ಬಜೆ ಜಲಾಶಯದಲ್ಲಿ ನೀರಿದ್ದರೂ ಕೃಷಿಗೆ ನೀರು ಕೊಡುತ್ತಿಲ್ಲ: ಕುದಿ ಶ್ರೀನಿವಾಸ ಭಟ್‌

ಉಡುಪಿ: ಕಳೆದ 22 ದಿನಗಳಿಂದ ರೈತರ ಬೆಳೆಗಳಿಗೆ ನೀರಿಲ್ಲ. ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಿಸಿಲಿನ ತಾಪಕ್ಕೆ ರೈತರ ಬೆಳೆ ಒಣಗಿ, ಅವರ ಬದುಕೇ ನಾಶವಾಗುತ್ತಿದೆ. ಬಜೆ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿದ್ದರೂ ಕೃಷಿಗೆ ನೀರು ಕೊಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯಡಕ ನದಿಪಾತ್ರದ ರೈತರ ವಿದ್ಯುತ್‌ ಪಂಪ್‌ ಸೆಟ್‌ಗಳನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ವಾರದಲ್ಲಿ ಎರಡು ದಿನ ಕೃಷಿ […]

ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ; ಅಮಿತ್ ಶಾಗೆ ಬೆಂಗಳೂರಿನಲ್ಲಿ ಸನ್ಮಾನ

ಉಡುಪಿ: ಮೀನುಗಾರರ ಬಹುದಶಕಗಳ ಬೇಡಿಕೆಯಾಗಿದ್ದ ಪತ್ಯೇಕ ಮೀನುಗಾರಿಕಾ ಸಚಿವಾಲಯದ ಮನವಿಗೆ ಸ್ಪಂದಿಸಿ ಈ ಬಾರಿ ಬಜೆಟ್ನಲ್ಲಿ ಘೋಷಿಸಿದ ಕೇಂದ್ರ ಸರಕಾರದ ಪರವಾಗಿ ಭಾರತೀಯಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರವರನ್ನು ಅಖಿಲ ಭಾರತೀಯ ಮೀನುಗಾರರ ವೇದಿಕೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅಖಿಲ ಭಾರತ ಮೀನುಗಾರರ ವೇದಿಕೆಯ ನೇತೃತ್ವದಲ್ಲಿಕೇಂದ್ರ ಸರಕಾರಕ್ಕೆ ಮೀನುಗಾರರ ವಿವಿಧ ಬೇಡಿಕೆಗಳ ಬಗ್ಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಬಜೆಟ್ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಿ 750 ಕೋಟಿಅನುದಾನವನ್ನು […]

ಪ್ರಶಸ್ತಿ ಮೊತ್ತವನ್ನು ಮಡಿದ ಸೈನಿಕರ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದ ವೆಂಕಟರಮಣ ಪಿತ್ರೋಡಿ

ಉಡುಪಿ : 17.2.2019 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಅಂಗಳದಲ್ಲಿ ಜರುಗಿದ 40 ವರ್ಷಕ್ಕಿಂತ ಮೇಲ್ಪಟ್ಟ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟ ಸೌತ್ ಸ್ಟಾರ್ ಟ್ರೋಫಿಯನ್ನು ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ)ಪಡೆಯಿತು.ಈ ಪಂದ್ಯಾಕೂಟದಲ್ಲಿ 90 ರ ದಶಕದ ಶ್ರೇಷ್ಠ ತಂಡಗಳಾದ ಪಡುಬಿದ್ರಿ ಫ್ರೆಂಡ್ಸ್, ವೆಂಕಟರಮಣ ಪಿತ್ರೋಡಿ, ನೇತಾಜಿ ಸ್ಪೋರ್ಟ್ಸ್ ಕ್ಲಬ್,ಕೋಸ್ಟಲ್ ಮಲ್ಪೆ,ಸೌತ್ ಸ್ಟಾರ್ ಅಂಬಲಪಾಡಿ,ಕುತ್ಪಾಡಿ ಫ್ರೆಂಡ್ಸ್ ಹಾಗೂ ಮಿಷನ್ ಕಂಪೌಂಡ್ ಉಡುಪಿ ಸಹಿತ 7 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಮೊದಲು ಬ್ಯಾಟಿಂಗ್ ಮಾಡಿ ಸತೀಶ್.ಜಿ ಮಲ್ಪೆ ಯವರ ಅಬ್ಬರದ […]

