ಭೂಗತ ಪಾತಕಿ ರವಿ ಪೂಜಾರಿ ಎರೆಸ್ಟ್! ರಾಜಕಾರಣಿ, ಉದ್ಯಮಿಗಳ ನಿದ್ದೆಗೆಡಿಸಿದ ಪಾತಕಿ ಕೊನೆಗೂ ಅಂದರ್

ಉಡುಪಿ: ಕಳೆದ 15 ವರ್ಷದಿಂದ ವಿದೇಶದಲ್ಲಿ ತಲೆಮಾರಿಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಇಂದು ಸಂಜೆ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಮಲ್ಪೆಯ ನಿವಾಸಿ ಪಾತಕಿ ರವಿ ಪೂಜಾರಿ ಕಳೆದ 15 ವರ್ಷದಿಂದ ದುಬೈ, ಆಸ್ಟ್ರೇಲಿಯಾ, ಆಫ್ರಿಕಾ ಸೇರಿದಂತೆ ವಿದೇಶಗಳಲ್ಲಿ ತಲೆ ಮಾರಿಸಿಕೊಂಡಿದ್ದ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿದೇಶದಲ್ಲಿಯೇ ಇದ್ದುಕೊಂಡು ಉದ್ಯಮಿ, ರಾಜಕಾರಣಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಭೂಗತವಾಗಿದ್ದುಕೊಂಡೆ ಕ್ರಿಮಿನಲ್ ಚಟುವಟಿಕೆಗಳನ್ನು […]

ನಾಪತ್ತೆಯಾಗಿರುವ ಏಳು ಮೀನುಗಾರರ ಪೈಕಿ ಇಬ್ಬರ ಮೊಬೈಲ್ ರಿಂಗ್ ಆಯಿತು!

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 46 ದಿನಗಳು ಕಳೆದಿದ್ದು, ಈ ಮಧ್ಯೆ ಎರಡು ಮೀನುಗಾರರ ಮೊಬೈಲ್ ರಿಂಗ್ ಆಗಿದೆ ಎಂಬ ಸುದ್ದಿಕೇಳಿ ಬಂದಿದೆ. ಹೌದು, ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಪೈಕಿ ಉತ್ತರ ಕನ್ನಡ ಜಿಲ್ಲೆಯ ರವಿ ಮಂಕಿ ಹಾಗೂ ಲಕ್ಷಣ್ ಎಂಬುವ ಮೀನುಗಾರರ ಮೊಬೈಲ್ ಎರಡು ಬಾರಿ ರಿಂಗ್ ಆಗಿದೆ ಎಂದು ಮನೆಯವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. […]

ಪರಿಸರ ಉಳಿಸುವ ಪ್ರಜ್ಞೆ ಮನೆಯಿಂದಲೇ ಆರಂಭವಾಗಬೇಕು: ಸಿ.ಎಂ.ಜೋಷಿ

ಉಡುಪಿ: ಪರಿಸರವನ್ನು ಹೇಗೆ ಉಳಿಸಬೇಕು, ಬೆಳೆಸಬೇಕೆಂಬ ಪ್ರಜ್ಞೆ ಶಾಲಾ ಮಟ್ಟದಿಂದಲೇ ಶುರುವಾಗಿದ್ದರೂ, ಪರಿಸರ ಉಳಿಸುವ ಪ್ರಜ್ಞೆಯು ಮನೆಯಿಂದಲೇ ಶುರುವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ. ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಇವರ ಸಹಯೋಗದಲ್ಲಿ, ರಜತಾದ್ರಿಯ ಅಟಲ್ ಬಿಹಾರಿ […]

