Day: January 29, 2019
-
ಮರಳು ಅಭಾವಕ್ಕೆ ಉಡುಪಿ ಶಾಸಕರೇ ಕಾರಣ: ವಿಶ್ವನಾಥ ಪೇತ್ರಿ ಆರೋಪ
ಉಡುಪಿ: ಜಿಲ್ಲೆಯ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಪರವಾನಗಿ ನೀಡಬೇಕೆಂದು ಒತ್ತಾಯಿಸಿಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ತಲ್ಲೂರ್ ಮಾತನಾಡಿ, ನಾವು ಜಿಲ್ಲಾಡಳಿತ ಅಥವಾ ಗುಲಾಮಗಿರಿಯ ಪರವಾಗಿ ಪ್ರತಿಭಟನೆ ಮಾಡುತ್ತಿಲ್ಲ. ನಮಗೆಆಗಿರುವ ಅನ್ಯಾಯವನ್ನು ಸಚಿವರಿಗೆ ತಿಳಿಸುವ ಉದ್ದೇಶದಿಂದ ಧರಣಿಗೆಕುಳಿತುಕೊಂಡಿದ್ದೇವೆ. ನೀವು ಓರ್ವ ಶಾಸಕರಾಗಿ (ರಘುಪತಿ ಭಟ್)…
-
ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಪೊಲೀಸರು, ಎರಡು ಪ್ರತ್ಯೇಕ ಧರಣಿನಿರತ ಗುಂಪುಗಳ ನಡುವೆ ಮಾತಿನ ಚಕಮಕಿ
ಉಡುಪಿ: ಜಿಲ್ಲಾಧಿಕಾರಿ ಕಚೇರಿಯ ಎದುರು ಇಂದು ಎರಡು ಪ್ರತ್ಯೇಕ ಪ್ರತಿಭಟನೆಗಳು ನಡೆದಿದ್ದು, ಇದು ಪ್ರತಿಭಟನಾಕಾರರು ನಡುವೆ ಮಾತಿನ ಸಮರಕ್ಕೂ ವೇದಿಕೆಯಾಯಿತು. ಮರಳು ಸಮಿತಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದರೆ, ಅವರ ಪ್ರತಿಭಟನೆಯ ಪಕ್ಕದಲ್ಲೇ ಮರಳು ಪರವಾನಗಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೊಯ್ಗೆ ದೋಣಿ ಕಾರ್ಮಿಕರ ಸಂಘದ ವತಿಯಿಂದ ಧರಣಿ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ನಗರಸಭೆ ಸದಸ್ಯರೊಬ್ಬರು ಕಾರನ್ನು ತಂದು ಪ್ರತಿಭಟನೆ ಮಾಡುವ ಸ್ಥಳದ ಮುಂದೆ ನಿಲ್ಲಿಸಿದರು. ಆಗ ಕಾರ್ಮಿಕ…
-
ಮದ್ವೆಯಾದ ಜೋಡಿಗಳಿಗೊಂದು Love ಲಿ ಅವಕಾಶ: ಪ್ರೇಮಿಗಳ ದಿನಾಚರಣೆ, ಉಡುಪಿ ಎಕ್ಸ್ ಪ್ರೆಸ್ ಪೋಟೋ ಸ್ಪರ್ಧೆ
ಇನ್ನೇನು ಪ್ರೇಮಿಗಳ ದಿನಾಚರಣೆ ಹತ್ತಿರಾಗುತ್ತದೆ. ಈ ಪ್ರಯುಕ್ತ ಉಡುಪಿ ಎಕ್ಸ್ ಪ್ರೆಸ್-ಸುದ್ದಿ ಜಾಲತಾಣ Lovely ಜೋಡಿ ಎನ್ನುವ ವಿಶೇಷ ಸ್ಪರ್ಧೆ ಆಯೋಜಿಸಿದೆ. ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಅಥವಾ ಎರೆಂಜ್ಡ್ ಮ್ಯಾರೇಜ್ ಆಗಿ ಆ ಮೇಲೆ ತುಂಬಾ ಪ್ರೀತಿಯಿಂದ ಬಾಳಿ, ಈಗಲೂ ಪ್ರೀತಿ ಅನ್ನೋದು ಮಧುರ ಎನ್ನುವವರಿಗೆ “love ಲಿ ಜೋಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಏನ್ ವಿಷಯ? ನಿಮ್ಮವರ, ನಿಮ್ಮವಳ ಜೊತೆ, ಬದುಕಿನ ಬೇರೆ ಬೇರೆ ಕ್ಷಣಗಳಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೋಗಳನ್ನು ನಮಗೆ ಕಳುಹಿಸಬೇಕು. ಇಬ್ರೂ…
-
ಸಹಕಾರಿ ಕ್ಷೇತ್ರದಿಂದ ರೈತರಿಗೆ ನೇರವಾಗಿ ನೆರವು: ಹೆಚ್.ಡಿ.ರೇವಣ್ಣ
ಉಡುಪಿ: ಕಳೆದ ನಾಲ್ಕೈದು ವರ್ಷದ ಬರಗಾಲದ ಸಂದರ್ಭದಲ್ಲಿ ಹಾಲಿನ ಡೈರಿ ಇರುವುದರಿಂದಲೇ ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ಇಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ ಉಪ್ಪೂರಿನಲ್ಲಿ ನೂತನ 2.5 ಲಕ್ಷ ಲೀಟರ್ ಸಾಮಥ್ರ್ಯದ ಡೇರಿಯ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ರೈತರಿಗೆ ನೇರವಾಗಿ ನೆರವಾಗುವುದು ಸಹಕಾರಿ ಕ್ಷೇತ್ರ. ಹಾಲಿಗೆ ಸರಕಾರದಿಂದ ನೀಡುವ 5 ರೂ ಪ್ರೋತ್ಸಾಹ ಧನವನ್ನು ಇನ್ನು 1 ರೂ ಹೆಚ್ಚಿಸಬೇಕೆಂದು ಸರಕಾರಕ್ಕೆ…
-
ಕರಾವಳಿಗೆ ಪ್ರತ್ಯೇಕ ಮರಳು ನೀತಿ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚೆ- ರಾಜಶೇಖರ ಪಾಟೀಲ್
ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಮರಳುಗಾರಿಕೆ ಕುರಿತಂತೆ ಪ್ರತ್ಯೇಕ ನೀತಿ ರೂಪಿಸಲು ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ ತಿಳಿಸಿದ್ದಾರೆ. ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳು ತೆಗೆಯುತ್ತಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ರೂಪಿಸಿದ ನಿಯಮಗಳು ಈ ಜಿಲ್ಲೆಗೆ ಅನ್ವಯಿಸುವುದಿಲ್ಲ, ಆದ್ದರಿಂದ ಈ ಜಿಲ್ಲೆಗಳ ಪ್ರಾದೇಶಿಕತೆಗೆ ಅನುಗುಣವಾಗಿ ಪ್ರತ್ಯೇಕ ಮರಳು ನೀತಿ ರೂಪಿಸುವಂತೆ ಹಾಗೂ ನಿಯಮಗಳನ್ನು…