ನೆಲ್ಲಿಕಾರಿನ ಈ ಪಂಡಿತರ ಮನೆ ನೀವು ನೋಡಲೇಬೇಕು: ಓಲ್ಡ್ ಮನೆ, ಆದ್ರೂ ಸಖತ್ ಬೋಲ್ಡ್, ಗತ ನೆನಪುಗಳೇ ಇಲ್ಲಿ ಗೋಲ್ಡ್

ಕೆಲವರಿಗೆ ಹಳೆಯ ಮನೆ, ಹಳೆಯ ವಸ್ತು ಹಾಗೂ ಹಳೆಯ ದಿನಗಳ ವೈಭವಗಳನ್ನು ಮೆಲುಕು ಹಾಕುವ ಖಯಾಲಿ ಜಾಸ್ತಿ. ಓಲ್ಡ್ ಈಸ್ ಗೋಲ್ಡ್ ಎಂದರೆ ಕೆಲವರು ಬೋಲ್ಡ್ ಆಗುತ್ತಾರೆ. ನಿಜಕ್ಕೂ ಓಲ್ಡ್ ಈಸ್ ಗೋಲ್ಡ್ ಎನ್ನುವ ಮಾತಿನ ಅರ್ಥ ಗೊತ್ತಾಗಬೇಕಿದ್ದರೆ ನೀವು ನೆಲ್ಲಿಕಾರಿನ ಪಂಡಿತ ಮನೆಗೊಮ್ಮೆ ಬರಬೇಕು.ಇಲ್ಲಿನ ಹಳೆ ವೈಭವಗಳಲ್ಲಿ ಒಂದಷ್ಟು ಹೊತ್ತು ಕಳೆದುಹೋಗಬೇಕು. ಬನ್ನಿ ಹಾಗಾದ್ರೆ ನಮ್ಮದೇ ಆಸುಪಾಸಿನಲ್ಲಿರುವ ಈ ಪಂಡಿತರ ಮನೆಯ ಸ್ಪೆಷಾಲಿಟಿ ಏನು?ಅಂತೆಲ್ಲಾ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಜಸ್ಟ್ ಓದಿ. ಪಂಡಿತರ ಮನೇಲಿ ಒಂದು […]

ಉಡುಪಿ ಜಿಲ್ಲೆಯ ಸಂಪೂರ್ಣ ಆಡಳಿತ ಈಗ ಮಹಿಳೆಯರ ಕೈಯ್ಯಲ್ಲಿ

ಉಡುಪಿ:ಉಡುಪಿ ಜಿಲ್ಲೆಯ ಸಂಪೂರ್ಣ ಆಡಳಿತ ಮಹಿಳೆಯರ ಕೈಯ್ಯಲ್ಲಿದೆ. ಉಡುಪಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಮಹಿಳಾ ಶಕ್ತಿಯ ಮೇಲೆ ನಿಂತಿದೆ. ಜಿಲ್ಲಾಧಿಕಾರಿ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ , ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಸೇರಿದಂತೆ ಜಿಲ್ಲೆಯ ಆಡಳಿತ ಸೂತ್ರವೆಲ್ಲಾ ಮಹಿಳಾ ಮಣಿಗಳ ಕೈಯ್ಯಲ್ಲೇ ಇದೆ. ಹೌದು, ಉಡುಪಿ ಜಿಲ್ಲೆಯಲ್ಲೀಗ ಮಹಿಳಾ ಸಾಮ್ರಾಜ್ಯ. ಜಿಲ್ಲಾಧಿಕಾರಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ನ ಮುಖ್ಯ   ಕಾರ್ಯನಿರ್ವಾಹಣಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರದ ಆಡಳಿತ ಮತ್ತು […]