ಫೆ.23:ಮಾಧಕ ವ್ಯಸನ ಮುಕ್ತ, ಸಮಾಜದೆಡೆಗೆ ಕಾಲ್ನಡಿಗೆ ಜಾಥಾ

ಕುಂದಾಪುರ: ಪಟ್ಟಣಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲೂ ಇಂದು ಯುವಕರು ಮಾಧಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯಪಾನ, ಧೂಮಪಾನ, ಗಾಂಜಾ ಮುಂತಾದ ಸಾಮಾಜಿಕ ಕೆಡುಕುಗಳಿಂದ ಯುವ ಸಮಾಜ ನಲುಗಿ ಹೋಗಿದೆ. ಮಾಧಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಬೆಳಿಗ್ಗೆ 9.30ಕ್ಕೆ ಗಂಗೊಳ್ಳಿಯಲ್ಲಿ “ನಮ್ಮ ನಡಿಗೆ ಮಾಧಕ ಮುಕ್ತ ಸಮಾಜದೆಡೆಗೆ” ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಐಎಸ್‍ಓ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಶಾರುಖ್ ಹೇಳಿದರು.

ಅವರು  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಗಂಗೊಳ್ಳಿಯ ತೌಹಿದ್ ಕಾಲೇಜಿನಿಂದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನವರೆಗೆ ಗಂಗೊಳ್ಳಿಯ ವಿವಿಧ ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಲಿದ್ದು, ತೌಹಿದ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜಾಥಾ ಉದ್ಘಾಟನೆಗೊಳ್ಳಲಿದೆ ಎಂದರು.

ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯ್ಕ್ ಜಾಠಾ ಉದ್ಘಾಟಿಸಲಿದ್ದು, ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಡಿವೈಎಸ್ಪಿ ಬಿಪಿ ದಿನೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಮನೋರೋಗ ತಜ್ಞ ಡಾ. ಪಿವಿ ಭಂಡಾರಿ, ಐಎಸ್‍ಓ ಕ್ಯಾಂಪಸ್ ಕಾರ್ಯದರ್ಶಿ ಡಾ. ಫಹೀಮ್ ಅಬ್ದುಲ್ಲಾ, ಕೋಸ್ಟಲ್ ಮಿರರ್ ಮೀಡಿಯಾದ ಪ್ರಶಾಂತ ಮೊಗವೀರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅರ್ಫಾನ್, ಅಬ್ದುಲ್ ಹನಾನ್ ಇದ್ದರು.