ಉಡುಪಿ: ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2ರಿಂದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಫೆ. 3ರ ಬೆಳಗ್ಗೆ 10ರಿಂದ ಸಂಜೆ 7ರ ತನಕ ‘ಸಿಂಡ್ ನಿವಾಸ್ ‘ (ಬೃಹತ್ ಗೃಹ ಸಾಲ ಮೇಳ) ಆಯೋಜಿಸಲಾಗಿದೆ.
ಜಿಲ್ಲೆಯ ಪ್ರತಿಷ್ಠಿತ ಬಿಲ್ಡರ್‌ಗಳು
ಜಿಲ್ಲೆಯ ಪ್ರತಿಷ್ಠಿತ ಬಿಲ್ಡರ್‌ಗಳಾದ ಬಾಲಾಜಿ ವೆಂಚರ್, ಡಾ| ಬಿ.ಆರ್. ಶೆಟ್ಟಿ ಮೆಡೋವರ್, ಗ್ರಾಸ್‌ಲ್ಯಾಂಡ್ಸ್, ಹೈಪೊೖಂಟ್, ಇಮೇಜ್ ಬಿಲ್ಡರ್ ಆ್ಯಂಡ್ ಡೆವಲಪರ್, ಜಾನ್ ಕನ್‌ಸ್ಟ್ರಕ್ಷನ್, ಖೈನ್ ಪ್ರಾಪರ್ಟೀಸ್, ಕಲ್ಕೂರ, ನಿಸ್ಸಿ ಇನ್ಫಿನಿಟಿ, ಸಾಯಿರಾಧಾ ಡೆವಲಪರ್, ಎಸ್.ಎಸ್. ಪ್ರಾಪರ್ಟೀಸ್ ಪ್ರೈ.ಲಿ., ಸುರಭಿ ಬಿಲ್ಡರ್ ಆ್ಯಂಡ್ ಡೆವಲಪರ್ ಎಕ್ಸ್ಪೋ ದಲ್ಲಿ ಭಾಗವಹಿಸಲಿದ್ದಾರೆ.
ತ್ವರಿತ ಸಾಲ – ದಾಖಲೆಗಳು
ಗುರುತು ಪತ್ರ (ಪಾನ್ ಕಾರ್ಡ್/ಆಧಾರ್ ಕಾರ್ಡ್/ಮತದಾನ ಚೀಟಿ/ ಪಾಸ್‌ಪೋರ್ಟ್ ಪ್ರತಿ), 3 ವರ್ಷದ ಐಟಿ ರಿಟರ್ನ್ ಫಾರ್ಮ್, 16/6 ತಿಂಗಳ ಸಂಬಳ ಸ್ಲಿಪ್ ಹಾಜರುಪಡಿಸಿದರೆ ತ್ವರಿತ ಸಾಲ ಮಂಜೂರಾತಿಗೊಳ್ಳಲಿದೆ.
ವಿಶೇಷ ಆಕರ್ಷಣೆ
ಉಚಿತ ಪ್ರವೇಶ, ಸಂಸ್ಕರಣಾ ಶುಲ್ಕ, ಜಾಮೀನಿನ ಆವಶ್ಯಕತೆ ಇರುವುದಿಲ್ಲ. ಪೂರ್ವ ಪಾವತಿ ದಂಡವಿಲ್ಲ. ಸಾಲ ನಿರ್ವಹಣೆ, ಟಾಪ್‌ಅಪ್ ಸೌಲಭ್ಯ, ಪಿಎಎಂ, ವಿ.ವೈ. ಯೋಜನೆಯಡಿ 2.67 ಲ.ರೂ. ವರೆಗೆ ಬಡ್ಡಿ ಅನುದಾನ, ಆದಾಯ ತೆರಿಗೆ ವಿನಾಯಿತಿ, 30 ವರ್ಷಗಳ ವರೆಗೆ ಗರಿಷ್ಠ ಮರುಪಾವತಿ ಅವಧಿ, ಗುಪ್ತ ಶುಲ್ಕಗಳು ಇರುವುದಿಲ್ಲ. ಪ್ರತೀ ಲ.ರೂ.ಗೆ ಇಎಂಐ 787 ರೂ. ಇರುತ್ತದೆ ಎಂದು ಬ್ಯಾಂಕಿನ ಪ್ರಕಟನೆ ತಿಳಿಸಿದೆ.