ಫೆ. 3: ಉಡುಪಿಯಲ್ಲಿ ‘ಸಿಂಡ್‌ ನಿವಾಸ್‌ ಎಕ್ಸ್ಪೋ ‘

ಉಡುಪಿ: ಸಿಂಡಿಕೇಟ್ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2ರಿಂದ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಫೆ. 3ರ ಬೆಳಗ್ಗೆ 10ರಿಂದ ಸಂಜೆ 7ರ ತನಕ ‘ಸಿಂಡ್‌ ನಿವಾಸ್‌  ‘ (ಬೃಹತ್‌ ಗೃಹ ಸಾಲ ಮೇಳ) ಆಯೋಜಿಸಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಬಿಲ್ಡರ್‌ಗಳು  ಜಿಲ್ಲೆಯ ಪ್ರತಿಷ್ಠಿತ ಬಿಲ್ಡರ್‌ಗಳಾದ ಬಾಲಾಜಿ ವೆಂಚರ್, ಡಾ| ಬಿ.ಆರ್‌. ಶೆಟ್ಟಿ ಮೆಡೋವರ್, ಗ್ರಾಸ್‌ಲ್ಯಾಂಡ್ಸ್‌, ಹೈಪೊೖಂಟ್, ಇಮೇಜ್‌ ಬಿಲ್ಡರ್ ಆ್ಯಂಡ್‌ ಡೆವಲಪರ್, ಜಾನ್‌ ಕನ್‌ಸ್ಟ್ರಕ್ಷನ್‌, ಖೈನ್‌ ಪ್ರಾಪರ್ಟೀಸ್‌, ಕಲ್ಕೂರ, ನಿಸ್ಸಿ ಇನ್ಫಿನಿಟಿ, ಸಾಯಿರಾಧಾ ಡೆವಲಪರ್, ಎಸ್‌.ಎಸ್‌. […]

ಮಿಂಚಿನ ಕಣ್ಣೋಟದಲ್ಲೇ ಕಾಡ್ತಾರೆ ಈ ಯಕ್ಷ ಕಲಾವಿದ: ಯಕ್ಷಲೋಕದಲ್ಲಿ “ಅಕ್ಷಯ” ಧೀಂಗಿಣ

ಇವರ ಕಣ್ಣೋಟ ನೋಡಿದರೆ ಯಕ್ಷಾಭಿಮಾನಿಗಳು ಥ್ರಿಲ್ಲಾಗುತ್ತಾರೆ. ರಂಗದಲ್ಲಿ ಕುಣಿದರೆ, ಮಾತನಾಡಿದರೆ ಒಂದು ಕ್ಷಣ ನಿಬ್ಬೆರಗಾಗಿ ಇವರ ಅಭಿನಯದ ಭಾವ-ಭಂಗಿಯಲ್ಲೇ ಕಳೆದುಹೋಗುತ್ತಾರೆ ಯಕ್ಷ ಪ್ರೇಮಿಗಳು, ಯಾರಪ್ಪ ಈ ಕಲಾವಿದ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ,ಮೂಡಬಿದ್ರೆಯ ಅಕ್ಷಯ್, ಹೌದು ಇವರೇ ಪ್ರಸ್ತುತ ಕಟೀಲು ಮೇಳದಲ್ಲಿ ಮಿಂಚುತ್ತಿರುವ, ಸ್ತ್ರಿವೇಷದಲ್ಲಿ ಸೈ ಎನಿಸಿಕೊಂಡಿರುವ ಯುವ ಕಲಾವಿದ. ಯಕ್ಷ ಧೀಂಗಿಣ.ಬದುಕಿಗೆ ತೋರಣ: ದಕ್ಷಯಜ್ಙದ ದಾಕ್ಷಾಯಿಣಿ, ಅಂಬೆ, ವಸ್ತ್ರಾಪಹಾರದ ದ್ರೌಪದಿ, ಚಂದ್ರಮತಿ, ಮಾನಿಷಾದದ ಸೀತೆ, ದೇವಿಮಹಾತ್ಮೆಯ ದೇವಿ, ಮಾಯಾ ಶೂರ್ಪನಖಿ, ಮಾನಿಷಾದದ ಸೈರಿಣಿ, ಪುನಃ […]