ ಮತ್ತೆ ದೂರು

ಕುಂದಾಪುರ: ಬೀಜಾಡಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭ ಮಾಡುವುದಕ್ಕೆ , ಅನೇಕ ಬಾರಿ ನಡೆದ ಹೋರಾಟದ ಫಲವಾಗಿ ಫೆ.6 ರಂದು ಕಾಮಗಾರಿ ಕೈಗೆತ್ತಿಕೊಂಡಿದ್ದು ನವಯುಗ ಕಂಪನಿ ಕಾರ್ಮಿಕರ ಮುಷ್ಕರದಿಂದಾಗಿ ಪುನಃ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಂತೆ ಬುಧವಾರ ಬೀಜಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ನೂತನ ಜಿಲ್ಲಾಧಿಕಾರಿ ಯವರಿಗೆ ದೂರು ನೀಡಿ ಸ್ಥಳೀಯ ಸಮಸ್ಯೆಗಳನ್ನು ಮನದಟ್ಟು ಮಾಡಿ  ಮನವಿ ಸಲ್ಲಿಸಲಾಗಿದೆ.      ಬೀಜಾಡಿ ಸರ್ವಿಸ್  ರಸ್ತೆ ಹೋರಾಟ ಸಮಿತಿ ಸಂಚಾಲಕ ರಾಜು ಬೆಟ್ಟಿನಮನೆ ಮನವಿ […]

ಅಂತೂ ಇಂತೂ ಭಾರತದ ಒತ್ತಡಕ್ಕೆ ಮಣಿಯಿತು ಪಾಕ್: ನಾಳೆ ಅಭಿನಂದನ್ ಬಿಡುಗಡೆ

ಪಾಕಿಸ್ತಾನದ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದೆ. ಭಾರತ ಮತ್ತು ಅಂತರಾಷ್ಟ್ರಿಯ ಸಮುದಾಯದ ಬಲವಾದ ಒತ್ತಡಕ್ಕೆ ಅಂತಿಮವಾಗಿ ಮಣಿದ ಪಾಕಿಸ್ತಾನ, ಅಭಿನಂದನ್ ಅವರನ್ನು ಬಿಡುಗಡೆಮಾಡಲು ನಿರ್ಧರಿಸಿದೆ. “ನಮ್ಮ ವಶದಲ್ಲಿರುವ ಅಭಿನಂದನ್ ಸುರಕ್ಷಿತವಾಗಿದ್ದಾರೆ.ಅವರನ್ನು ಮರಳೀ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಇಬ್ರಾನ್ ಖಾನ್, ಪಾಕಿಸ್ತಾನದ ವಿದೇಶಾಂಗ ಸಚಿವೆ ಮೊಹಮ್ಮದ್ ಖುರೇಶಿ ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದಾರೆ.

ಹಿರಿಯಡಕ: ಕಾಲೇಜು ವಾರ್ಷಿಕೋತ್ಸವ ಸಮಾರಂಭ

 ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಫೆ.26 ರಂದು ನಡೆಯಿತು.  ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ,ವೀರಯೋಧರ ತ್ಯಾಗ, ಬಲಿದಾನದ ಸ್ಮರಣೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು. ನಿವೃತ್ತ ಬಿ.ಎಸ್.ಎಫ್. ಯೋಧ ಕುಶ ಸಾಲ್ಯಾನ್ ತಮ್ಮ ಸೇನಾ ಅನುಭವವನ್ನು ಹಂಚಿಕೊಂಡರು.      ಪ್ರಧಾನ ಭಾಷಣಕಾರರಾಗಿ  ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿಯ ಪ್ರಾಂಶುಪಾಲ ಡಾ. ಪಿ. ಬಿ. ಪ್ರಸನ್ನ ಮಾತನಾಡಿ,  ಭಾಷೆ, ಸಾಹಿತ್ಯದ ಜ್ಞಾನ ಬದುಕಿಗೆ ಅವಶ್ಯಕವೆಂದು […]