ವಿದ್ಯಾರ್ಥಿಗಳೇ ಗಮನಿಸಿ: ಫೆ.24 ರಿಂದ ಮುಕ್ತ ವಿ.ವಿ ವಾರಾಂತ್ಯದ ತರಗತಿ

ಉಡುಪಿ, : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಉಡುಪಿ ಇಲ್ಲಿ 2018-19 ನೇ ಸಾಲಿನಲ್ಲಿ ಪ್ರವೇಶಾತಿ ಹೊಂದಿರುವ ಪ್ರಥಮ ಬಿ.ಎ ಮತ್ತು ಬಿ.ಕಾಂ., ವಿದ್ಯಾರ್ಥಿಗಳಿಗೆ ಫೆ.24 ರಿಂದ ವಾರಾಂತ್ಯದ ತರಗತಿಗಳನ್ನು ನಗರದ ಎಂ.ಜಿ.ಎಂ ಕಾಲೇಜ್ ನಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.