ವಿದ್ಯಾರ್ಥಿಗಳೇ ಗಮನಿಸಿ: ಫೆ.24 ರಿಂದ ಮುಕ್ತ ವಿ.ವಿ ವಾರಾಂತ್ಯದ ತರಗತಿ

ಉಡುಪಿ, : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಉಡುಪಿ ಇಲ್ಲಿ 2018-19 ನೇ ಸಾಲಿನಲ್ಲಿ ಪ್ರವೇಶಾತಿ ಹೊಂದಿರುವ ಪ್ರಥಮ ಬಿ.ಎ ಮತ್ತು ಬಿ.ಕಾಂ., ವಿದ್ಯಾರ್ಥಿಗಳಿಗೆ ಫೆ.24 ರಿಂದ ವಾರಾಂತ್ಯದ ತರಗತಿಗಳನ್ನು ನಗರದ ಎಂ.ಜಿ.ಎಂ ಕಾಲೇಜ್ ನಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಮನಿಸಿ: ಫೆ. 25 ರಂದು ಉಡುಪಿಯಲ್ಲಿದೆ ಉಚಿತ ಆರೋಗ್ಯ ಶಿಬಿರ

ಉಡುಪಿ :ಎನ್.ಪಿ.ಸಿ.ಡಿ.ಸಿ.ಎಸ್ ಹಾಗೂ ಎನ್.ಟಿ.ಸಿ.ಪಿ ಕಾರ್ಯಕ್ರಮದಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಫೆ. 25 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಲಿದೆ.ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಉಡುಪಿ:ಲೋಕಾಯುಕ್ತ ಕಾಯ್ದೆಯಡಿ ದೂರು ಸಲ್ಲಿಸಬೇಕೇ? ಹಾಗಾದ್ರೆ ಈ ಸುದ್ದಿ ಓದಿ

ಉಡುಪಿ: ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು.      ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳನ್ನು ಫೆ.26 ರಂದು ಬೆಳಿಗ್ಗೆ 11 ರಿಂದ 12.30 ರವರೆಗೆ ಬೈಂದೂರು ಪ್ರವಾಸಿ ಮಂದಿರ, ಫೆ. 27 ರಂದು ಬೆಳಿಗ್ಗೆ 11 ರಿಂದ 12.30 ರವರೆಗೆ ಕಾರ್ಕಳ ಪ್ರವಾಸಿ ಮಂದಿರ ಹಾಗೂ ಫೆ. 28 ರಂದು ಬೆಳಿಗ್ಗೆ 11 ರಿಂದ 12.30 […]

ಉಡುಪಿ :ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಬಾಕಿಯಿರುವವರಿಗೆ ವಿಶೇಷ ಕಾರ್ಯಕ್ರಮ

ಉಡುಪಿ : ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ಹಿನ್ನೆಲೆಯಲ್ಲಿ, ಇನ್ನೂ ಕೂಡಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಬಾಕಿ ಇರುವ ಮತದಾರರು ಅದರಲ್ಲೂ ಪ್ರಮುಖವಾಗಿ ಯುವ ಹಾಗೂ ವಿಕಲಚೇತನ ಮತದಾರರಿಗೆ ತಮ್ಮ ಹೆಸರನ್ನು ನೊಂದಾಯಿಸಲು ಅನುಕೂಲವಾಗುವಂತೆ ಫೆ 23 ಮತ್ತು 24 ಹಾಗೂ ಮಾರ್ಚ್ 2 ಮತ್ತು 3 ರಂದು ಜಿಲ್ಲೆಯಲ್ಲಿರುವ ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ವಿಶೇಷ ಆಂದೋಲನಾ […]

ಫೆ.23:ಮಾಧಕ ವ್ಯಸನ ಮುಕ್ತ, ಸಮಾಜದೆಡೆಗೆ ಕಾಲ್ನಡಿಗೆ ಜಾಥಾ

ಕುಂದಾಪುರ: ಪಟ್ಟಣಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲೂ ಇಂದು ಯುವಕರು ಮಾಧಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಗಾಂಜಾ ಮುಂತಾದ ಸಾಮಾಜಿಕ ಕೆಡುಕುಗಳಿಂದ ಯುವ ಸಮಾಜ ನಲುಗಿ ಹೋಗಿದೆ. ಮಾಧಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಬೆಳಿಗ್ಗೆ 9.30ಕ್ಕೆ ಗಂಗೊಳ್ಳಿಯಲ್ಲಿ “ನಮ್ಮ ನಡಿಗೆ ಮಾಧಕ ಮುಕ್ತ ಸಮಾಜದೆಡೆಗೆ” ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಐಎಸ್‍ಓ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಶಾರುಖ್ ಹೇಳಿದರು. ಅವರು  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಗಂಗೊಳ್ಳಿಯ ತೌಹಿದ್ ಕಾಲೇಜಿನಿಂದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನವರೆಗೆ ಗಂಗೊಳ್ಳಿಯ […]